Monday, 2 March 2015

ಕಾರ್ಬನ್ ಮತ್ತು ಅದರ ಸಂಯುಕ್ತಗಳು - ೧೦ ನೇ ತರಗತಿ ವಿಜ್ಞಾನ ನೋಟ್ಸ್


05:28 |

 

ಅಧ್ಯಾಯ 12 - ಕಾರ್ಬನ್ ಮತ್ತು ಅದರ ಸಂಯುಕ್ತಗಳು

(ಎ) ಕಾರ್ಬನ್

ಪಠ್ಯ ಪುಸ್ತಕ ಪ್ರಶ್ನೆ ಮತ್ತು ಉತ್ತರಗಳು

I. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಬಹುರೂಪತೆ ಎಂದರೇನು ?

ಧಾತವೊಂದು ಒಂದಕ್ಕಿಂತ ಹೆಚ್ಚಿನ ರೂಪದಲ್ಲಿದ್ದು, ಈ ವಿವಿಧ ರೂಪಗಳು ಬೇರೆ ಬೇರೆ ಭೌತಗುಣಗಳನ್ನು ಆದರೆ ಒಂದೇ ರೀತಿಯ ರಾಸಾಯನಿಕ ಗುಣಗಳನ್ನು ಪ್ರದರ್ಶಿಸುವ

ವಿದ್ಯಮಾನಕ್ಕೆಬಹುರೂಪತೆ ಎಂದು ಕರೆಯಲಾಗುತ್ತದೆ

2.  ಕಾರ್ಬನ್ ನ ಸ್ಫಟಿಕ ಬಹುರೂಪಗಳನ್ನು ಹೆಸರಿಸಿ.

ವಜ್ರ, ಗ್ರ್ಯಾಫೈಟ್.

3.  ಕಾರ್ಬನ್ ಸಂಯುಕ್ತಗಳನ್ನು ಪ್ರತ್ಯೇಕ ರಸಾಯನಶಾಸ್ತ್ರ ಶಾಖೆಯಲ್ಲಿ ಅಧ್ಯಯನ ಮಾಡಲು ಕಾರಣವೇನು ?

ಕಾರ್ಬನ್ ಒಂದು ಅನನ್ಯ ಧಾತು . ಇತರ ಕಾರ್ಬನ್ ಪರಮಾಣುಗಳೊಂದಿಗೆ ಬಲಿಷ್ಟ , ಸ್ಥಿರ ಸಹವೇಲೆನ್ಸಿಯ ಬಂಧವನ್ನು ಉಂಟುಮಾಡುವ ಸಾಮರ್ಥ್ಯ ಕಾರ್ಬನ್ ನ್ನು ಇತರ

ಧಾತುಗಳಿಗಿಂತ ಭಿನ್ನವಾಗಿಸಿದೆ. ಕಾರ್ಬನ್ ಕೆಟನೀಕರಣ, ಟೆಟ್ರಾವೇಲೆನ್ಸಿ ಮತ್ತು ಸಮಾಂಗತೆ ಎಂಬ ವಿಶಿಷ್ಟ ಗುಣಲಕ್ಷಣಗಳಿಂದ ಅಸಂಖ್ಯಾತ ಸಂಖ್ಯೆಯ ಸಂಯುಕ್ತಗಳನ್ನು ಉಂಟು

ಮಾಡುವುದರಿಂದ ಕಾರ್ಬನ್ ಸಂಯುಕ್ತಗಳನ್ನು ಪ್ರತ್ಯೇಕ ರಸಾಯನಶಾಸ್ತ್ರ ಶಾಖೆಯಲ್ಲಿ ಅಧ್ಯಯನ ಮಾಡಲಾಗುತ್ತದೆ.

4. ಕಾರ್ಬನ್ ಇತರ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಅಯಾನಿಕ ಅಥವಾ ಕೋವಲೆಂಟ್ ಸಂಯುಕ್ತಗಳನ್ನು ಉಂಟುಮಾಡುತ್ತದೆಯೆ ?

ಕಾರ್ಬನ್ ಇತರ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಕೋವಲೆಂಟ್ ಸಂಯುಕ್ತಗಳನ್ನು ಉಂಟುಮಾಡುತ್ತದೆ

5. ಕಾರ್ಬನ್ ಪರಮಾಣುವಿನಲ್ಲಿರುವ ಇಲೆಕ್ಟ್ರಾನ್ ಗಳ ಸಂಖ್ಯೆಯನ್ನು ತಿಳಿಸಿ.

ಆರು

6. ಸಾಮಾನ್ಯ ಸ್ಥಿತಿಯಲ್ಲಿ ಕಾರ್ಬನ್ ನ ಇಲೆಕ್ಟ್ರಾನಿಕ್ ವಿನ್ಯಾಸ ಬರೆಯಿರಿ

1s2 2s2 2px1 2py1 2pz0

7. ಉತ್ತೇಜಿತ ಕಾರ್ಬನ್ ನ ಇಲೆಕ್ಟ್ರಾನಿಕ್ ವಿನ್ಯಾಸ ಬರೆಯಿರಿ

1s2 2s1 2px1 2py1 2pz1

8. ಸಾವಯವ ರಸಾಯನಶಾಸ್ತ್ರ ಎಂದರೇನು ?

ಕಾರ್ಬನ್ ಸಂಯುಕ್ತಗಳನ್ನು ಅಧ್ಯಯನ ಮಾಡುವ ರಸಾಯನ ಶಾಸ್ತ್ರದ ಶಾಖೆಯೇ ಸಾವಯವ ರಸಾಯನಶಾಸ್ತ್ರ

9. ರಸಾಯನಶಾಸ್ತ್ರದ ಪ್ರಾಮುಖ್ಯದ ಬಗ್ಗೆ ಕಿರು ಟಿಪ್ಪಣಿಯನ್ನು ಬರೆಯಿರಿ.

ರಸಾಯನಶಾಸ್ತ್ರದ ಶಾಖೆಗಳಲ್ಲಿ ಸಾವಯವ ರಸಾಯನಶಾಸ್ತ್ರವು ಸಕ್ರಿಯವಾದ ಬಹುಮುಖ್ಯ ಕ್ಷೇತ್ರವಾಗಿದೆ. ಇದಕ್ಕೆ ಕಾರಣವೆಂದರೆ ಜೀವರಸಾಯನಶಾಸ್ತ್ರ ಮತ್ತು ಪೆಟ್ರೊ- ರಸಾಯನಶಾಸ್ತ್ರಗಳ ಮಿತ ಇಲ್ಲದ ಉಪಯುಕ್ತತೆ. ಸಾವಯವ ರಸಾಯನಶಾಸ್ತ್ರದ ವ್ಯಾಪ್ತಿ ಅನಂತ. ರಂಗುಗಳು, ಸ್ವಾದಕಾರಕಗಳು, ಮಾರ್ಜಕಗಳು, ಸುವಾಸಿಕಗಳು, ಸೌಂದರ್ಯವರ್ಧಕಗಳು ಇತ್ಯಾದಿ ಸಾವಯವ ಸಂಯುಕ್ತಗಳು ನಮ್ಮ ಜೀವನಕ್ಕೆ ರಂಗು ತಂದಿವೆ ಮತ್ತು ಜೀವನ ಸುಖಮಯವಾಗಿಸಿವೆ.

II  ಬಿಟ್ಟಿರುವ ಸ್ಥಳಗಳನ್ನು ಸೂಕ್ತವಾದ ಉತ್ತರಗಳಿಂದ ತುಂಬಿಸಿ

1. ಕಾರ್ಬನ್ ಸಂಯುಕ್ತಗಳಲ್ಲಿ ಕಂಡುಬರುವ ರಾಸಾಯನಿಕ ಬಂಧದವಿಧ ಸಹವೇಲೆನ್ಸಿಯ ಬಂಧ

2. ಕಾರ್ಬನ್ ನ ವೇಲೆನ್ಸಿ   4

3. ಇತರ ಪರಮಾಣುಗಳೊಂದಿಗೆ ಸಹವೇಲೆನ್ಸಿಯ ಬಂಧಗಳನ್ನು ಏರ್ಪಡಿಸಿ ವಿವಿಧ ಸರಪಣಿಗಳನ್ನುಂಟು ಮಾಡುವ ಕಾರ್ಬನ್ನ ನ ಅನನ್ಯ ಗುಣ ಕೇಟನೀಕರಣ

4. ಕಾರ್ಬನ್ ನ ಅತಿ ಕಠಿಣವಾದ ನೈಸರ್ಗಿಕ ವಸ್ತು ವಜ್ರ

4. ನಿರವಯವ ಸಂಯುಕ್ತಗಳಿಂದ ಸಂಶ್ಲೇಷಿಸಿದ ಮೊದಲ ಸಾವಯವ ಸಂಯುಕ್ತ ಯೂರಿಯಾ

5. ಅಮೋನಿಯಂ ಸಯನೇಟ್ ನಿಂದ ಯೂರಿಯಾವನ್ನು ಸಂಶ್ಲೇಷಿಸಿದ ವಿಜ್ಞಾನಿ ಫ್ರೆಡ್ರಿಕ್ ವೋಲರ್

III. ಈ ಕೆಳಗಿನ ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಸೂಕ್ತ ಉತ್ತರವನ್ನು ಆಯ್ಕೆ ಮಾಡಿ

1. ಫೆಡ್ರಿಕ್ ವೊಲರ್ ತಯಾರಿಸಿದ ಸಾವಯವ ಸಂಯುಕ್ತ __________

ಎ) ಎಣ್ಣೆ (ಬಿ) ಯೂರಿಯಾ (ಸಿ) ಸುಕ್ರೋಸ್ (ಡಿ) ಕ್ಯಾಲ್ಸಿಯಂ ಫಾಸ್ಫೇಟ್

ಉತ್ತರ: (ಬಿ) ಯೂರಿಯಾ

2.  ಕಾರ್ಬನ್ ನ ಅನನ್ಯ ಗುಣ________

ಎ) ಅಯಾನಿಕ ಬಂಧ (ಬಿ) ಅರೆವಾಹಕ (ಸಿ) ಕೇಟನೀಕರಣ, ಚತುರ್ವೇಲೆನ್ಸಿ ಮತ್ತು ಸಮಾಂಗತೆ (ಡಿ) ಸಹವೇಲೇನ್ಸಿ ಬಂಧ

ಉತ್ತರ: (ಸಿ) ಕೇಟನೀಕರಣ, ಚತುರ್ವೇಲೆನ್ಸಿ ಮತ್ತು ಸಮಾಂಗತೆ

3.  ಇವುಗಳಲ್ಲಿ ಸಾವಯವ ಸಂಯುಕ್ತ _________

ಎ) ಕ್ಯಾಲ್ಸಿಯಂ ಕಾರ್ಬೈಡ್ (ಬಿ) ಬೇಕಿಂಗ್ ಸೋಡಾ (ಸಿ) ಕಾರ್ಬನ್ ಡೈಆಕ್ಸೈಡ್ (ಡಿ) ಸಿಟ್ರಿಕ್ ಆಮ್ಲ

ಉತ್ತರ: (ಡಿ) ಸಿಟ್ರಿಕ್ ಆಮ್ಲ

4.  ಇವುಗಳಲ್ಲಿ ಸಾವಯವ ದ್ರಾವಕ

ಎ) ನೀರು (ಬಿ) ಹೈಡ್ರೋಜನ್ ಪರಾಕ್ಸೈಡ್ (ಸಿ) ಹೈಡ್ರೋಕ್ಲೋರಿಕ್ ಆಮ್ಲ (ಡಿ) ಕಾರ್ಬನ್ ಟೆಟ್ರಾಕ್ಲೋರೈಡ್

ಉತ್ತರ: (ಡಿ) ಕಾರ್ಬನ್ ಟೆಟ್ರಾಕ್ಲೋರೈಡ್

5. ಹೈಡ್ರೊಕಾರ್ಬನ್ ಗಳು _____ಗಳ ಸಂಯುಕ್ತಗಳು

ಎ) C,H,O (ಬಿ) C,H (ಸಿ) H, CO2 (ಡಿ) CO2, H2O

ಉತ್ತರ: (ಬಿ) C,H

IV. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಸಾವಯವ ಮತ್ತು ನಿರವಯವ ಸಂಯುಕ್ತ ನಡುವೆ ವ್ಯತ್ಯಾಸ ತಿಳಿಸಿ

ಗುಣಗಳು

ಸಾವಯವ ಸಂಯುಕ್ತ

ನಿರವಯವ ಸಂಯುಕ್ತ

ಭೌತ ಸ್ಥಿತಿ

ಸಾಮಾನ್ಯವಾಗಿ ಅನಿಲ, ದ್ರವ ಮತ್ತು ಘನ ಸ್ಥಿತಿಯಲ್ಲಿರುತ್ತದೆ

ಸಾಮಾನ್ಯವಾಗಿ ಘನವಸ್ತು ಸ್ಥಿತಿಯಲ್ಲಿರುತ್ತದೆ.

ದ್ರವನ ಬಿಂದು ಮತ್ತು ಕುದಿಯುವ ಬಿಂದು

ದ್ರವನ ಬಿಂದು ಮತ್ತು ಕುದಿಯುವ ಬಿಂದುಗಳು ಕಡಿಮೆ,ಸಾಮಾನ್ಯವಾಗಿ ಆವಿಶೀಲ

ಹೆಚ್ಚಿನ ದ್ರವನ ಬಿಂದು ಮತ್ತು ಕುದಿಯುವ ಬಿಂದುಗಳಿದ್ದು, ಸಾಮಾನ್ಯವಾಗಿ ಆವಿಶೀಲವಲ್ಲ

ರಾಸಾಯನಿಕ ಬಂಧದ ವಿಧ

ಸಾಮಾನ್ಯವಾಗಿ ಸಹವೇಲೆನ್ಸಿಯ ಬಂಧಗಳಿವೆ.

ಸಾಮಾನ್ಯವಾಗಿ ಅಯಾನಿಕ ಬಂಧಗಳಿವೆ.

ವಿಲೀನತೆ

ಸಾಮಾನ್ಯವಾಗಿ ನೀರಿನಲ್ಲಿ ವಿಲೀನವಾಗುವುದಿಲ್ಲ. ಸಾಮಾನ್ಯವಾಗಿ ಸಾವಯವ ದ್ರಾವಕದಲ್ಲಿ (ಉದಾ: ಆಲ್ಕೋಹಾಲ್ ) ವಿಲೀನವಾಗುತ್ತದೆ.

ಸಾಮಾನ್ಯವಾಗಿ ನೀರಿನಲ್ಲಿ ವಿಲೀನವಾಗುತ್ತದೆ. ಸಾಮಾನ್ಯವಾಗಿ ಸಾವಯವ ದ್ರಾವಕಗಳಲ್ಲಿ ವಿಲೀನವಾಗುವುದಿಲ್ಲ

ದಹ್ಯತೆ

ಸಾಮಾನ್ಯವಾಗಿ ಎಲ್ಲವೂ ಗಾಳಿಯಲ್ಲಿ ಉರಿಯುತ್ತವೆ

ಕೆಲವು ಗಾಳಿಯಲ್ಲಿ ಉರಿಯುತ್ತವೆ

ರಾಸಾಯನಿಕ ಕ್ರಿಯೆಯ ವೇಗ

ರಾಸಾಯನಿಕ ಕ್ರಿಯೆಗಳು ಸಾಮಾನ್ಯವಾಗಿ ನಿಧಾನಗತಿಯಲ್ಲಿ ಜರಗುತ್ತವೆ

ರಾಸಾಯನಿಕ ಕ್ರಿಯೆಗಳು ಸಾಮಾನ್ಯವಾಗಿ ವೇಗವಾಗಿ ಜರಗುತ್ತವೆ

ಸಮಾಂಗತೆ ಮತ್ತು ಅನುರೂಪತೆ

ಸಮಾಂಗತೆ ಮತ್ತು ಅನುರೂಪತೆ ಸಾಮಾನ್ಯವಾಗಿ ಕಂಡುಬರುತ್ತವೆ.

ಸಮಾಂಗತೆ ಮತ್ತು ಅನುರೂಪತೆ ಸಾಮಾನ್ಯವಾಗಿ ಕಂಡು ಬರುವುದಿಲ್ಲ

2. ನಿಮ್ಮ ದೈನಂದಿನ ಜೀವನದಲ್ಲಿ ಬಳಸುವ ಸಾವಯವ ಮತ್ತು ನಿರವಯವ ಸಂಯುಕ್ತಗಳಿಗೆ ತಲಾ ಐದು ಉದಾಹರಣೆ ಕೊಡಿ

ಸಾವಯವ ಸಂಯುಕ್ತ

ನಿರವಯವ ಸಂಯುಕ್ತ

ಸಿಟ್ರಿಕ್ ಆಮ್ಲ ಆಹಾರ ಸಂರಕ್ಷಕವಾಗಿ ಬಳಸಲಾಗುತ್ತದೆ

ಮೀಥೇನ್ ಇಂಧನವಾಗಿ ಬಳಸಲಾಗುತ್ತದೆ

ಸಕ್ಕರೆ ಆಹಾರ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ

ಆಸ್ಪಿರಿನ್ ಔಷಧಿಯಾಗಿ ಬಳಸಲಾಗುತ್ತದೆ

ಈಥೈಲ್ ಆಲ್ಕೋಹಾಲ್ ಮದ್ಯಪಾನೀಯ ಮತ್ತು ಕೆಲವು ಔಷಧಿಗಳನ್ನು ಬಳಸಲಾಗುತ್ತದೆ

ಆಕ್ಟೇನ್ ನ್ನು ವಾಹನ ಇಂಧನವಾಗಿ ಬಳಸಲಾಗುತ್ತದೆ

ಫೀನಾಲ್ ನಂಜುನಿರೋಧಕವಾಗಿ ಬಳಸಲಾಗುತ್ತದೆ

ಅಸಿಟಿಕ್ ಆಮ್ಲವನ್ನು ಉಪ್ಪಿನಕಾಯಿ ಮತ್ತು ಇತರ ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ

ಸೋಡಿಯಂ ಕಾರ್ಬೋನೇಟ್

ಸೋಡಿಯಂ ಬೈಕಾಬ್ರೋನೇಟ್

ಸೋಡಿಯಂ ಕ್ಲೋರೈಡ್

ವಾಟರ್

ಕ್ಯಾಲ್ಸಿಯಂ ಕಾರ್ಬೋನೇಟ್

ಆಮ್ಲಜನಕ

ಪೊಟ್ಯಾಸಿಯಮ್

ಮೇಗ್ನೇಷಿಯಂ

3. ಸಾವಯವ ಸಂಯುಕ್ತಗಳು ಜೀವ ಬಲದ ಪ್ರಭಾವದಿಂದ ಉಂಟಾಗುತ್ತದೆ. ಸರಿಯೇ ತಪ್ಪೇ ಎನ್ನುವುದನ್ನು ವಿವರಿಸಿ.

1828 ರವರೆಗೆ ಜೀವಿಗಳಲ್ಲಿರುವ ಜೀವಬಲದ ಪ್ರಭಾವವಿಲ್ಲದೆ ಸಾವಯವ ಸಂಯುಕ್ತಗಳನ್ನು ಉತ್ಪತ್ತಿ ಮಾಡುವುದು ಸಾಧ್ಯವಿಲ್ಲವೆಂದು ರಸಾಯನ ಶಾಸ್ತ್ರಜ್ಞರು ನಂಬಿದ್ದರು. ಫ್ರೆಢ್ರಿಕ್ ವೋಲರ್ ನ ಯೂರಿಯಾ ಸಂಶ್ಲೇಷಣೆಯು ವಿಜ್ಞಾನಿಗಳ ಆ ನಂಬಿಕೆಯನ್ನು ಹುಸಿ ಮಾಡಿತು.

4. ಆಹಾರದಲ್ಲಿ ಬಳಸುವ ಯಾವುದಾದರೂ ಮೂರು ಸಾವಯವ ಸಂಯುಕ್ತಗಳನ್ನು ಹೆಸರಿಸಿ

ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ ಗಳು ಮತ್ತು ಕೊಬ್ಬುಗಳು

5. ಕೇಟನೀಕರಣವನ್ನು ಉದಾಹರಣೆಗಳೊಂದಿಗೆ ವಿವರಿಸಿ.

ಕಾರ್ಬನ್ ಗೆ ತನ್ನ ಇತರ ಪರಮಾಣುಗಳೊಂದಿಗೆ C-C ಸಹವೇಲೆನ್ಸಿ ಬಂಧವನ್ನೇರ್ಪಡಿಸಿ ಬೃಹತ್ ಅಣುವನ್ನು ಉಂಟುಮಾಡುವ ಅನನ್ಯ ಸಾಮರ್ಥವಿದೆ. ಈ ಗುಣವನ್ನು ಕೇಟನೀಕರಣ ಕರೆಯಲಾಗುತ್ತದೆ. ಸಂಯುಕ್ತಗಳು ನೇರ ಸರಪಳಿ, ಕವಲು ಸರಪಳಿ ಅಥವಾ ಮುಚ್ಚಿದ ಉಂಗುರಾಕಾರದ ಸರಪಣಿಗಳಿಂದ ಮಾಡಲ್ಪಟ್ಟಿರುತ್ತದೆ.

.image

6. ಜೀವ ಬಲ ಸಿದ್ಧಾಂತವನ್ನು ತಿರಸ್ಕರಿಸಲಾಯಿತು ಕಾರಣವೇನು ?

1828 ರವರೆಗೆ ಜೀವಿಗಳಲ್ಲಿರುವ ಜೀವಬಲದ ಪ್ರಭಾವವಿಲ್ಲದೆ ಸಾವಯವ ಸಂಯುಕ್ತಗಳನ್ನು ಉತ್ಪತ್ತಿ ಮಾಡುವುದು ಸಾಧ್ಯವಿಲ್ಲವೆಂದು ರಸಾಯನ ಶಾಸ್ತ್ರಜ್ಞರು ನಂಬಿದ್ದರು. ಫ್ರೆಡ್ರಿಕ್ ವೋಲರನು ಪ್ರಾಣಿಗಳ ಚಯಾಪಚಯ ಕ್ರಿಯಾ ಉತ್ಪನ್ನವಾದ ಯೂರಿಯಾವನ್ನು ತಯಾರಿಸಿದನು. ಅಮೋನಿಯಂ ಸಯನೇಟ್ ನ ಜಲೀಯ ದ್ರಾವಣವನ್ನು ಕಾಸಿದಾಗ ಯೂರಿಯಾ ಉತ್ಪನ್ನವಾಯಿತು. ಇದೇ ಅಜೈವಿಕ ವಸ್ತುವಿನಿಂದ ಪಡೆದ ಮೊದಲ ಸಾವಯವ ಸಂಯುಕ್ತ. ವೋಲರ್ ನ ಯೂರಿಯಾ ಸಂಶ್ಲೇಷಣೆಯ ಕಾರಣ ಜೀವ ಬಲ ಸಿದ್ಧಾಂತವನ್ನು ತಿರಸ್ಕರಿಸಲಾಯಿತು

7. ಸಮಾಂಗತೆ ಎಂದರೇನು ? ಉದಾಹರಣೆ ಕೊಡಿ.

ಒಂದೇ ಅಣುಸೂತ್ರವಿದ್ದು ಬೇರೆ ಬೇರೆ ರಚನಾ ವಿನ್ಯಾಸವನ್ನು ಹೊಂದಿರುವ ಸಾವಯವ ಸಂಯುಕ್ತಗಳಿಗೆ “ಸಮಾಂಗಿಗಳು” ಎಂದು ಕರೆಯಲಾಗುತ್ತದೆ. ಈ ವಿದ್ಯಮಾನಕ್ಕೆ ಸಮಾಂಗತೆ ಕರೆಯಲಾಗುತ್ತದೆ. ಉದಾ: -ಬ್ಯೂಟೇನ್ (C4H10)

image

image

IV. ಹೊಂದಿಸಿ ಬರೆಯಿರಿ.

ಎ ಬಿ

1. ಕಾರ್ಬನ್ ಸಂಯುಕ್ತ - ಎ) ಯೂರಿಯಾ (2)

2. ಮೊದಲು ಸಂಶ್ಲೇಷಿಸಿದ ಸಾವಯವ ಸಂಯುಕ್ತ - ಬಿ) ಅಮೋನಿಯಂ ಸಯನೇಟ್

3. ಕಾರ್ಬನ್ ವಿಶಿಷ್ಟ ಗುಣ - ಸಿ) ಕೇಟನೀಕರಣ (3)

ಡಿ) ಸಾವಯವ ಸಂಯುಕ್ತ

ಇ) ಸಂಕರನ

ಹೆಚ್ಚುವರಿ ಪ್ರಶ್ನೆ ಮತ್ತು ಉತ್ತರಗಳು

1. ಕಾರ್ಬನ್ ಎಂದರೇನು ? ಅದರ ಚಿಹ್ನೆ, ಪರಮಾಣು ಸಂಖ್ಯೆ ಮತ್ತು ಪರಮಾಣು ರಾಶಿ ಸಂಖ್ಯೆ ಬರೆಯಿರಿ.

ಕಾರ್ಬನ್ ಆವರ್ತಕೋಷ್ಟಕದ 14ನೇ ಗುಂಪಿನ ಮೊದಲ ಸದಸ್ಯ. ಇದರ ವೇಲೆನ್ಸ್ ಕಕ್ಷೆಯಲ್ಲಿ ನಾಲ್ಕು ಎಲೆಕ್ಟ್ರಾನ್ ಗಳನ್ನು ಹೊಂದಿದ್ದು ಇದರ ಸಂಯೋಗ ಸಾಮರ್ಥ್ಯ 4 ಮತ್ತು ಇದು ಒಂದು ಲೋಹ

ಪರಮಾಣು ಚಿಹ್ನೆ: - C

ಪರಮಾಣು ಸಂಖ್ಯೆ (Z ): - 06

ಪರಮಾಣು ರಾಶಿ ಸಂಖ್ಯೆ (A): - 12

2. ಚಪಾತಿ ಅಥವಾ ರೊಟ್ಟಿಯನ್ನು ಹೆಚ್ಚು ಕಾಸಿದಾಗ ಅವು ಕರಟುವುದಕ್ಕೆ ಕಾರಣವೇನು ?

ಕಾರ್ಬನ್ ಅಂಶವನ್ನು ಹೊಂದಿರುವುದರಿಂದ ಚಪಾತಿ ಅಥವಾ ರೊಟ್ಟಿಯನ್ನು ಹೆಚ್ಚು ಕಾಸಿದಾಗ ಅವು ಕರಟುವುದು.

3. ಮರಳನ್ನು ಕಾಸಿದಾಗಲೂ ಅದು ಕರಟಿ ಹೋಗುವುದಿಲ್ಲ . ಏಕೆ?

ಮರಳಿನ ಆಣು ಸೂತ್ರ SiO 2 .ಇದು ಕಾರ್ಬನ್ ಅಂಶವನ್ನು ಹೊಂದಿಲ್ಲವಾದ್ದರಿಂದ ಮರಳನ್ನು ಕಾಸಿದಾಗಲೂ ಅದು ಕರಟಿ ಹೋಗುವುದಿಲ್ಲ

4. ಕ್ಯಾಲ್ಸಿಯಂ ಕಾರ್ಬೋನೇಟ್ (CaCO3) ಕಾರ್ಬನ್ ಸಂಯುಕ್ತವಾದರೂ ಕಾಸಿದಾಗ ಕರಟುವುದಿಲ್ಲ ಏಕೆ?

ಕ್ಯಾಲ್ಸಿಯಂ ಕಾರ್ಬೋನೇಟ್ (CaCO3) ಕಾರ್ಬನ್ ಹೊಂದಿರುತ್ತದೆ. ಆದರೆ ಇದು C-C ಮತ್ತು C-H ಬಂಧಗಳನ್ನು ಹೊಂದಿರುವುದಿಲ್ಲವಾದ್ದರಿಂದ ಕಾಸಿದಾಗ ಕರಟುವುದಿಲ್ಲ.

5. ಬಹುರೂಪತೆಯನ್ನು ನಿರೂಪಿಸಿ. ಕಾರ್ಬನ್ ಎರಡು ಬಹುರೂಪಗಳನ್ನು ಹೆಸರಿಸಿ.

ಧಾತವೊಂದು ಒಂದಕ್ಕಿಂತ ಹೆಚ್ಚಿನ ರೂಪದಲ್ಲಿದ್ದು, ಈ ವಿವಿಧ ರೂಪಗಳು ಬೇರೆ ಬೇರೆ ಭೌತಗುಣಗಳನ್ನು ಆದರೆ ಒಂದೇ ರೀತಿಯ ರಾಸಾಯನಿಕ ಗುಣಗಳನ್ನು ಪ್ರದರ್ಶಿಸುವ

ವಿದ್ಯಮಾನಕ್ಕೆ ಬಹುರೂಪತೆ ಎಂದು ಕರೆಯಲಾಗುತ್ತದೆ

ನಿಸರ್ಗದಲ್ಲಿ ಶುದ್ಧ ಕಾರ್ಬನ್ 2 ರೂಪಗಳ್ಲಲಿ ಕಂಡುಬರುತ್ತದೆ.

ಎ) ಅಸ್ಫಟಿಕ ರೂಪ ಉದಾ: ಇದ್ದಿಲು, ಕಲ್ಲಿದ್ದಲು ಇತ್ಯಾದಿ

ಬಿ) ಸ್ಫಟಿಕ ರೂಪ ಉದಾ: - ವಜ್ರ, ಗ್ರ್ಯಾಫೈಟ್ ಇತ್ಯಾದಿ

6.  ವಜ್ರ ಮತ್ತು ಗ್ರ್ಯಾಫೈಟ್ ಗಳ ಭೌತಿಕ ಗುಣಗಳು ಬೇರೆಯಾಗಿರಲು ಕಾರಣವೇನು?

ಏಕೆಂದರೆ ವಜ್ರ ಮತ್ತು ಗ್ರಾಫೈಟ್ ಗಳಲ್ಲಿ ಕಾರ್ಬನ್ ಪರಮಾಣುಗಳ ಜೋಡಣೆಯಲ್ಲಿ ವ್ಯತ್ಯಾಸವಿದೆ.

7. "ಬಕ್ ಮಿನಿಸ್ಟರ್ ಫುಲ್ಲರೀನ್" ಎಂದರೇನು ? ಇದನ್ನು ಈ ರೀತಿ ಕರೆಯಲು ಕಾರಣವೇನು ?

60 ಕಾರ್ಬನ್ ಪರಮಾಣುಗಳಿರುವ ಕಾರ್ಬನ್ ನ ಹೊಸ ಬಹುರೂಪ 1985 ರಲ್ಲಿ ಕಂಡುಹಿಡಿಯಲಾಯಿತು. ಇದನ್ನು "ಬಕ್ ಮಿನಿಸ್ಟರ್ ಫುಲ್ಲರೀನ್" ಎಂದು ಕರೆಯಲಾಗುತ್ತದೆ. ಇದನ್ನು "ಬಕ್ ಮಿನಿಸ್ಟರ್ ಫುಲ್ಲರ್" ಎಂಬ ಅಮೇರಿಕಾದ ವಾಸ್ತುಶಿಲ್ಪಿಯ ಹೆಸರಿನಿಂದ ಕರೆಯಲಾಗುತ್ತದೆ. ಏಕೆಂದರೆ ಪುಲ್ಲರ್ ನ ಗುಮ್ಮಟ ಮಾದರಿ ಕಟ್ಟಡಗಳು C-60 ಅಣುವಿನ ಉಂಗುರ ರಚನೆ ಹೋಲುತ್ತದೆ ಇದನ್ನು –ರಾಬರ್ಟ್ ಕರ್ಲ್, ಹೆರಾಲ್ಡ್ ಕ್ರೋಟೋ ಮತ್ತು ರಿಚರ್ಡ್ ಸ್ಮಾಲೀ ಕಂಡುಹಿಡಿದರು.

8. ಕಾರ್ಬನ್ ಅಸಂಖ್ಯಾತ ಸಂಖ್ಯೆಯ ಸಂಯುಕ್ತಗಳನ್ನು ರಚಿಸಲು ಕಾರಣವಾದ ಗುಣಗಳು ಯಾವುವು?

ಕೇಟನೀಕರಣ, ಟೆಟ್ರಾವೇಲೆನ್ಸಿ ಮತ್ತು ಸಮಾಂಗತೆ

9.  B-B, S-S ಮತ್ತು Si-Si ನಂತಹ ಸಂಯುಕ್ತಗಳು ಅಸಂಖ್ಯಾತ ಸಂಖ್ಯೆಯಲ್ಲಿ ಪ್ರಕೃತಿ ಅಸ್ತಿತ್ವದಲ್ಲಿಲ್ಲ ಏಕೆ ?

ಕಾರ್ಬನ್ ಸಂಯುಕ್ತಗಳಿಗೆ ಹೋಲಿಸಿದರೆ ಈ ಸಂಯುಕ್ತಗಳು ಹೆಚ್ಚು ಅಸ್ಥಿರ ಮತ್ತು ತೀವ್ರ ಕ್ರಿಯಾಶೀಲವಾಗಿರುವುದರಿಂದ ದೀರ್ಘಕಾಲದವರೆಗೆ ಇರುವುದಿಲ್ಲ.

10. ಮೀಥೇನ್ ಬಂಧ ಕೋನ ಎಷ್ಟಿರುತ್ತದೆ?

109 0 28 '

11. ಸರಳ ಹೈಡ್ರೋಕಾರ್ಬನ್ ಮೀಥೇನ್, ಈಥೇನ್ ಮತ್ತು ಪ್ರೋಪೇನ್ ಯಾವುದೇ ಸಮಾಂಗಿಗಳನ್ನು ಹೊಂದಿಲ್ಲ .ಕಾರಣ ನೀಡಿ?

ಏಕೆಂದರೆ ಅವುಗಳಲ್ಲಿ C-C ಸರಪಳಿಯ ಕವಲೊಡೆಯುವ ಯಾವುದೇ ಸಾಧ್ಯತೆಗಳು ಇಲ್ಲ.

12. ಕಾರ್ಬನ್ ಟೆಟ್ರಾವೇಲೆನ್ಸಿ ಗುಣವನ್ನು ವಿವರಿಸಿ

ಕಾರ್ಬನ್ ನ ಪರಮಾಣು ಸಂಖ್ಯೆ 6. ಇದರ ಇಲೆಕ್ಟ್ರಾನ್ ವಿನ್ಯಾಸ 1s2 2s2 2px1 2py1 2pz0 . ಕಾರ್ಬನ್ ನ 2P ನಲ್ಲಿ ಜೋಡಿಯಲ್ಲದ 2 ಇಲೆಕ್ಟ್ರಾನ್ ಗಳಿವೆ. ಉತ್ತೇಜಿತಗೊಂಡಾಗ 2S ನ ಒಂದು ಇಲೆಕ್ಟ್ರಾನ್ 2Pಗೆ ಏರಿಸಲ್ಪಟ್ಟು ಕಾರ್ಬನ್ ನ ವೇಲೆನ್ಸ್ ಕವಚದಲ್ಲಿ ನಾಲ್ಕು ಜೋಡಿಯಲ್ಲದ ಇಲೆಕ್ಟ್ರಾನ್ ಗಳಿ ಇರುತ್ತವೆ. ಆದ್ದರಿಂದ ಕಾರ್ಬನ್ ಟಡಟ್ರಾವೇಲೆಂಟ್ ಧಾತುವಾಗುತ್ತದೆ.

ಕಾರ್ಬನ್ ತನ್ನ ಟೆಟ್ರಾವೇಲೆನ್ಸಿ ಗುಣದಿಂದ,ತನ್ನ ಪರಮಾಣುವಿನೊಂದಿಗೆ ಏಕಬಂಧ ದ್ವಿಬಂಧ ಅಥವಾ ತ್ರಿಬಂಧವನ್ನು ರಚಿಸುತ್ತಾ ಕಾರ್ಬನ್ ಅಣುಗಳು ಉಂಟುಮಾಡುತ್ತದೆ. ಮಾಡಬಹುದು. ಆದ್ದರಿಂದ ಕಾರ್ಬನ್ ಪರಮಾಣುಗಳು ನೇರ, ಕವಲು ಅಥವಾ ಉಂಗುರ ಸರಪಳಿಗಳು ಉಂಟು ಮಾಡುತ್ತದೆ.

image

13. ಜೀವಬಲ ಸಿದ್ಧಾಂತವನನ್ನು ವಿವರಿಸಿ

1827ರಲ್ಲಿ ಬರ್ಜಿಲಿಯಸ್ ಸಾವಯವ ಸಂಯುಕ್ತಗಳ ಉಂಟಾಗುವಿಕೆ ವಿವರಿಸಲು ಜೀವಬಲ ಸಿದ್ಧಾಂತವನ್ನು ಮಂಡಿಸಿದ. ಈ ಸಿದ್ಧಾಂತದ ಪ್ರಕಾರ, ಸಾವಯವ ಸಂಯುಕ್ತಗಳು ಜೀವಿಗಳ ದೇಹದಲ್ಲಿ ಜೀವಬಲದ ಪ್ರಭಾವದಿಂದಾಗಿ ಸಂಶ್ಲೇಷಣೆಗೊಳ್ಳುತ್ತದೆ. ಜೀವಬಲವನ್ನು ಜೀವಿಗಳ ದೇಹದ ಹೊರಗೆ ಕೃತಕವಾಗಿ ಸಾಧಿಸುವುದು ಸಾಧ್ಯವಿಲ್ಲ ಎಂದು ತಿಳಿಸಲಾಯಿತು.

14. ರಾಸಾಯನಿಕ ವಸ್ತುಗಳ ಪ್ರಮುಖ ಎರಡು ಗುಂಪುಗಳು ಯಾವುವು?

ನಿರವಯವ ಸಂಯುಕ್ತ ಮತ್ತು ಸಾವಯವ ಸಂಯುಕ್ತ

15. ಕಾರ್ಬನ್ ಜೀವವ್ಯವಸ್ಥೆಯ ಅತ್ಯವಶ್ಯಕ ಘಟಕ ಎಂಬುದನ್ನು ವಿವರಿಸಿ

ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬುಗಳು ಮತ್ತು ನ್ಯೂಕ್ಲಿಕ್ ಆಮ್ಲಗಳೊಂಡತೆ ಜೀವಿಯ ದೇಹದ ಎಲ್ಲಾ ಜೀವ ದ್ರವ್ಯವೂ ಕಾರ್ಬನ್ ಸಂಯುಕ್ತಗಳು. ಆದ್ದರಿಂದ ಕಾರ್ಬನ್ ಜೀವವ್ಯವಸ್ಥೆಯ ಅತ್ಯವಶ್ಯಕ ಘಟಕ .

 

 

ಅಧ್ಯಾಯ 12a ಕಾರ್ಬನ್ ಮತ್ತು ಅದರ ಸಂಯುಕ್ತಗಳು

(ಬಿ) ಹೈಡ್ರೋಕಾರ್ಬನ್

(ಸಿ) ಕ್ರಿಯಾತ್ಮಕ ಗುಂಪು

ಎಣ್ಣೆ (ಡಿ) ಹೈಡ್ರೋಜನೀಕರಣ

ಪಠ್ಯ ಪುಸ್ತಕ ಪ್ರಶ್ನೆ ಮತ್ತು ಉತ್ತರಗಳು

I. ಕೆಳಗಿನವುಗಳನ್ನು ಉತ್ತರಿಸಿ
1. ಕೆಳಗಿನವುಗಳನ್ನು ಪರ್ಯಾಪ್ತ ಮತ್ತು ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳಾಗಿ ವರ್ಗೀಕರಿಸಿ. ಬೆನ್ಜೀನ್, ಸೈಕ್ಲೋಪ್ರೊಪೇನ್,ಆಲ್ಕೀನ್, ಆಲ್ಕೇನ್
ಪರ್ಯಾಪ್ತ ಹೈಡ್ರೋಕಾರ್ಬನ್: ಸೈಕ್ಲೋಪ್ರೊಪೇನ್, ಆಲ್ಕೇನ್
ಅಪರ್ಯಾಪ್ತ ಹೈಡ್ರೋಕಾರ್ಬನ್: ಬೆನ್ಜೀನ್, ಆಲ್ಕೀನ್
2. ಕೆಳಗಿನ ಹೈಡ್ರೋಕಾರ್ಬನ್ ಗಳನ್ನು ದ್ವಿಬಂಧ ಮತ್ತು ತ್ರಿಬಂಧಗಳ ಆಧಾರದ ಮೇಲೆ ವರ್ಗಿಕರಿಸಿ. ಈಥೈನ್ ಬೆನ್ಜೀನ್, ಬ್ಯೂಟೈನ್, ಪೆಂಟೀನ್

ದ್ವಿಬಂಧ: ಬೆನ್ಜೀನ್, ಬೆನ್ಜೀನ್, ಪೆಂಟೀನ್
ತ್ರಿ-ಬಂಧದ: ಈಥೈನ್, ಬ್ಯೂಟೈನ್
II. ಕೆಳಗಿನವುಗಳಿಗೆ ಕಾರಣ ಕೊಡಿ
1. ಆಲ್ಕೇನ್ ಗಳು ರಾಸಾಯನಿಕವಾಗಿ ಸ್ಥಿರವಾದವು.
ಆಲ್ಕೇನ್ ಗಳು ಏಕ ಬಂಧಗಳನ್ನು ಹೊಂದಿರುವ ಪರ್ಯಾಪ್ತ ಸಂಯುಕ್ತಗಳು.ಆದ್ದರಿಂದ ಅವು ರಾಸಾಯನಿಕವಾಗಿ ಸ್ಥಿರವಾಗಿರುತ್ತವೆ.
2. ಸೋಡಿಯಂ ಹೈಡ್ರಾಕ್ಸೈಡ್ ನಲ್ಲಿ ಹೈಡ್ರಾಕ್ಸಿಲ್ ಕ್ರಿಯಾ ಗುಂಪಿದ್ದರೂ ಅದನ್ನು ಸೋಡಿಯಂ ಅಲ್ಕೋಹಾಲ್ ಎಂದು ಕರೆಯಲಾಗುವುದಿಲ್ಲ .
ಅಲ್ಕೋಹಾಲ್ ಗಳು ಸಾವಯವ ಸಂಯುಕ್ತಗಳಾಗಿದ್ದು, ಇಲ್ಲಿ ಹೈಡ್ರೋಕಾರ್ಬನ್ ಸರಪಳಿಯಲ್ಲಿ ಹೈಡ್ರೋಜನ್ ಸ್ಥಾನದಲ್ಲಿ ಹೈಡ್ರಾಕ್ಸಿಲ್ (OH) ಪರಮಾಣು ಗುಂಪು ಸಹವಲೇನ್ಸೀಯ ಬಂಧದಿಂದ ಜೋಡಣೆಯಾಗಿರುತ್ತದೆ. ಆದರೆ ಸೋಡಿಯಂ ಹೈಡ್ರಾಕ್ಸೈಡ್ ನಿರವಯವ ಸಂಯುಕ್ತವಾಗಿದ್ದು ಪ್ರತ್ಯೇಕವಾಗುವ ಹೈಡ್ರಾಕ್ಸಿಲ್ ಅಯಾನ್ ಇರುತ್ತದೆ. ಆದ ಕಾರಣ ಸೋಡಿಯಂ ಹೈಡ್ರಾಕ್ಸೈಡ್ ನಲ್ಲಿ ಹೈಡ್ರಾಕ್ಸಿಲ್ ಕ್ರಿಯಾ ಗುಂಪಿದ್ದರೂ ಅದನ್ನು ಸೋಡಿಯಂ ಅಲ್ಕೋಹಾಲ್ ಎಂದು ಕರೆಯಲಾಗುವುದಿಲ್ಲ .
3. ಆಲ್ಕೇನ್ ಗಳು ಕೇವಲ ಸ್ಥಾನಪಲ್ಲಟ ರಾಸಾಯನಿಕ ಕ್ರಿಯೆಗೆ ಒಳಪಟ್ಟರೆ, ಆಲ್ಕೀನ್ ಮತ್ತು ಆಲ್ಕೈನ್ ಗಳು ಸಂಕಲನ ಮತ್ತು ಸ್ಥಾನಪಲ್ಲಟ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ ?
ಆಲ್ಕೇನ್ ಗಳು ಏಕಬಂಧ ಹೊಂದಿರುವ ಪರ್ಯಾಪ್ತ ಹೈಡ್ರೋಕಾರ್ಬನ್ ಗಳಾಗಿರುವುದರಿಂದ ಸ್ಥಾನಪಲ್ಲಟ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ. ಅಲ್ಕೀನ್ ಮತ್ತು ಆಲ್ಕೈನ್ ಗಳು ದ್ವಿಬಂಧ ಮತ್ತು ತ್ರಿ-ಬಂಧಗಳಿರುವ ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳಾಗಿದ್ದು ಸಂಕಲನ ಮತ್ತು ಸ್ಥಾನಪಲ್ಲಟ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ
4. ಎಥನಾಲನ್ನು ಬಹುಕ್ರಿಯಾ ಗುಂಪನ್ನು ಹೊಂದಿರುವ ಸಂಯುಕ್ತ ಎಂದು ಹೇಳಳಾಗುವುದಿಲ್ಲ.
ಎಥನಾಲ್ ಒಂದೇ ಒಂದು ಕ್ರಿಯಾಗುಂಪು ಹೈಡ್ರಾಕ್ಸಿಲ್ (OH) ಗುಂಪನ್ನು ಹೊಂದಿರುವ ಸಂಯುಕ್ತವಾದುದರಿಂದ ಎಥನಾಲನ್ನು ಬಹುಕ್ರಿಯಾ ಗುಂಪನ್ನು ಹೊಂದಿರುವ ಸಂಯುಕ್ತ ಎಂದು ಹೇಳಳಾಗುವುದಿಲ್ಲ

5. ಜೀವಬಲ ಸಿದ್ಧಾಂತ ವಿಫಲವಾಗಲು ಕಾರಣವೇನು ?
ಸಾವಯವ ಸಂಯುಕ್ತಗಳನ್ನು ಪ್ರಯೋಗಾಲಯದಲ್ಲಿ ಸಂಶ್ಲೇಷಿಸಲು ಸಾಧ್ಯ ಎಂದು ಕಂಡುಬಂದಿದರಿಂದ ಜೀವಬಲ ಸಿದ್ಧಾಂತವನ್ನು ತಿರಸ್ಕರಿಸಲಾಯಿತು.
6. ಎಣ್ಣೆಗಳ ಹೈಡ್ರೋಜನೀಕರಣ ಮಾಡಲಾಗುತ್ತದೆ.

ಎಣ್ಣೆಗಳ ಸ್ಥಿರತೆ ಮತ್ತು ಸಂಗ್ರಹಯೋಗ್ಯಕಾಲ ಹೆಚ್ಚಿಸಲು ಹಾಗೂ ಎಣ್ಣೆಗಳು ಗಾಳಿಯೊಂದಿಗೆ ಉತ್ಕರ್ಷಣೆ ಹೊಂದಿ ಕಮಟು ವಾಸನೆ ಉತ್ಪತ್ತಿ ಮಾಡಿ ಕೆಡುವುದನ್ನು ತಡೆಯಲು ಎಣ್ಣೆಗಳ ಹೈಡ್ರೋಜನೀಕರಣ ಮಾಡಲಾಗುತ್ತದೆ.
III. ಕೆಳಗಿನ ಉತ್ತರಿಸಿ
1. ಅನುರೂಪ ಸರಣಿ ಎಂದರೇನು ? ಉದಾಹರಣೆ ಕೊಡಿ.
ಒಂದೇ ಸಾಮಾನ್ಯ ಅಣುಸೂತ್ರ, ಒಂದೇ ರೀತಿಯ ರಾಸಾಯನಿಕ ಗುಣಗಳ ಹಾಗೂ ಅನುಕ್ರಮ ಸದಸ್ಯರ ನಡುವಣ ವ್ಯತ್ಯಾಸವು -CH2 ಆಗಿರುವ ಸಾವಯವ ಸಂಯುಕ್ತಗಳ ವರ್ಗಕ್ಕೆ ಅನುರೂಪ ಸರಣಿಗಳು ಎನ್ನುತ್ತೇವೆ.
ಉದಾ: ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳಲ್ಲಿ ಆಲ್ಕೇನ್, ಆಲ್ಕೀನ್ ಗಳು ಮತ್ತು ಆಲ್ಕೈನ್ ಗಳೆಂಬ ಮೂರು ವರ್ಗದ ಅನುರೂಪ ಸರಣಿ ಶ್ರೇಣಿಗಳಿವೆ.
2. ಸಮಾಂಗತೆ ಎಂದರೇನು ? ಉದಾಹರಣೆಗಳನ್ನು ಕೊಡಿ .
ಒಂದೇ ಅಣುಸೂತ್ರವಿದ್ದು ಬೇರೆ ಬೇರೆ ರಚನಾ ವಿನ್ಯಾಸವನ್ನು ಹೊಂದಿರುವ ಸಾವಯವ ಸಂಯುಕ್ತಗಳಿಗೆ “ಸಮಾಂಗಿಗಳು” ಎಂದು ಕರೆಯಲಾಗುತ್ತದೆ. ಈ ವಿದ್ಯಮಾನಕ್ಕೆ ಸಮಾಂಗತೆ ಕರೆಯಲಾಗುತ್ತದೆ. ಉದಾ: -ಬ್ಯೂಟೇನ್ (C4H10)

image

image

3. ಕೆಳಗಿನ ಸಂಯುಕ್ತಗಳಲ್ಲಿರುವ ಕ್ರಿಯಾ ಗುಂಪುಗಳನ್ನು ಗುರುತಿಸಿ. ಮೆಥನ್ಯಾಲ್, ಮೆಥನಾಲ್ , ಮೆಥನೋಯಿಕ್ ಆಮ್ಲ ಮತ್ತು ಅಮೈನೋ ಆಮ್ಲ .

ಸಂಯುಕ್ತ

ಕ್ರಿಯಾತ್ಮಕ ಗುಂಪು

ಮೆಥನ್ಯಾಲ್

-CHO

ಮೆಥನಾಲ್

-OH

ಮೆಥನೋಯಿಕ್ ಆಮ್ಲ

-COOH

ಅಮೈನೊ ಆಮ್ಲ

NH2-COOH

4. ಕೆಳಗಿನ ಸಂಯುಕ್ತಗಳ ರಚನಾಸೂತ್ರಗಳನ್ನು ಬರೆಯಿರಿ

I. ಐಸೋಬ್ಯೂಟೇನ್ C4H10image

II. ಬೆನ್ಜೀನ್ C6H6image

III. ಸೈಕ್ಲೋಹೆಕ್ಸೇನ್ C6H12image

IV. ಈಥೇನ್ C2H4image

V. ಪ್ರೋಪೈನ್ C3H4image

VI. ಮೆಥನಾಲ್ CH3OHimage

5. ಬೆನ್ಜೀನ್ ಉಪಯೋಗಗಳನ್ನು ತಿಳಿಸಿ
ಎ) ತೈಲಗಳು, ಕೊಬ್ಬುಗಳು, ರಾಳಗಳು, ರಬ್ಬರ್, ಸಲ್ಫರ್, ಅಯೋಡಿನ್ ಗಳಿಗೆ ದ್ರಾವಕಗಳಾಗಿ ಬಳಸುತ್ತಾರೆ.
ಬಿ) ಮದ್ದುಗಳು,ರಂಗುಗಳು, ಸುವಾಸಿಕಗಳು, ಸ್ಫೋಟಕಗಳು ಮೊದಲಾದವುಗಳ ಉತ್ಪಾದನೆಯಲ್ಲಿ ಬಳಸುತ್ತಾರೆ

ಸಿ) ಗ್ಯಾಮೆಕ್ಸೇನನ್ನು (gammexane) ಕೀಟನಾಶಕದ ತಯಾರಿಕೆಯಲ್ಲಿ ಬಳಸುತ್ತಾರೆ
ಡಿ) ಶುಷ್ಕ ಸ್ವಚ್ಛಕಾರಿಯಾಗಿ ಬಳಸುತ್ತಾರೆ.
6. ಬಹುಕ್ರಿಯಾ ಗುಂಪು ಸಂಯುಕ್ತಗಳು ಎಂದರೇನು ? ಉದಾಹರಣೆ ಕೊಡಿ.
ಒಂದಕ್ಕಿಂತ ಹೆಚ್ಚಿನ ಕ್ರಿಯಾ ಗುಂಪುಗಳಿರುವ ಸಾವಯವ ಸಂಯುಕ್ತಗಳಿಗೆ ಬಹುಕ್ರಿಯಾ ಗುಂಪು ಸಂಯುಕ್ತಗಳು ಎನ್ನುತ್ತಾರೆ
ಉದಾ: ಗ್ಲೈಸೀನ್ (H2N-CH2-COOH) , ಸ್ಯಾಲಿಸಿಲಿಕ್ ಆಮ್ಲ (OH-C6H4-COOH)

image
7. IUPAC ಯಾವುದನ್ನು ಪ್ರತಿನಿಧಿಸುತ್ತದೆ ?
ಅಂತರಾಷ್ಟ್ರೀಯ ಶುದ್ಧ ಮತ್ತು ಅನ್ವಯಿಕ ರಸಾಯನ ಶಾಸ್ತ್ರದ ಸಂಸ್ಥೆ

8. ಅನುರೂಪ ಸರಣಿಗಳ ಮೊದಲ ನಾಲ್ಕು ಸದಸ್ಯರ ರಚನಾ ಸೂತ್ರಗಳನ್ನು ಬರೆಯಿರಿ.

imageimageimageimage 

9. ಈ ಕೆಳಗಿನ ಸಂಯುಕ್ತಗಳಲ್ಲಿರುವ ಕ್ರಿಯಾಗುಂಪುಗಳನ್ನು ಗುರುತಿಸಿ
ಅ) CH3OH- ಕ್ರಿಯಾತ್ಮಕ ಗುಂಪು OH
ಆ) CH3COOH- ಕ್ರಿಯಾತ್ಮಕ ಗುಂಪು COOH
10. ಕ್ರಿಯಾಗುಂಪುಗಳು ಎಂದರೇನು ? ಉದಾಹರಣೆಯೊಂದಿಗೆ ವಿವರಿಸಿ.
ಅಣುಗಳ ವಿಶಿಷ್ಟ ಗುಣಗಳಿಗೆ ಕಾರಣವಾದ ನಿರ್ದಿಷ್ಟ ಪರಮಾಣು ಗುಂಪುಗಳು ಅಥವಾ ಅಣುಗಳೊಗಿನ ಬಂಧಗಳಿಗೆ ಕ್ರಿಯಾ ಗುಂಪು ಎನ್ನುತ್ತೇವೆ. ಈ ಗುಂಪು ರಾಸಾಯನಿಕ ಕ್ರಿಯೆಯ ತಾಣ . ಉದಾ: ಮೀಥೈಲ್ ಆಲ್ಕೋಹಾಲ್ CH3OH ನಲ್ಲಿಕಂಡುಬರುವ ಕ್ರಿಯಾತ್ಮಕ ಗುಂಪು OH ಗುಂಪು. ಮಿಥೇನ್ ನ ಒಂದು ಹೈಡ್ರೋಜನ್ ಸ್ಥಾನದಲ್ಲಿ ಕ್ರಿಯಾತ್ಮಕ ಗುಂಪು OH ಗುಂಪು ಬಂದು ಮೀಥೈಲ್ ಆಲ್ಕೋಹಾಲ್ ಆಗುತ್ತದೆ. ಇದೇ ರೀತಿ ಈಥೈಲ್ ಆಲ್ಕೋಹಾಲ್ C2H5OH.
11. ಸಾಬೂನೀಕರಣ ಮೌಲ್ಯವನ್ನು ವಿವರಿಸಿ.
ಒಂದು ಗ್ರಾಮ್ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲವನ್ನು ಸಾಬೂನೀಕರಿಸಲು ಮಿಲಿಗ್ರಾಮ್ ಗಳಲ್ಲಿ ಬೇಕಾದ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ಪ್ರಮಾಣವನ್ನು ಸಾಬೂನೀಕರಣ ಮೌಲ್ಯವನ್ನು ಎಂದು ವ್ಯಾಖ್ಯಾನಿಸಬಹುದು. ಸಾಬೂನೀಕರಣ ಮೌಲ್ಯವು ಸೂಕ್ತ ಪ್ರಮಾಣದಲ್ಲಿ ಪೋಟ್ಯಾಷಿಯಂ ಹೈಡ್ರಾಕ್ಸೈಡ್ ಬಳಸುವಲ್ಲಿ ಸಹಕಾರಿಯಾಗಿದೆ.
IV. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ
1. ಮೀಥೇನ್ ಅಣುವಿನ ಮೂರು ಜಲಜನಕ ಪರಮಾಣುಗಳ ಮೂರು ಕ್ಲೋರಿನ್ ಪರಮಾಣುಗಳನ್ನು ಅದಕ್ಕೆ ಪರ್ಯಾಯವಾಗಿ ಮಾಡಿದಾಗ. ನಾವು ಪಡೆಯಲು
(ಎ) DDT (ಬಿ) ಕ್ಲೋರೋಫಾರ್ಮ್ (ಸಿ) ಮೀಥೈಲ್ ಆಲ್ಕೋಹಾಲ್ (ಡಿ) CFC (ಕ್ಲೋರೋಫ್ಲುರೋ ಕಾರ್ಬನ್) ಉತ್ತರ: (ಬಿ) ಕ್ಲೋರೋಫಾರ್ಮ್
2. ಐದು ಕಾರ್ಬನ್ ಗಳುಳ್ಳ ಅಲ್ಕೇನಿನ ಆಣು ಸೂತ್ರವನ್ನು ______

(ಎ) C5H8 (ಬಿ) C5H10(ಸಿ) C5H5 (ಡಿ) C5H12 ಉತ್ತರ: (ಡಿ) C5H12
3. ಕೆಳಗಿನವುಗಳಲ್ಲಿ ಮೂರು ದ್ವಿಬಂಧಗಳುಳ್ಳ ಹೈಡ್ರೋಕಾರ್ಬನ್

(ಎ) ಈಥೇನ್ (ಬಿ) ಈಥೇನ್ (ಸಿ) ಬೆನ್ಜೀನ್ (ಡಿ) ಸೈಕ್ಲೋಹೆಕ್ಸೇನ್ ಉತ್ತರ: (ಸಿ) ಬೆನ್ಜೀನ್
4. ಬೆನ್ಜೀನನ್ನು ಸೈಕ್ಲೋಹೆಕ್ಸೇನ್ ಆಗಿಸಲು ಸೇರಿಸಬೇಕಾದ ಹೈಡ್ರೋಜನ್ ಪರಮಾಣುಗಳ ಸಂಖ್ಯೆ ______
(ಎ) 2 (ಬಿ) 3 (ಸಿ) 4 (ಡಿ) 6 ಉತ್ತರ: (ಡಿ) 6
5. ಬೆಂಜಾಲ್ಡಿಹೈಡ್ ನಲ್ಲಿರುವ ಕ್ರಿಯಾಗುಂಪು ______

(ಎ) -OH (ಬಿ) -COOH (ಸಿ) -CHO (ಡಿ) -NH 2 ಉತ್ತರ: (ಸಿ) -CHO
6. ಈಥೇನ್ ನಲ್ಲಿ ಪ್ರತಿ ಕಾರ್ಬನ್__________ ಪರಮಾಣುಗಳೊಂದಿಗೆ ಬಂಧವನ್ನುಂಟು ಮಾಡುತ್ತದೆ.
(ಎ) 6 (ಬಿ) 3 (ಸಿ) 2 (ಡಿ) 4 ಉತ್ತರ: (ಡಿ) 4

7. ಅಲ್ಕೈನ್ ಗಳ ಸಾಮಾನ್ಯ ಅಣುಸೂತ್ರ_____
(ಒಂದು) CnH2n (ಬಿ) CnH2n-2 (ಸಿ) CnH2n+2 (ಡಿ) CnH2n+2 ಉತ್ತರ: (ಬಿ) CnH2n-2
V. ಹೊಂದಿಸಿ ಬರೆಯಿರಿ

1. ಆರೋಮಾಟಿಕ್ ಹೈಡ್ರೋಕಾರ್ಬನ್ ಗಳು - ಎ) ಅಮೈನೊ ಆಮ್ಲ 4
2. ಅಲಿಸೈಕ್ಲಿಕ್ ಹೈಡ್ರೋಕಾರ್ಬನ್ - ಬಿ) ಪಂಟೇನ್
3. ಆಲ್ಕೀನ್ ಗಳು - ಸಿ) ಐಸೋಬ್ಯೂಟೇನ್

4. ಬಹುಕ್ರಿಯಾ ಗುಂಪುಳ್ಳ ಸಂಯುಕ್ತಗಳು - ಡಿ) ಸೈಕ್ಲೋಪ್ರೊಪೇನ್ 2

ಇ) ಟಾಲೀನ್ 1

ಎಫ್) ಈಥೇನ್ 3

ಹೆಚ್ಚುವರಿ ಪ್ರಶ್ನೆ ಮತ್ತು ಉತ್ತರಗಳು

1. ಹೈಡ್ರೋಕಾರ್ಬನ್ ಗಳು ಎಂದರೇನು? ಉದಾಹರಣೆಗಳು ನೀಡಿ
ಕಾರ್ಬನ್ ಮತ್ತು ಹೈಡ್ರೋಜನ್ ಪರಮಾಣುಗಳನ್ನು ಮಾತ್ರ ಒಳಗೊಂಡ ದ್ವಿಧಾತು ಸಂಯುಕ್ತಗಳೇ ಹೈಡ್ರೋಕಾರ್ಬನ್ ಗಳು.
ಉದಾ: - ಮಿಥೇನ್ ಮತ್ತು ಪ್ರೋಪೇನ್ (ಅನಿಲಗಳು), ಹೆಕ್ಸೇನ್ ಮತ್ತು ಬೆನ್ಜೀನ್ (ದ್ರವ), ಪ್ಯಾರಾಫಿನ್ ಮೇಣ ಮತ್ತು ನ್ಯಾಪ್ತಾಲಿನ್ (ಕಡಿಮೆ ದ್ರವನ ಬಿಂದುವಿರುವ ಘನಗಳು ) ಇತ್ಯಾದಿ

2. ಹೈಡ್ರೋಕಾರ್ಬನ್ ಗಳ ಪ್ರಮುಖ ಆಕರಗಳನ್ನು ಹೆಸರಿಸಿ.
ಪೆಟ್ರೋಲಿಯಂ ಮತ್ತು ಕಲ್ಲಿದ್ದಲು
3. ಅಲಿಫ್ಯಾಟಿಕ್ ಮತ್ತು ಆರೊಮ್ಯಾಟಿಕ್ ಹೈಡ್ರೊಕಾರ್ಬನ್ ಗಳನ್ನು ಹೇಗೆ ಪಡೆಯಬಹುದು ?.
ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳನ್ನು ಮುಖ್ಯವಾಗಿ ಪೆಟ್ರೋಲಿಯಂನಿಂದ ಪಡೆಯಬಹುದು
ಆರೋಮ್ಯಾಟಿಕ್ ಹೈಡ್ರೋಕಾರ್ಬನ್ ಗಳನ್ನು ಪ್ರಮುಖವಾಗಿ ಕಲ್ಲಿದ್ದಲಿನಿಂದ ಪಡೆಯಲಾಗುತ್ತದೆ.
4. ಹೈಡ್ರೋಕಾರ್ಬನ್ ಸ್ವರೂಪವನ್ನು ಹೆಸರಿಸಿ.
ಹೈಡ್ರೋಕಾರ್ಬನ್ ಅನಿಲಗಳಾಗಿರಬಹುದು (ಉದಾ: ಮೀಥೇನ್ ಮತ್ತು ಪ್ರೋಪೇನ್) ದ್ರವಗಳಾಗಿರಬಹುದು (ಉದಾ : -ಹೆಕ್ಸೇನ್ ಮತ್ತು ಬೆನ್ಜೀನ್), ಅಥವಾ ಕಡಿಮೆ ದ್ರವನ ಬಿಂದುವಿರುವ ಘನಗಳಾಗಿರಬಹುದು (ಉದಾ: ಪ್ಯಾರಾಫಿನ್ ಮೇಣ ಮತ್ತು ನ್ಯಾಪ್ತಾಲಿನ್) ಅಥವಾ ಪಾಲಿಮರ್ ಗಳಾಗಿರಬಹುದು (ಉದಾ ಪಾಲಿ ಈಥೈಲೀನ್ ಮತ್ತು ಪಾಲಿಪ್ರೊಪಿಲೀನ್)
5. ಹೈಡ್ರೋಕಾರ್ಬನ್ಗಳ ಎರಡು ಮುಖ್ಯ ಗುಂಪುಗಳನ್ನು ತಿಳಿಸಿ
ರಚನೆಯ ಆಧಾರದಲ್ಲಿ ಹೈಡ್ರೋಕಾರ್ಬನ್ ಗಳನ್ನು ಎರಡು ಮುಖ್ಯ ಗುಂಪುಗಳಾಗಿ ವರ್ಗೀಕರಿಸಲಾಗಿದೆ
1. ತೆರದ ಸರಪಳಿ ಹೈಡ್ರೋಕಾರ್ಬನ್.
2. ಮುಚ್ಚಿದ ಸರಪಳಿ ಹೈಡ್ರೋಕಾರ್ಬನ್.
ಹೈಡ್ರೋಕಾರ್ಬನ್ ಗಳು ವರ್ಗೀಕರಣಗಳು

image

6. ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳು ಎಂದರೇನು?
ತೆರದ ಸರಪಣಿ ಹೈಡ್ರೋಕಾರ್ಬನ್ ಗಳನ್ನು ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳು ಎಂದೂ ಕರೆಯಲಾಗುತ್ತದೆ. ಈ ಹೈಡ್ರೋಕಾರ್ಬನ್ ಗಳು ಕಾರ್ಬನ್ ನ, ನೇರ ಸರಪಳಿ ಅಥವಾ ಕವಲೊಡೆದ ಸರಪಳಿಗಳಿಂದಾಗಿದೆ.
7. ಅಲಿಫ್ಯಾಟಿಕ್ ಮತ್ತು ಸೈಕ್ಲಿಕ್ ಹೈಡ್ರೋಕಾರ್ಬನ್ ನಡುವಿನ ವ್ಯತ್ಯಾಸ ಕಲ್ಪಿಸಿ.

ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳನ್ನು

ಸೈಕ್ಲಿಕ್ ಹೈಡ್ರೋಕಾರ್ಬನ್

ನೇರ ಸರಪಳಿ

ಮುಚ್ಚಿದ ಸರಣಿ

ಯಾವುದೇ ಉಂಗುರ ಹೊಂದಿರುವುದಿಲ್ಲ

ಕನಿಷ್ಠ ಒಂದು ಉಂಗುರ ಹೊಂದಿರುತ್ತದೆ

8. ಆಲ್ಕೇನ್, ಆಲ್ಕೀನ್ ಮತ್ತು ಆಲ್ಕೈನ್ ಗಳ ಸಾಮಾನ್ಯ ಅಣುಸೂತ್ರವನ್ನು ಬರೆಯಿರಿ.
ಆಲ್ಕೇನ್ - CnH2n+2

ಆಲ್ಕೀನ್ವ- CnH2n
ಆಲ್ಕೈನ್ - CnH2n-2
9. ಪರ್ಯಾಪ್ತ ಮತ್ತು ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳ ನಡುವಿನ ವ್ಯತ್ಯಾಸ ತಿಳಿಸಿ.

ಪರ್ಯಾಪ್ತ ಹೈಡ್ರೋಕಾರ್ಬನ್

ಅಪರ್ಯಾಪ್ತ ಹೈಡ್ರೋಕಾರ್ಬನ್

ಕಾರ್ಬನ್ ಪರಮಾಣುಗಳ ನಡುವೆ ಏಕ ಬಂಧ ಹೊಂದಿವೆ

ಕಾರ್ಬನ್ ಪರಮಾಣುಗಳ ನಡುವೆ ದ್ವಿಬಂಧ ಅಥವಾ ತ್ರಿಬಂಧ ಹೊಂದಿವೆ

ಸಾಮಾನ್ಯ ಅಣುಸೂತ್ರ CnH2n+2 ಆಗಿರುತ್ತದೆ

ಸಾಮಾನ್ಯ ಸೂತ್ರವನ್ನು CnH2n ಅಥವಾ CnH2n-2 ಆಗಿರುತ್ತದೆ

ಅಪರ್ಯಾಪ್ತ ಹೈಡ್ರೋಕಾರ್ಬನ್ ಹೋಲಿಸಿದರೆ ಕಡಿಮೆ ಕ್ರಿಯಾಶೀಲ

ಪರ್ಯಾಪ್ತ ಹೈಡ್ರೋಕಾರ್ಬನ್ ಹೋಲಿಸಿದರೆ ಹೆಚ್ಚು ಕ್ರಿಯಾಶೀಲ

ಉದಾ: -ಆಲ್ಕೇನ್

ಉದಾ; -ಅಲ್ಕೀನ್ ಮತ್ತು ಆಲ್ಕೈನ್ ಗಳು

image

10.ಆಲ್ಕೇನ್ ಎಂದರೇನು ? ರಚನಾ ಸೂತ್ರವನ್ನು ಬರೆದು ಉದಾಹರಣೆ ನೀಡಿ
ಕಾರ್ಬನ್ ಪರಮಾಣುಗಳ ನಡುವೆ ಕೇವಲ ಏಕ ಬಂಧ ಹೊಂದಿರುವ ಸರಳ ಸಂಯುಕ್ತವೇ ಅಲ್ಕೇನ್. ಇವು ನೇರ ಅಥವಾ ಕವಲೊಡೆದ ಸರಪಳಿ ರಚನೆ ಹೊಂದಿವೆ. ಅಲ್ಕೇನ್ ಗಳನ್ನು ಪ್ಯಾರಫಿನ್ ಗಳೆಂದೂ ಕರೆಯುತ್ತಾರೆ. ಆಲ್ಕೇನ್ ಸಾಮಾನ್ಯ ಅಣುಸೂತ್ರ CnH2n+2 (ಇಲ್ಲಿ N = ಕಾರ್ಬನ್ ಪರಮಾಣುಗಳ ಸಂಖ್ಯೆ)

 

ಹೆಸರು

ಕಾರ್ಬನ್ ಪರಮಾಣುಗಳ ಸಂಖ್ಯೆ (n)

ಹೈಡ್ರೋಜನ್ ಪರಮಾಣುಗಳ ಸಂಖ್ಯೆ 2n-2

ಅಣುಸೂತ್ರ

ರಚನಾ ಸೂತ್ರ

1

ಮಿಥೇನ್

1

(2X1+2)=4

CH4

 

2

ಈಥೇನ್

2

(2X2+2)=6

C2H6

 

3

ಪ್ರೋಪೇನ್

3

(2X3+2)=8

C3H8

 

4

ಬ್ಯೂಟೇನ್

4

(2X4+2)=10

C4H10

 

5

ಪೆಂಟೇನ್

5

(2X5+2)=12

C5H12

 

11. ಆಲ್ಕೀನ್ ಎಂದರೇನು? ರಚನಾ ಸೂತ್ರವನ್ನು ಬರೆದು ಉದಾಹರಣೆ ನೀಡಿ
ಯಾವುದೇ ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ಒಂದು ದ್ವಿಬಂಧದೊಂದಿಗೆ ಹೊಂದಿರುವ ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳೇ ಆಲ್ಕೀನ್ ಗಳು. ಆಲ್ಕೀನ್ ಗಳನ್ನು ಒಲೆಫಿನ್ ಎಂದೂ ಕರೆಯುವರು. ಇವುಗಳ ಸಾಮಾನ್ಯ ಅಣುಸೂತ್ರವನ್ನು CnH2n (N = ಕಾರ್ಬನ್ ಪರಮಾಣುಗಳ ಸಂಖ್ಯೆ)

imageimage

12. ಆಲ್ಕೈನ್ ಗಳು ಎಂದರೇನು ? ರಚನಾ ಸೂತ್ರವನ್ನು ಬರೆದು ಉದಾಹರಣೆ ನೀಡಿ
ಯಾವುದೇ ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ತ್ರಿ-ಬಂಧದ ಹೊಂದಿರುವ ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳೇ ಆಲ್ಕೈನ್ ಗಳು. ಆಲ್ಕೈನ್ ಗಳ ಸಾಮಾನ್ಯ ಅಣುಸೂತ್ರವನ್ನು CnH2n-2 (N = ಕಾರ್ಬನ್ದ ಪರಮಾಣುಗಳ ಸಂಖ್ಯೆ)

image
image
13. ಹೈಡ್ರೋಕಾರ್ಬನ್ ಗಳಲ್ಲಿ ಕಾರ್ಬನ್ ಸಂಖ್ಯೆ ಪ್ರತಿನಿಧಿಸುವ ಪೂರ್ವಪ್ರತ್ಯಯಗಳನ್ನು ಬರೆಯಿರಿ.

ಪೂರ್ವಪ್ರತ್ಯಯ

ಕಾರ್ಬನ್ದ ಪರಮಾಣುಗಳ ಸಂಖ್ಯೆ

ಮೀಥ್

1

ಈಥ್

2

ಪ್ರೋಪ್

3

ಬ್ಯೂಟ್

4

ಪೆಂಟ್

5

ಹೆಕ್ಸ್

6

ಹೆಪ್ಟ್

7

ಒಕ್ಟ್

8

ನೊನ್

9

ಡೆಕ್

10

14. ಹೈಡ್ರೋಕಾರ್ಬನ್ ಗಳನ್ನು ಹೆಸರಿಸುವ ಅಂತ್ಯ ಪ್ರತ್ಯಯಗಳನ್ನು ಬರೆಯಿರಿ.

image
15 ಮೀಥೇನ್ ನ್ನು ಜೌಗು ಅನಿಲ ಎಂದು ಏಕೆ ಕರೆಯಲಾಗುತ್ತದೆ?
ಜೌಗು ನೆಲದಲ್ಲಿ ಬ್ಯಾಕ್ಟೀರಿಯಾಗಳು ಸಸ್ಯಕಾಯವನ್ನು ವಿಘಟಿಸುವ ಮೂಲಕ ಮೀಥೇನ್ ಉತ್ಪತ್ತಿಯಾಗುತ್ತದೆ. ಆದ್ದರಿಂದ ಇದನ್ನು ಜೌಗು ಅನಿಲ ಎಂದು ಏಕೆ ಕರೆಯುವರು.
16. ಪ್ರಯೋಗಾಲಯದಲ್ಲಿ ಮಿಥೇನ್ (CH 4 ) ನ ತಯಾರಿಕೆಯನ್ನು ವಿವರಿಸಿ.
ಸೋಡಿಯಂ ಅಸಿಟೇಟ್ ಮತ್ತು ಸೋಡಾ ಲೈಮ್ (NaOH + CaO) ಮಿಶ್ರಣವನ್ನು ಗಾಜಿನ ಪ್ರನಾಳದಲ್ಲಿ ಕಾಯಿಸಿದಾಗ ಮೀಥೇನ್ ಅನಿಲ ಬಿಡುಗಡೆಯಾಗುತ್ತದೆ. ಈ ಅನಿಲವನ್ನುನೀರಿನ ಕೆಳಮುಖ ಸ್ಥಾನ ಪಲ್ಲಟದಿಂದ ಸಂಗ್ರಹಿಸಲಾಗುತ್ತದೆ.
CH3COONa + NaOH -------Cao------- > Na2CO3 + CH4

17. ಮೀಥೇನ್ ಅನಿಲವನ್ನು ನೀರಿನ ಕೆಳಮುಖ ಸ್ಥಾನಪಲ್ಲಟದ ಮೂಲಕ ಏಕೆ ಸಂಗ್ರಹಿಸಲಾಗುತ್ತದೆ?
ಮೀಥೇನ್ ಅನಿಲ ಗಾಳಿಗಿಂತ ಹಗುರವಾಗಿದೆ ಮತ್ತು ನೀರಿನಲ್ಲಿ ಕಡಿಮೆ ಪ್ರಮಾಣದಲ್ಲಿ ವಿಲೀನವಾಗುತ್ತದೆ .

18. ಮೀಥೇನ್ ಗುಣಗಳನ್ನು ಬರೆಯಿರಿ.
ಭೌತಿಕ ಗುಣಲಕ್ಷಣಗಳು: - ಬಣ್ಣವಿಲ್ಲದ, ವಾಸನೆಯಿಲ್ಲದ ಅನಿಲ, ಇದುಮೀಥೇನ್ ಗಾಳಿಗಿಂತ ಹಗುರ. ಇದು ನೀರಿನಲ್ಲಿ ಕಡಿಮೆ ಪ್ರಮಾಣದಲ್ಲಿ ವಿಲೀನವಾಗುತ್ತದೆ. ಆದರೆ ಸಾವಯವ ಸಂಯುಕ್ತಗಳಾದ ಆಲ್ಕೋಹಾಲ್ ಮತ್ತು ಈಥರ್ ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಲೀನಗೊಳ್ಳುತ್ತದೆ.
ರಾಸಾಯನಿಕ ಗುಣಲಕ್ಷಣಗಳು: - ಮೀಥೇನ್ ಪರ್ಯಾಪ್ತ ಸಂಯುಕ್ತವಾಗಿರುವುದರಿಂದ ರಾಸಾಯನಿಕವಾಗಿ ಜಡ. ಆದ್ದರಿಂದ ಇದು ಆಮ್ಲ, ಪ್ರತ್ಯಾಮ್ಲ ಮತ್ತು ಪ್ರಬಲ ಸಲ್ಪೂರಿಕ್ ಆಮ್ಲ, ನೈಟ್ರಿಕ್ ಆಮ್ಲ ಮತ್ತು ಪೋಟ್ಯಾಷಿಯಂ ಪರ್ಮ್ಯಾಂಗನೇಟ್ ಗಳಂತಹ ಉತ್ಕರ್ಷಣಖಾರಿಗಳೊಂದಿಗೆ ವರ್ತಿಸುವುದಿಲ್ಲ.
19. ಮೀಥೇನ್ ದಹ್ಯತೆಯನ್ನು ವಿವರಿಸಿ.
ಪೂರ್ಣ ದಹನ: - ಗಾಳಿಯಲ್ಲಿನ ಆಕ್ಸಿಜನ್ ನೊಂದಿಗೆ ಮೀಥೇನ್ ಪೂರ್ಣವಾಗಿ ಹೊತ್ತಿಕೊಂಡು ನೀಲಿಜ್ವಾಲೆಯೊಂದಿಗೆ ಉರಿದು, ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಉಂಟುಮಾಡುತ್ತದೆ CH4 (g) + 2O2(g) ------ > CO2(g) +2H2O(l)
ಅಪೂರ್ಣ ಉಷ್ಣ ವಿಕಸನ : - ಆಕ್ಸಿಜನ್ ಕೊರತೆಯಿದ್ದಾಗ ಮೀಥೇನ್ ಹಳದಿ ಜ್ವಾಲೆಯೊಂದಿಗೆ ಅಪೂರ್ಣ ದಹನಕ್ಕೊಳಗಾಗುತ್ತದೆ. ಕೆಲವೊಮ್ಮೆ ಕಾರ್ಬನ್ ಮಸಿಯನ್ನುಂಟು ಮಾಡಬಹುದು. 2CH4(g)+3O2(g) -------> 2CO+4H2O(l)
20. ಕಾರ್ಬನ್ ಮಾನಾಕ್ಸೈಡ್ ಏಕೆ ವಿಷಕಾರಿ?
ಕಾರ್ಬನ್ ಮೊನಾಕ್ಸೈಡ್ ರಕ್ತದಲ್ಲಿ ಹಿಮೋಗ್ಲೋಬಿನ್ ನೊಂದಿಗೆ ವರ್ತಿಸಿ ಕಾರ್ಬಾಕ್ಸಿ ಹಿಮೋಗ್ಲೋಬಿನ್ ಎಂಬ ವಿಷವಸ್ತುವಾಗುತ್ತದೆ. ಇದು ರಕ್ತ ಪರಿಚಲನೆಯಲ್ಲಿ ಆಕ್ಸಿಜನ್ ಸಾಗಾಣಿಕೆಯನ್ನು ವ್ಯತ್ಯಯಗೊಳಿಸುತ್ತದೆ. ದೇಹದೊಳಗೆ ಆಕ್ಸಿಜನ್ ಕೊರತಯಿಂದ ಉಸಿರುಗಟ್ಟಿ ವ್ಯಕ್ತಿ ಸಾವಿಗೀಡಾಗುತ್ತಾನೆ.

21. ಆದೇಶನ ಕ್ರಿಯೆ ಎಂದರೇನು ?
ಒಂದು ಅಣುವಿನ ಪರಮಾಣು ಅಥವಾ ಅಯಾನು ಮತ್ತೊಂದು ಪರಮಾಣು ಅಥವಾ ಅಯಾನು ಗಳಿಂದ ಸ್ಥಾನಪಲ್ಲಟಿತವಾಗುವ ಪ್ರಕ್ರಿಯೆಯೇ ಆದೇಶನ ಕ್ರಿಯೆ.

22. ಮೀಥೇನ್ ನಲ್ಲಿ ಕಂಡುಬರುವ ಆದೇಶನ ಕ್ರಿಯೆಯನ್ನು ವಿವರಿಸಿ
ಮೀಥೇನ್ ಮತ್ತು ಕ್ಲೋರಿನ್ ಗಳ ಮಿಶ್ರಣವನ್ನು ನೇರಳಾತೀತ ವಿಕಿರಣಕ್ಕೆ ಒಡ್ಡಿದಾಗ ಪರ್ಯಾಯ ಕ್ರಿಯೆ ನಡೆದು ಕ್ಲೋರೋಮೀಥೇನ್ ಉತ್ಪತ್ತಿಯಾಗುತ್ತದೆ.

CH4 + Cl2 ----ನೇರಳಾತೀತ ವಿಕಿರಣ--- > CH3Cl + HCl
ಈ ಕ್ರಿಯೆಯು ಅಲ್ಲಿಗೆ ನಿಲ್ಲದೇ, ಮೀಥೇನ್ ನಲ್ಲಿರುವ ಎಲ್ಲಾ ಹೈಡ್ರೋಜನ್ ಕ್ಲೋರೀನ್ ಪರಮಾಣುಗಳಿಂದ ಹಂತ ಹಂತವಾಗಿ ಪಲ್ಲಟಗೊಳ್ಳುತ್ತದೆ. ಹೀಗಾಗಿ ಕ್ಲೋರೋಮೀಥೇನ್, ಡೈ ಕ್ಲೋರೋಮೀಥೇನ್, ಟ್ರೈಕ್ಲೋರೋ ಮೀಥೇನ್ (ಕ್ಲೋರೋಫಾರ್ಮ್) ಮತ್ತು ಟೆಟ್ರಾ ಕ್ಲೋರೋಮೀಥೇನ್ (ಕಾರ್ಬನ್ ಟೆಟ್ರಾಕ್ಲೋರೈಡ್) ಗಳಂತಹ ಪರ್ಯಾಯ ಉತ್ಪನ್ನಗಳು ಉಂಟಾಗುತ್ತದೆ
CH4 + Cl2 ----uv--- > CH3Cl + HCl
CH3Cl + Cl2 ----uv--- > CH2Cl2 + HCl
CH2Cl2 + Cl2 ----uv--- > CHCl3 + HCl
CHCl3 + Cl2 ----uv--- > CCl4 + HCl
23. ಅನುರೂಪ ಶ್ರೇಣಿಯ ಸದಸ್ಯರ ಪ್ರಮುಖ ಗುಣಗಳನ್ನು ಪಟ್ಟಿ ಮಾಡಿ.
ಎ) ಇವುಗಳ ಗುಣಗಳು ನಿಯಮಿತವಾಗಿ ಅಥವಾ ಊಹಿಸಬಹುದಾದ ರೀತಿಯಲ್ಲಿ ಬದಲಾಗುತ್ತವೆ.
ಬಿ) ಇವುಗಳು ಒಂದೇ ರೀತಿಯ ರಾಸಾಯನಿಕ ಗುಣಗಳವು.
ಸಿ) ಇವುಗಳು ಅನುಕ್ರಮವಾಗಿ ವ್ಯತ್ಯಯಗೊಳ್ಳುವ ಭೌತ ಗುಣಗಳವು
ಡಿ) ಇವುಗಳ ಅಣುಸೂತ್ರಗಳು ಸಾಮಾನ್ಯ ಆಣು ಸೂತ್ರಕ್ಕೆ ಅನುಗುಣವಾಗಿವೆ.
ಇ) ಯಾವುದೇ ಎರಡು ಅನುಕ್ರಮ ಸದಸ್ಯರ ಅಣುಸೂತ್ರದ ವ್ಯತ್ಯಾಸವು CH2 ಆಗಿದೆ. CH4 ಮತ್ತು C2H6 ಅಥವಾ C5H12 ಮತ್ತು C6H14 ಗಳ ವ್ಯತ್ಯಾಸ ಒಂದು ಕಾರ್ಬನ್ ಮತ್ತು ಎರಡು ಹೈಡ್ರೋಜನ್ ಪರಮಾಣುಗಳು ಆಗಿರುತ್ತವೆ.
24 ಸೈಕ್ಲೋಆಲ್ಕೇನ್ ಎಂದರೇನು ? ಉದಾಹರಣೆಗಳನ್ನು ಕೊಡಿ.
ಸೈಕ್ಲೋಆಲ್ಕೇನ್ ಗಳು ಮುಚ್ಚಿದ ಸರಪಳಿ ಪರ್ಯಾಪ್ತ ಹೈಡ್ರೋಕಾರ್ಬನ್ ಗಳು.ಇವು ಒಂದು ಅಥವಾ ಹೆಚ್ಚು ಕಾರ್ಬನ್ ಉಂಗುರ ಹೊಂದಿರಬಹುದು. ಇವುಗಳ ಸಾಮಾನ್ಯ ಅಣು ಸೂತ್ರ CnH2n

image

25. ಆರೊಮ್ಯಾಟಿಕ್ ಹೈಡ್ರೊಕಾರ್ಬನ್ ಎಂದರೇನು? ಬೆನ್ಜೀನ್, ಟಾಲೀನ್ ಮತ್ತು ನ್ಯಾಪ್ತಾಲಿನ್ ಗಳ ರಚನಾ ಸೂತ್ರ ಬರೆಯಿರಿ.
ಇವುಗಳಲ್ಲಿ ಕನಿಷ್ಠ ಒಂದು ಬೆನ್ಜೀನ್ ಉಂಗುರವಿರುವ ವಿಶೇಷ ಸುವಾಸನೆ ಹೊಂದಿರುವ ಹೈಡ್ರೋಕಾರ್ಬನ್ ಗಳು. ಇವುಗಳನ್ನು ಆರೀನ್ ಗಳೆಂದೂ ಕರೆಯುತ್ತಾರೆ.

ಬೆನ್ಜೀನ್ (C6H6), ಟಾಲೀನ್ (C6H5 CH3) ಮತ್ತು ನೆಪ್ತಾಲಿನ್ (C6H8)

image image image

26.ಬೆನ್ಜೀನ್ ರಚನೆ ವಿವರಿಸಿ

image

image

ಸಾವಯವ ರಾಸಯನಶಾಸ್ತ್ರದಲ್ಲಿ ಬೆಂಜಿನ್ ನ ರಚನೆ ಬಹು ಪ್ರಮುಖವಾಗಿದೆ. ಬೆಂಜೀನ್ ನಲ್ಲಿ 6 ಕಾರ್ಬನ್ ಪರಮಾಣುಗಳು ಉಂಗುರಾಕಾರದಲ್ಲಿ ಜೋಡಣೆಗೊಂಡಿದ್ದು, ಏಕಬಂಧ ಮತ್ತು ದ್ವಿಬಂದಗಳುಅನುಕ್ರಮವಾಗಿ ಜೋಡಣೆಗೊಂಡಿದೆ. ನೀಜವಾಗಿ ದ್ವಿಬಂಧ ಕಾರ್ಬನ್ ಉಂಗುರದಾದ್ಯಂಥ ವ್ಯಾಪಿಸಿ ಬೆಂಜೀನ್ ಅಣು ಸಮಮಿತಿ ರಚನೆ ಹೊಂದಿದೆ. ಈ ಅಣುವನ್ನು ಷಡ್ಬುಜಾಕೃತಿಯಲ್ಲಿ ಪ್ರತಿನಿಧಿಸಲಾಗುತ್ತದೆ.


27. ಟಾಲೀನ್ ಮತ್ತು ನ್ಯಾಪ್ತಾಲಿನ್ ಗಳ ಉಪಯೋಗಗಳನ್ನು ಬರೆಯಿರಿ
ಟಾಲೀನ್: - ಎಣ್ಣೆಗಳು, ಕೊಬ್ಬುಗಳು, ಹೊಳಪುಕಾರಿಗಳು, ರಾಳಗಳಿಗೆ ದ್ರಾವಕಗಳಾಗೆ ಬಳಸುತ್ತಾರೆ. TNT ಯನ್ನು ಸ್ಫೋಟಕ ತಯಾರಿಕೆ ಬಳಸಲಾಗುತ್ತದೆ

ನ್ಯಾಪ್ತಾಲಿನ್: - ನುಸಿಗುಳಿಗೆ ತಯಾರಿಕೆಯಲ್ಲಿ ಬಳಸುತ್ತಾರೆ. ಸಂಶ್ಲೇಷಿತ ರಂಗುಗಳ ತಯಾರಿಕೆಯಲ್ಲಿ ಬಳಸುತ್ತಾರೆ

28. ಕ್ರಿಯಾ ಗುಂಪುಗಳು ಎಂದರೇನು ?ವಿವಿಧ ಕ್ರಿಯಾಗುಂಪು ಸಂಯುಕ್ತಗಳನ್ನು ಹೆಸರಿಸಿ

ಅಣುಗಳ ವಿಶಿಷ್ಟ ಗುಣಗಳಿಗೆ ಕಾರಣವಾದ ನಿರ್ದಿಷ್ಟ ಪರಮಾಣು ಗುಂಪುಗಳು ಅಥವಾ ಅಣುಗಳೊಗಿನ ಬಂಧಗಳಿಗೆ ಕ್ರಿಯಾ ಗುಂಪು ಎನ್ನುತ್ತೇವೆ. ಈ ಗುಂಪು ರಾಸಾಯನಿಕ ಕ್ರಿಯೆಯ ತಾಣ . ಈ ಗುಂಪಿನಲ್ಲಿ ಕಾರ್ಬನ್, ಹೈಡ್ರೋಜನ್ ಸರಪಳಿಯಲ್ಲದೆ, ವಿಭಿನ್ನ ಪರಮಾಣುಪೂರಿತ ಗುಂಪು ಇದೆ.

ಉದಾ: - -OH ಕ್ರಿಯಾಗುಂಪು ಹೊಂದಿರುವ ಹೈಡ್ರೋಕಾರ್ಬನ್ ಸರಪಳಿ ಸಾವಯವ ಸಂಯುಕ್ತಗಳ ವರ್ಗ ಅಲ್ಕೋಹಾಲ್ ಗಳು. ಸಾಮಾನ್ಯ ಸೂತ್ರ R-OH

-OH ಕ್ರಿಯಾಗುಂಪು ಹೊಂದಿರುವ ಬೆಂಜೀನ್ ಉಂಗುರಯುಕ್ತ ಸಾವಯವ ಸಂಯುಕ್ತಗಳ ವರ್ಗ ಫಿನಾಲಿಕ್ ಸಂಯುಕ್ತಗಳು. ಸಾಮಾನ್ಯ ಸೂತ್ರ R-OH

-COOH ಕ್ರಿಯಾಗುಂಪು ಹೊಂದಿರುವ ಹೈಡ್ರೋಕಾರ್ಬನ್ ಸರಪಳಿ ಸಾವಯವ ಸಂಯುಕ್ತಗಳ ವರ್ಗ ಕಾರ್ಬಾಕ್ಸಿಲಿಕ್ ಆಮ್ಲಗಳು. ಸಾಮಾನ್ಯ ಸೂತ್ರ R- COOH
-CHO ಕ್ರಿಯಾಗುಂಪು ಹೊಂದಿರುವ ಹೈಡ್ರೋಕಾರ್ಬನ್ ಸರಪಳಿ ಸಾವಯವ ಸಂಯುಕ್ತಗಳ ವರ್ಗ ಆಲ್ಡಿಹೈಡ್ಸ್ ಗಳು. ಸಾಮಾನ್ಯ ಸೂತ್ರ R- CHO

-NH 2 ಕ್ರಿಯಾಗುಂಪು ಹೊಂದಿರುವ ಹೈಡ್ರೋಕಾರ್ಬನ್ ಸರಪಳಿ ಸಾವಯವ ಸಂಯುಕ್ತಗಳ ವರ್ಗ ಅಮೈನುಗಳು. ಸಾಮಾನ್ಯ ಸೂತ್ರ R- NH 2
29 ಪ್ರತಿ ವರ್ಗದ ಸಾವಯವ ಸಂಯುಕ್ತಗಳ ಎರಡು ಭಾಗಗಳನ್ನು ಹೆಸರಿಸಿ.
ಪ್ರತಿ ವರ್ಗದ ಸಾವಯವ ಸಂಯುಕ್ತಗಳು ಎರಡು ಭಾಗಗಳು ಮಾಡಲ್ಪಟ್ಟಿದೆ.
ಎ. ಹೈಡ್ರೋಕಾರ್ಬನ್ ಭಾಗ ಅಥವಾ ಅಲ್ಕೈಲ್ ಅಥವಾ ಅರೈಲ್ ರಾಡಿಕಲ್ ಭಾಗ (R)
ಬಿ. ಕ್ರಿಯಾ ಗುಂಪು ಭಾಗ (X)
30 ಅಲ್ಕೋಹಾಲ್ ಗಳು, ಕಾರ್ಬೋಕ್ಸಿಲಿಕ್ ಆಮ್ಲಗಳು, ಆಲ್ಡಿಹೈಡ್ಸ್ ಮತ್ತು ಅಮೈನ್ ಗಳ ಸಾಮಾನ್ಯ ಸೂತ್ರವನ್ನು ಬರೆಯಿರಿ?
* ಅಲ್ಕೋಹಾಲ್ ಗಳು R-OH * ಕಾರ್ಬಾಕ್ಸಿಲಿಕ್ - R- COOH * ಆಲ್ಡಿಹೈಡ್ಸ್ - R- CHO * ಅಮೈನು - R- NH 2
ಸಾವಯವ ಸಂಯುಕ್ತಗಳ ಸಾಮಾನ್ಯ ಅಣುಸೂತ್ರಬರೆಯಿರಿ

ಸಾವಯವ ಸಂಯುಕ್ತಗಳ ಸಾಮಾನ್ಯ ಅಣುಸೂತ್ರ R- X

31. ಸಾವಯವ ಸಂಯುಕ್ತಗಳ IUPAC ನಾಮಕರಣವನ್ನು ಬರೆಯಿರಿ

image

32. ಎಸ್ಟರಿಫಿಕೇಶನ್ ಎಂದರೇನು ? ಅದರ ಸಮೀಕರಣವನ್ನು ಬರೆಯಿರಿ
ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್ ಗಳಿಂದ ಕೊಬ್ಬನ್ನು ಅಥವಾ ಎಣ್ಣೆ ಯನ್ನು ಪಡೆಯುವ ಪ್ರಕ್ರಿಯೆಯನ್ನು ಎಸ್ಟರಿಫಿಕೇಶನ್ ಕರೆಯಲಾಗುತ್ತದೆ.

ಕೊಬ್ಬಿನಾಮ್ಲ + ಗ್ಲಿಸರಾಲ್ ----------------> ಕೊಬ್ಬು ಅಥವಾ ಎಣ್ಣೆ + ನೀರು

ಕೊಬ್ಬಿನಾಮ್ಲ ಎಂದರೇನು ?

ಕಾರ್ಬಾಕ್ಸಿಲಿಕ್ ಆಮ್ಲ ಗುಂಪಿರುವ ಉದ್ದವಾದ ನೇರ ಸರಪಣಿಯ ಆಲ್ಕೇನ್ ಅಥವಾ ಅಲ್ಕೀನ್ ಗಳನ್ನು ಕೊಬ್ಬಿನಾಮ್ಲ ಎನ್ನುತ್ತಾರೆ.
33. ಕೊಬ್ಬು ಮತ್ತು ಎಣ್ಣೆಗಳ ನಡುವಿನ ವ್ಯತ್ಯಾಸ ತಿಳಿಸಿ

ಎಣ್ಣೆಗಳು

ಕೊಬ್ಬು

ಎಣ್ಣೆಗಳು ಅಪರ್ಯಾಪ್ತ

ಕೊಬ್ಬು ಹೆಚ್ಚಾಗಿ ಪರ್ಯಾಪ್ತ

ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುತ್ತದೆ

ಸಾಮಾನ್ಯ ಉಷ್ಣತೆಯಲ್ಲಿ ಘನರೂಪದಲ್ಲಿರುತ್ತದೆ

ರಾಸಾಯನಿಕ ಕ್ರಿಯಾಶೀಲವಾಗಿವೆ

ರಾಸಾಯನಿಕವಾಗಿ ಕಡಿಮೆ ಕ್ರಿಯಾಕಾರತ್ವ ಹೊಂದಿವೆ

ಜಠರದಲ್ಲಿ ಸಾಗಾಣಿಕೆ ಕಷ್ಟ

ಸಾಗಾಣಿಕೆ ಸುಲಭ

ಗಾಳಿಯಲ್ಲಿ ಉತ್ಕರ್ಷಣೆ ಹೊಂದಿ ಕಮಟು ವಾಸನೆ ಉತ್ಪತ್ತಿ ಮಾಡುವುದು. ಬೇಗ ಕೆಡುವುದು

ಉತ್ಕರ್ಷಣೆ ಒಳಗಾಗುವುದಿಲ್ಲ ಆದ್ದರಿಂದ ಬೇಗ ಕೆಡುವುದಿಲ್ಲ

ಸಂಗ್ರಹಯೋಗ್ಯ ಕಾಲ ಹೆಚ್ಚಿರುತ್ತದೆ

ಸಂಗ್ರಹ ಯೋಗ್ಯ ಕಾಲ ಕಡಿಮೆ ಇರುತ್ತದೆ

34. ಎಣ್ಣೆಗಳ ಹೈಡ್ರೋಜನೀಕರಣವನ್ನು ವಿವರಿಸಿ.
ಹೈಡ್ರೋಜನ್ ಅನಿಲವನ್ನು ಹಾಯಿಸುವುದರ ಮೂಲಕ ದ್ರವ ಎಣ್ಣೆಗಳನ್ನು ಪರ್ಯಾಪ್ತ ಘನ ಕೊಬ್ಬುಗಳಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಎಣ್ಣೆಗಳ ಹೈಡ್ರೋಜನೀಕರಣ ಎನ್ನುತ್ತಾರೆ. ನಯವಾಗಿ ಪುಡಿಮಾಡಿದ ನಿಕ್ಕಲನ್ನು ಈ ಪ್ರಕ್ರಿಯೆಯಲ್ಲಿ ಕ್ರಿಯಾವರ್ಧಕವಾಗಿ ಬಳಸುತ್ತಾರೆ.

ಅಪರ್ಯಾಪ್ತ ಎಣ್ಣೆಗಳನ್ನು ಜೀರ್ಣಿಸುವುದು ಸುಲಭ. ಕಾರಣ ಕೊಡಿ.

ಅಪರ್ಯಾಪ್ತ ಎಣ್ಣೆಗಳನ್ನು ಜೀರ್ಣಿಸುವುದು ಸುಲಭ ಏಕೆಂದರೆ ಅವು ರಾಸಾಯನಿಕವಾಗಿ ಕ್ರಿಯಾಶೀಲ

35. ಸಾಬೂನೀಕರಣ ಪ್ರಕ್ರಿಯೆ ವಿವರಿಸಿ?
ಸಾಬೂನೀಕರಣ ಪ್ರಕ್ರಿಯೆಯಲ್ಲಿ ಕೊಬ್ಬಿನಾಮ್ಲಗಳನ್ನು ಸೋಡಿಯಂ ಅಥವಾ ಪೊಟ್ಯಾಷಿಯಂ ಹೈಡ್ರಾಕ್ಸೈಡ್ ನಿಂದ ತಟಸ್ಥೀಕರಿಸಲಾಗಿದೆ. ಕೊಬ್ಬಿನೆಣ್ಣೆ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ಗಳ ನಡುವಣ ರಾಸಾಯನಿಕ ಕ್ರಿಯೆಯಲ್ಲಿ ಮೊದಲ ಹಂತದಲ್ಲಿ ಎಣ್ಣೆಗಳು ಅಥವಾ ಕೊಬ್ಬುಗಳು ಜಲವಿಭಜನೆಗೊಂಡು ಕಾರ್ಬಾಕ್ಸಿಲಿಕ್ ಆಮ್ಲ ಮತ್ತು ಗ್ಲಿಸರಾಲ್ ಗಳಾಗುತ್ತದೆ. ಎರಡನೇ ಹಂತದಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ನಿಂದ ಸಾಬೂನೀಕರಣವಾಗುತ್ತದೆ.

36. PUFA ನ ವಿಸ್ತರಿಸಿ
ಬಹು ಅಪರ್ಯಾಪ್ತ ಕೊಬ್ಬಿನಾಮ್ಲಗಳು
37. ಗ್ಲಿಸರಾಲ್ ಉಪಯೋಗ ತಿಳಿಸಿ.
ಎ. ಇದು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ
ಬಿ. ಇದು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ
ಸಿ. ಇದು ಸ್ಫೋಟಕಗಳು ತಯಾರಿಕೆಯಲ್ಲಿ ಬಳಸಲಾಗುತ್ತದೆ
ಡಿ. ಇದು ಮುಖದ ಕ್ರೀಮ್ ತಯಾರಿಕೆಯಲ್ಲಿ ಬಳಸಲಾಗುತ್ತದೆ

38. ಆವಿಶೀಲ ಹೈಡ್ರೋಕಾರ್ಬನ್ ಮಿಶ್ರಣಗಳ ಉಪಯೋಗ ತಿಳಿಸಿ.

ಆವಿಶೀಲ ಹೈಡ್ರೋಕಾರ್ಬನ್ ಮಿಶ್ರಣ ಕ್ಲೋರೋಪ್ಲೂರೋ ಕಾರ್ಬನ್ ಬದಲಿಗೆ ಏರೋಸಾಲ್ ಸ್ರ್ರೇಗಳಲ್ಲಿ ನೋದಕವಾಗಿ ಬಳಸುತ್ತಾರೆ ಏಕೆಂದರೆ ಸಿ.ಎಫ್.ಸಿ ಓಝೋನ್ ಪದರಕ್ಕೆ ಹಾನಿಕಾರಕ

39. ಅಲ್ಕೇನ್ ಗರಿಷ್ಟ ಸಂಖ್ಯೆಯ ಹೈಡ್ರೋಕಾರ್ಬನ್ ಹೊಂದಿರಲು ಕಾರಣವೇನು ?

ಕಾರ್ಬನ್ ಪರಮಾಣುಗಳ ನಡುವೆ ಏಕ ಬಂಧದಿಂದಾಗಿ, ಹೈಡ್ರೋಕಾರ್ಬನ್ ಗಳಲ್ಲಿ ಕಾರ್ಬನ್ ಪರಮಾಣು ಗರಿಷ್ಟ ಸಂಖ್ಯೆಯ ಹೈಡ್ರೋಕಾರ್ಬನ್ ಪರಮಾಣುಗಳೊಂದಿಗೆ ಸಹವೇಲೆನ್ಸಿಯ ಬಂಧವನ್ನು ಉಂಟುಮಾಡುತ್ತದೆ

40. ಈಥೇನ್ ಮತ್ತು ಈಥೀನ್ ಪರಮಾಣುಗಳ ನಡುವಣ ವ್ಯತ್ಯಾಸಗಳನ್ನು ತಿಳಿಸಿ

ಈಥೇನ್

ಈಥೀನ್

ಪರ್ಯಾಪ್ತ ಹೈಡ್ರೋಕಾರ್ಬನ್

ಪರ್ಯಾಪ್ತ ಹೈಡ್ರೋಕಾರ್ಬನ್

ಕಾರ್ಬನ್ ಪರಮಾಣುಗಳ ನಡುವೆ ಏಕಬಂಧವಿರುತ್ತದೆ

ಕಾರ್ಬನ್ ಪರಮಾಣುಗಳ ನಡುವೆ ದ್ವಿಬಂಧವಿರುತ್ತದೆ

ಕಾರ್ಬನ್ ಪರಮಾಣುಗಳು ಗರಿಷ್ಟ ಸಂಖ್ಯೆಯ ಹೈಡ್ರೋಜನ್ ಜೊತೆ ಜೋಡಿಸಲ್ಪಟ್ಟಿದೆ

ಗರಿಷ್ಟ ಸಂಖ್ಯೆಗಿಂತ ಕಡಿಮೆ ಸಂಖ್ಯೆಯ ಹೈಡ್ರೋಜನ್ ಜೊತೆ ಜೋಡಿಸಲ್ಪಟ್ಟಿದೆ

41. ಅಮೈನೋ ಆಮ್ಲ ಎಂದರೇನು ?ಉದಾ ಕೊಡಿ

ಕ್ರಿಯಾಗುಂಪುಗಳಾದ ಅಮೈನೋ ಗುಂಪು ಮತ್ತು ಕಾರ್ಬಾಕ್ಸಿಲಿಕ್ ಆಮ್ಲ ಗಳನ್ನು ಹೊಂದಿರುವ ಅಣುಗಳೇ ಅಮೈನೋ ಆಮ್ಲ. ಉದಾ :ಗ್ಲೈಸಿನ್ ಅತಿ ಚಿಕ್ಕ ಮತ್ತು ಸರಳ ಅಮೈನೋ ಆಮ್ಲ H2N-CH2-COOH

II.ಖಾಲಿ ಸ್ಥಾನಗಳು ತುಂಬಲು

1. ಹೈಡ್ರೋಕಾರ್ಬನ್ ಗಳು ಜಗತ್ತಿನ ವಿದ್ಯುತ್ ಶಕ್ತಿ ಮತ್ತು ಉಷ‍್ಣ ಶಕ್ತಿಯ ಪ್ರಮುಖ ಆಕರ

2. ಅಲ್ಕೇನ್ ಕುಟುಂಬದ ಮೊದಲ ಸದಸ್ಯ ಮೀಥೇನ್

3. ಅಲ್ಕೋಹಾಲ್ ಆಸಿಟಿಕ್ ಆಮ್ಲಗಳೊಂದಿಗೆ ವರ್ತಿಸಿದಾಗ ಉಂಟಾಗುವ ಸಂಯುಕ್ತ ಎಸ್ಟರ್
4. ಹೈಡ್ರೋಜನ್ ಹೊರತುಪಡಿಸಿದರೆ ಅತಿ ಹೆಚ್ಚಿನ ಸಂಯುಕ್ತ ಉಂಟುಮಾಡುವ ಧಾತು ಕಾರ್ಬನ್

5. H-H ಬಂಧದ ನಂತರ ಎರಡನೇ ಅತಿ ಬಲಿಷ್ಟ ಬಂಧ C-C

6. ಬರ್ಜಿಲಿಯಸ್ ಪ್ರಕಾರ ಕಾರ್ಬನಿಕ ಸಂಯುಕ್ತಗಳು ಜೀವಿಗಳಿಂದ ಪಡೆದವುಗಳಾಗಿವೆ.

7. ವೋಲರ್ ಸಾವಯವ ರಾಸಯನ ಶಾಸ್ತ್ರದ ನಿರೂಪಣೆಯನ್ನು ಪುನರ್ ವ್ಯಾಖ್ಯಾನಿಸಿದ.

8. 1982ರಲ್ಲಿ ಜರ್ಮನ್ನರು ವೋಲರ್ ನ ಸಾವಿನ ಶತಮಾನದ ನೆನಪಿಗೆ ಯೂರಿಯಾ ಅಣುರಚನೆಯ ಅಂಚೆ ಚೀಟಿ ಬಿಡುಗಡೆ ಮಾಡಿದರು.
9. ಉನ್ನತ ಹೈಡ್ರೋಕಾರ್ಬನ್ ತಮ್ಮ ಆವಿ ಸ್ಥಿತಿಯಲ್ಲಿ ವಿಶಿಷ್ಟ ವಾಸನೆ ಹೊಂದಿವೆ
10. ಓಝೋಕೆರೈಟ್ ನಿಂದ ಪಡೆದ ಮೇಣ ಉನ್ನತ ಆಲ್ಕೇನ್ ಹೊಂದಿರುತ್ತವೆ
11. ಗ್ರೀಕ್ ಭಾಷೆಯಲ್ಲಿ ಅಲಿಫ್ಯಾಟೋಸ್ ಎಂದರೆ ಕೊಬ್ಬು ಎಂದರ್ಥ
12. ಆಲ್ಕೇನ್ ಗಳನ್ನು ಪ್ಯಾರಾಫಿನ್ ಗಳೆಂದು ಕರೆಯಲಾಗುತ್ತದೆ .

13. ಅಲ್ಕೇನ್ ಗಳ ಅಂತ್ಯ ಪ್ರತ್ಯಯ ಏನ್

14. ಅಲ್ಕೀನ್ ಗಳ ಅಂತ್ಯ ಪ್ರತ್ಯಯ ಈನ್

15. ಅಲ್ಕೈನ್ ಗಳ ಅಂತ್ಯ ಪ್ರತ್ಯಯ ಐನ್

16. ಆಲ್ಕೀನ್ ಗಳನ್ನು ಒಲೆಫಿನ್ ಎಂದು ಕರೆಯಲಾಗುತ್ತದೆ

17. ಬೆಂಜಿನ್ ಉಂಗುರ ಸಿದ್ಧಾಂತ ಪ್ರತಿಪಾದಿಸಿದವನು ಕೆಕುಲೆ

18. ಮೂರು ಕಾರ್ಬನ್ ಗಳಿರುವ ಅಲ್ಕೋಹಾಲ್ ಪ್ರೋಪೆನಾಲ್

19. ಗ್ಲಿಸರಾಲ್ ನ IUPAC ಹೆಸರು 1,2,3-ಪ್ರೋಪೇನ್ ಟ್ರಯಾಲ್


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment