Saturday, 28 February 2015

ಸಸ್ಯ ಮತ್ತು ಪ್ರಾಣಿ ಅಂಗಾಂಶ - ೧೦ ನೇ ತರಗತಿ ವಿಜ್ಞಾನ ನೋಟ್ಸ್


22:33 |

ಅಧ್ಯಾಯ -6

ಸಸ್ಯ ಮತ್ತು ಪ್ರಾಣಿ ಅಂಗಾಂಶ

ಅಭ್ಯಾಸ

ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಬಿಟ್ಟ ಜಾಗವನ್ನು ಭರ್ತಿ ಮಾಡಿ

1. ಪೇರೆಂಕೈಮಾದ ಜೀವಕೋಶಗಳಲ್ಲಿ ಕ್ಲೋರೋಪ್ಲಾಸ್ಟ್ ಗಳಿದ್ದಲ್ಲಿ, ಅದಕ್ಕೆ ಈ ಹೆಸರಿದೆ__________

ಎ) ಏರೆಂಕೇಮಾ ಬಿ) ಕ್ಲೋರಂಕೈಮಾ ಸಿ) ಕೋಲಂಕೈಮಾ ಡಿ) ಸ್ಕ್ಲೀರಂಕೈಮಾ

2. ಫ್ಲೋಯಂ ಅಂಗಾಂಶದಲ್ಲಿನ ವಾಹಕ ಘಟಕಗಳು ______

ಎ) ಜರಡಿ ನಳಿಕೆಗಳು ಬಿ) ತಂತುಗಳು ಸಿ) ಟ್ರೇಕಿಯಾಗಳು ಡಿ) ಟ್ರೇಕಿಡ್ ಗಳು

3. ಕ್ಸೈಲಂ ಅಂಗಾಂಶವು ಸಾಗಾಣೆ ಮಾಡುವುದು _________

ಎ) ನೀರನ್ನು ಮಾತ್ರ ಬಿ) ಆಹಾರವನ್ನು ಮಾತ್ರ ಸಿ ) ಆಹಾರ ಮತ್ತು ನೀರು ಡಿ) ನೀರು ಮತ್ತು ಲವಣಗಳು

4. ಎಂಡೋಥೀಲಿಯಂ ಎಂಬ ಹೆಸರು ಇದಕ್ಕೆ ಅನ್ವಯಿಸುತ್ತದೆ ____________

ಎ) ಸ್ತಂಭಾಕೃತಿ ಅನುಲೇಪಕ ಬಿ) ಕಶಾಂಗ ಸಹಿತ ಅನುಲೇಪಕ ಸಿ) ಘನಾಕೃತಿ ಅನುಲೇಪಕ ಡಿ) ಚಪ್ಪಟೆ ಅನುಲೇಪಕ

5. ಪ್ರಾಣಿಗಳಲ್ಲಿ __________ದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.

ಎ) ಏರಿಯೋಲಾರ್ ಅಂಗಾಂಶ ಬಿ) ಮೃದ್ವಸ್ಥಿ ಅಂಗಾಂಶ ಸಿ) ಅಡಿಫೋಸ್ ಅಂಗಾಂಶ ಡಿ) ರೆಟಿಕ್ಯುಲಾರ್ ಅಂಗಾಂಶ

6. ನರ ಅಂಗಾಂಶದ ರಚನೆಯ ಮತ್ತು ಕಾರ್ಯದ ಮೂಲ ಘಟಕ ಇದು ___________

ಎ) ನ್ಯೂರಾನ್ ಬಿ) ಆಕ್ಸಾನ್ ಸಿ) ಡೆಂಡ್ರೈಟ್ ಡಿ) ಮಯಲಿನ್

ಈ ಕೆಳಗಿನ ಜೋಡಿಗಳಿಗೆ ಹೊಲಿಕೆ ಪದಗಳನ್ನು ನೀಡಿ

1. ಹೃದಯ : ಅನೈಚ್ಛಿಕ ಸ್ನಾಯು : : ಕಾಲುಗಳು : ಐಚ್ಛಿಕ ಸ್ನಾಯು

2. ಅಡಿಫೋಸ್ ಅಂಗಾಂಶ : ದೇಹದ ತಾಪ : : ಏರಿಯೋಲಾರ್ ಅಂಗಾಂಶ : ದೇಹದ ರಕ್ಷಣೆ ( ಚರ್ಮಕ್ಕೆ ಅಂಗಾಂಶ ಬಂಧಿಸುವುದು)

3. ಕ್ಷೈಲಂ : ನೀರಿನ ಸಾಗಾಣೆ : : ಫ್ಲೋಯಂ : ಆಹಾರ ಸಾಗಾಣಿಕೆ

4. ಕ್ಯಾಲ್ಸಿಯಂ : ಮೂಳೆ : : ಕಬ್ಬಿಣ : ರಕ್ತ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಅಂಗಾಂಶ ಎಂದರೇನು ?

ಒಂದು ನಿರ್ದಿಷ್ಟ ಮೂಲದಿಂದ ಬಂದ, ಒಂದೇ ರೀತಿಯ ರಚನೆ ಹಾಗೂ ಕಾರ್ಯ ಗಳನ್ನು ಮಾಡುವ ಜೀವಕೋಶದ ಗುಂಪಿಗೆ ಅಂಗಾಂಶ ಎನ್ನುವರು.

2. ಅನುಲೇಪಕ ಅಂಗಾಂಶದ ಕಾರ್ಯಗಳೇನು ?

· ಚರ್ಮದಲ್ಲಿ ಅನುಲೇಪಕ ಅಂಗಾಂಶವು ತಮ್ಮ ಕೆಳಗಿರುವ ಅಂಗಾಂಶಗಳನ್ನು ರಕ್ಷಿಸುವ ಒಂದು ದಪ್ಪ ಪೊರೆಯಂತೆ ಕೆಲಸ ಮಾಡುತ್ತದೆ

· ದೇಹದ ತಾಪಮಾನವನ್ನು ಕಾಪಾಡುವಲ್ಲಿ ನೆರವಾಗುತ್ತದೆ.

· ಜ್ಞಾನೇಂದ್ರಿಯಗಳಲ್ಲಿರುವ ಅನುಲೇಪಕ ಅಂಗಾಂಶದಲ್ಲಿ ವಿಶಿಷ್ಟ ಗ್ರಾಹಕ ಕೋಶಗಳಿವೆ

· ಕಶಾಂಗ ಸಹಿತ ಅನುಲೇಪಕ ಅಂಗಾಂಶವು ವಸ್ತುಗಳ ಸಾಗಾಣಿಕೆಯಲ್ಲಿ ನೆರವಾಗುತ್ತದೆ

· ಪೋಷಕಾಂಶಗಳ ಹೀರಿಕೆ ಮತ್ತು ತ್ಯಾಜ್ಯ ವಸ್ತುಗಳ ವಿಸರ್ಜನೆಯಲ್ಲಿ ನೆರವಾಗುತ್ತದೆ

3. ನೀರಿನ ಸಾಗಣೆ ಮಾಡುವ ಕ್ಸೈಲಂನ ಘಟಕಗಳನ್ನು ಹೆಸರಿಸಿ.

ಕ್ಸೈಲಂ ನಳಿಕೆ ಮತ್ತು ಟ್ರೇಕಿಡ್

4. ಫ್ಲೋಯಂ ಅಂಗಾಂಶದ ಆರ್ಥಿಕ ಪ್ರಾಮುಖ್ಯವೇನು ?

ಫ್ಲೋಯಂ ನಾರು ಆರ್ಥಿಕವಾಗಿ ತುಂಬಾ ಮಹತ್ವದಾಗಿದೆ. ಸೆಣಬು ಮತ್ತು ಹೆಂಪ್ ಗಳಲ್ಲಿನ ಫ್ಲೋಯಂ ನಾರು ಗೋಣಿಚೀಲ ಮತ್ತು ಹಗ್ಗ ತಯಾರಿಕೆಯಲ್ಲಿ ಬಳಸುತ್ತಾರೆ.

5. ಕ್ಸೈಲಂ ಮತ್ತು ಫ್ಲೋಯಂಗಳನ್ನು ವಾಹಕ ಅಂಗಾಂಶಗಳು ಎಂದು ಕರೆಯಲು ಕಾರಣವೇನು ?

ಕ್ಸೈಲಂ ನೀರು ಸಾಗಾಣಿಕೆಯಲ್ಲಿ ಮತ್ತು ಫ್ಲೋಯಂ ಆಹಾರ ಸಾಗಾಣಿಕೆಯಲ್ಲಿ ನೆರವು ಮಾಡುವುದರಿಂದ ಇವುಗಳಿಗೆ ವಾಹಕ ( ಸಾಗಾಣಿಕಾ ) ಅಂಗಾಂಶ ಎನ್ನುವರು.

6. ಏರಿಯೋಲಾರ್ ಅಂಗಾಂಶದ ಕಾರ್ಯಗಳೇನು ?

ಏರಿಯೋಲಾರ್ ಅಂಗಾಂಶವು ಚರ್ಮಕ್ಕೆ ಸ್ನಾಯುಗಳನ್ನು ಬಂಧಿಸುವಲ್ಲಿ ನೆರವಾಗುತ್ತದೆ. ಇವು ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ. ಏರಿಯೋಲಾರ್ ಅಂಗಾಂಶದಲ್ಲಿ ಕಂಡುಬರುವ ಮ್ಯಾಕ್ರೋಫೆಜ್ ಸೂಕ್ಷ್ಮಜೀವಿಗಳನ್ನು ಭಕ್ಷಿಸುವ ಮೂಲಕ ದೇಹಕ್ಕೆ ರಕ್ಷಣೆ ಕೊಡುತ್ತದೆ.

7. ದುಗ್ಥರಸ ದೇಹಕ್ಕೆ ಯಾವ ರೀತಿ ರಕ್ಷಣೆ ನೀಡುತ್ತದೆ ?

ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಅತ್ಯವಶ‍್ಯಕ ಘಟಕಗಳಾದ ಪ್ರತಿಕಾಯಗಳನ್ನು ದುಗ್ಥರಸ ಉತ್ಪಾದಿಸುತ್ತದೆ. ಒಂದು ಬಗೆಯ ಬಿಳಿ ರಕ್ತಕಣಗಳಾದ, ಲಿಂಫೋಸೈಟ್ ಕೋಶಗಳು ಬ್ಯಾಕ್ಟೀರಿಯಾ ಮತ್ತು ಅನವಶ್ಯಕ ವಸ್ತುಗಳನ್ನು ನಿರ್ಮೂಲನ ಮಾಡುವಲ್ಲಿ ನೆರವಾಗುತ್ತದೆ.

8. ಹೃದಯ ಸ್ನಾಯುವಿನ ವಿಶಿಷ್ಟ ಲಕ್ಷಣಗಳಾವುವು ?

· ಸ್ನಾಯು ತಂತುಗಳು ನೀಳವಾಗಿ ಕೊಳವೆಯಾಕಾರದಲ್ಲಿದ್ದು, ಶಾಖೆಗಳಾಗಿ ಒಡೆಯುತ್ತದೆ.

· ಶಾಖೆಗಳು ಪರಸ್ಪರ ಸಂಬಂಧಿಗಳು

· ಅನೈಚ್ಛಿಕ ಸ್ನಾಯುಗಳಾಗಿದ್ದು ಲಯಬದ್ಧವಾಗಿ ಸಂಕುಚನ ಮತ್ತು ವಿಕಸನ ತೋರುತ್ತವೆ.

· ಹೃದಯದಲ್ಲಿ ಮಾತ್ರ ಕಂಡುಬರುತ್ತದೆ

· ಈ ಸ್ನಾಯುಗಳು ಆಯಾಸಗೊಳ್ಳುವುದಿಲ್ಲ

ಹೆಚ್ಚುವರಿ ಪ್ರಶ್ನೆ

ಬಿಟ್ಟ ಸ‍್ಥಳ ತುಂಬಿರಿ

1. ಒಂದು ನಿರ್ದಿಷ್ಟ ಮೂಲದಿಂದ ಬಂದ, ಒಂದೇ ರೀತಿಯ ರಚನೆ ಹಾಗೂ ಕಾರ್ಯ ಗಳನ್ನು ಮಾಡುವ ಜೀವಕೋಶದ ಗುಂಪು- ಅಂಗಾಂಶ

2. ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಜೊತೆಗೂಡಿದ ಅಂಗಾಂಶಗಳ ಗುಂಪು – ಅಂಗ

3. ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಜೊತೆಗೂಡಿದ ಅಂಗಗಳ ಗುಂಪು- ಅಂಗ ವ್ಯವ್ಯಸ್ಥೆ

4. ಸಸ್ಯದ ಬೆಳವಣಿಗೆಗಾಗಿಯೇ ಇರುವ ಅಂಗಾಂಶ- ವರ್ಧನ ಅಂಗಾಂಶ

5. ಸಸ್ಯದ ಸುತ್ತಳತೆ ಹೆಚ್ಚುವುದಕ್ಕೆ ಕಾರಣವಾದ ಅಂಗಾಂಶ- ಪಾರ್ಶ್ವ ವರ್ಧನ ಅಂಗಾಂಶ

6. ಸಸ್ಯದ ಎತ್ತರ ಹೆಚ್ಚುವುದಕ್ಕೆ ಕಾರಣವಾಗುವ ಅಂಗಾಂಶ- ತುದಿ ವರ್ಧನ ಅಂಗಾಂಶ

7. ಎಲ್ಲಾ ಶಾಶ್ವತ ಅಂಗಾಂಶಗಳೂ ವರ್ಧನ ಅಂಗಾಂಶಗಳಿಂದಲೇ ಉತ್ಪತ್ತಿಯಾಗುವುದು.

8. ಒಂದೇ ರೀತಿಯ ಜೀವಕೋಶಗಳು ಹಾಗೂ ಒಂದೇ ರೀತಿಯ ಕಾರ್ಯ ನಿರ್ವಹಿಸುವ ಸಸ್ಯ ಅಂಗಾಂಶ – ಸರಳ ಶಾಶ್ವತ ಅಂಗಾಂಶ

9. ಹೂ, ಎಲೆ ಹಾಗೂ ಕಾಂಡಗಳ ಮೃದುತ್ವಕ್ಕೆ ಕಾರಣವಾದ ಅಂಗಾಂಶ- ಪೇರಂಕೈಮಾ

10. ಸಜೀವ ಆಧಾರ ಅಂಗಾಂಶ- ಕೋಲಂಕೈಮಾ

11. ನಿರ್ಜೀವ ಆಧಾರ ಅಂಗಾಂಶ- ಸ್ಕ್ಲೀರಂಕೈಮಾ

12. ಹಣ್ಣು ಮತ್ತು ಬೀಜದ ಕವಚಗಳಲ್ಲಿ ಕಂಡುಬರುವ ಸ್ಕ್ಲೀರಂಕೈಮಾ ಅಂಗಾಂಶ ವಿಧ- ಸ್ಕ್ಲೀರೈಡ್

13. ಕೋಲಂಕೈಮಾದ ಕೋಶಭಿತ್ತಿಯಲ್ಲಿ ಹೆಮಿ ಸೆಲ್ಯುಲೋಸ್ ಅಥವಾ ಪೆಕ್ಟಿನ್ ಕಂಡುಬರುತ್ತದೆ.

14. ಸ್ಕ್ಲೀರೈಡ್ ಗಳನ್ನು ಸಾಮಾನ್ಯವಾಗಿ ಕಲ್ಲುಕೋಶ ಎಂದು ಕರೆಯುವರು.

15. ಸಸ್ಯದ ನೀರು ಸಾಗಾಣಿಕಾ ಅಂಗಾಂಶ- ಕ್ಸೈಲಂ

16. ಸಸ್ಯದ ಆಹಾರ ಸಾಗಾಣಿಕಾ ಅಂಗಾಂಶ- ಫ್ಲೋಯಂ

17. ಚಪ್ಪಟೆ ಅನುಲೇಪಕ ಅಂಗಾಂಶವನ್ನು ನೆಲಗಚ್ಚು ಅಂಗಾಂಶ ಎಂದೂ ಕರೆಯುವರು.

18. ಸ್ನಾಯು ಅಂಗಾಂಶದ ಜೀವಕೋಶ – ಸ್ನಾಯು ತಂತು

19. ದೇಹದ ಭಾಗಗಳ ಚಲನೆಗೆ ಕಾರಣವಾದ ಅಂಗಾಂಶ – ಸ್ನಾಯು ಅಂಗಾಂಶ

20. ಸುಲಭವಾಗಿ ಆಯಾಸಗೊಳ್ಳದ ಸ್ನಾಯು- ಹೃದಯದ ಸ್ನಾಯು

21. ಹೃದಯದಲ್ಲಿ ಮಾತ್ರ ಕಂಡುಬರುವ ಸ್ನಾಯು- ಹೃದಯದ ಸ್ನಾಯು

22. ಸಂಯೋಜಕ ಅಂಗಾಂಶದ ಜೀವಕೋಶ ಮತ್ತು ತಂತು ಇರುವ ಭಾಗ -ಮಾತೃಕೆ

23. ಒತ್ತೋತ್ತಾಗಿ ಜೋಡಣೆಯಾದ ಕೊಬ್ಬು ಸಂಗ್ರಹವಿರುವ ಜೀವಕೋಶಗಳಿರುವ ಅಂಗಾಂಶ- ಅಡಿಫೋಸ್ಅಂಗಾಂಶ

24. ಸ್ನಾಯುಗಳನ್ನು ಮೂಳೆಗಳಿಗೆ ಜೋಡಿಸುವ ಅಂಗಾಂಶ- ಸ್ನಾಯು ಅಂಗಾಂಶ

25. ಮೂಳೆಗಳನ್ನು ಒಂದಕ್ಕೊಂದು ಬಂಧಿಸಲು ನೆರವಾಗುವ ಅಂಗಾಂಶ- ಅಸ್ಥಿರಜ್ಜು (ತಂತುಕಟ್ಟು)

26. ಅನ್ನನಾಳ, ಜಠರ ಮತ್ತು ಕರುಳುಗಳಲ್ಲಿ ಪರಿಕ್ರಮಣ ಚಲನೆಗೆ ಕಾರಣವಾದ ಸ್ನಾಯು-ಪಟ್ಟೆರಹಿತ ಸ್ನಾಯು

27. ಕೆಂಪು ರಕ್ತಕಣ ಹೊಂದಿರುವ ಕಬ್ಬಿಣದ ಅಂಶವಿರುವ ವರ್ಣಿಕೆ – ಹಿಮೋಗ್ಲೋಬಿನ್

28. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿರುವ ಕೆಂಪು ರಕ್ತ ಕಣಗಳ ಸಂಖ್ಯೆ – 4.5 ರಿಂದ 5.5 ಮಿಲಿಯನ್ ಕೋಶ/ಕ್ಯೂ.ಮೀ.ಮೀ

29. ಕೆಂಪು ರಕ್ತಕಣಗಳ ಜೀವಿತಾವಧಿ- 100 ರಿಂದ 120 ದಿನಗಳು

30. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿರುವ ಬಿಳಿ ರಕ್ತ ಕಣಗಳ ಸಂಖ್ಯೆ – 6000 ರಿಂದ 10000 ಕೋಶ/ಕ್ಯೂ.ಮೀ.ಮೀ

31. ರಕ್ತಹೆಪ್ಪುಗಟ್ಟುವ ಸಹಾಯ ಮಾಡುವ ರಕ್ತಕಣ – ಕಿರುತಟ್ಟೆ

32. ಕಿರುತಟ್ಟೆಗಳು 1 cm3 ಗಾತ್ರದಲ್ಲಿ ಸುಮಾರು 2,50,000 ಇರುತ್ತದೆ

33. ನಮ್ಮ ದೇಹದ ಅತ್ಯಂತ ಸಣ್ಣ ಮೂಳೆ- ಮಧ್ಯ ಕಿವಿ ಮೂಳೆ ಗಳು

34. ರಕ್ತದಂತಿರುವ ಬಣ್ಣವಿಲ್ಲದಿರುವ ದ್ರವ- ದುಗ್ಧರಸ

35. ಪ್ರಚೋದನೆಗೆ ಪ್ರತಿಕ್ರಿಯಿಸುವ ಅಂಗಾಂಶ – ನರ ಅಂಗಾಂಶ

36. ನರ ಅಂಗಾಂಶದ ರಚನೆಯ ಮತ್ತು ಕಾರ್ಯದ ಮೂಲಘಟಕ- ನರಕೋಶ

37. ಸ್ಕ್ಲೀರೆಂಕೈಮಾ ಜೀವಕೋಶದಲ್ಲಿ ಕೋಶದ್ರವ್ಯ ಮತ್ತು ಕೋಶಕೇಂದ್ರ ಲಿಗ್ನಿನ್ ನ ಸಂಗ್ರಹಣೆಯಿಂದ ಪಲ್ಲಟಗೊಳ್ಳುತ್ತದೆ.

38. ಜರಡಿನಾಳಗಳ ಜೊತೆ ಕಂಡು ಬಂದು ಆಹಾರದ ಸಾಗಾಣಿಕೆ ನಿಯಂತ್ರಿಸುವ ವಿಶಿಷ್ಟ ಜೀವಕೋಶ- ಸಂಗಾತಿ ಜೀವಕೋಶ

39. ಮೂಳೆ ಅಂಗಾಂಶದ ರಚನಾತ್ಮಕ ಘಟಕ – ಹಾವರ್ಷಿಯನ್ ವ್ಯವಸ್ಥೆ

40. ಆಕ್ಸಾನ್ ತನ್ನ ತುದಿಯಲ್ಲಿ ಹೊಂದಿರುವ ಶಾಖೆಗಳು – ಟಿಲೋಡೆಂಡ್ರಾನ್

41. ದುಗ್ಥರಸದಲ್ಲಿ ಕೆಂಪು ರಕ್ತಕಣ ಮತ್ತು ಕೆಲವು ಪ್ರೋಟೀನ್ ಗಳು ಇರುವುದಿಲ್ಲ

42. ನಮ್ಮ ದೇಹದ ಒಟ್ಟು ತೂಕದ ಬಹುಭಾಗಕ್ಕೆ ಕಾರಣವಾದ ಅಂಗಾಂಶ- ಮೂಳೆ

ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ

1. ವರ್ಧನ ಅಂಗಾಂಶವನ್ನು ಬೆಳವಣಿಗೆ ಅಂಗಾಂಶ ಎನ್ನುವರು ಏಕೆ ?

ವರ್ಧನ ಅಂಗಾಂಶ ನಿರಂತರವಾಗಿ ವಿಭಜನೆಯಾಗುತ್ತಿರುವ ಭ್ರೂಣಕೋಶಗಳಿಂದ ಕೂಡಿದೆ. ಆದ್ದರಿಂದ ಇದನ್ನು ಬೆಳವಣಿಗೆ ಅಂಗಾಂಶ ಎನ್ನುವರು.

2. ವರ್ಧನ ಅಂಗಾಂಶದ ಎರಡು ರೀತಿಗಳು ಯಾವುವು ? ಅವುಗಳ ಕಾರ್ಯ ತಿಳಿಸಿ

ವರ್ಧನ ಅಂಗಾಂಶದ ಎರಡು ವಿಧಗಳು - ಪಾರ್ಶ್ವ ವರ್ಧನ ಅಂಗಾಂಶ ಮತ್ತು ತುದಿ ವರ್ಧನ ಅಂಗಾಂಶ

ಪಾರ್ಶ್ವ ವರ್ಧನ ಅಂಗಾಂಶ- ಕಾಂಡದ ತುದಿಯಲ್ಲಿ ಸಕ್ರೀಯವಾಗಿದ್ದು, ಸಸ್ಯದ ಸುತ್ತಳತೆ ಹೆಚ್ಚುವುದಕ್ಕೆ ಕಾರಣವಾದ ಅಂಗಾಂಶ

ತುದಿ ವರ್ಧನ ಅಂಗಾಂಶ- ಸಸ್ಯದ ಎತ್ತರ ಹೆಚ್ಚುವುದಕ್ಕೆ ಕಾರಣವಾಗುವ ಅಂಗಾಂಶ

3. ಶಾಶ್ವತ ಅಂಗಾಂಶದ ಎರಡು ಪ್ರಮುಖ ಗುಂಪುಗಳನ್ನು ಹೆಸರಿಸಿ

ಸರಳ ಶಾಶ್ವತ ಅಂಗಾಂಶ ಮತ್ತು ಸಂಕೀರ್ಣ ಶಾಶ್ವತ ಅಂಗಾಂಶ

4. ವರ್ಧನ ಅಂಗಾಂಶ ಎಲ್ಲಿ ಕಂಡು ಬರುತ್ತದೆ ?

ಬೇರಿನ ತುದಿ, ಕಾಂಡದ ತುದಿ, ಮೊಗ್ಗು ಇತ್ಯಾದಿಗಳಲ್ಲಿ ಕಂಡುಬರುತ್ತದೆ.

5. ಕ್ಲೋರಂಕೈಮಾ ಎಂದರೇನು ?

ಪೇರಂಕೈಮಾ ಜೀವಕೋಶಗಳಲ್ಲಿ ಕ್ಲೋರೋಪ್ಲಾಸ್ಟ್ ಗಳು ಕಂಡುಬಂದಲ್ಲಿ, ಅದಕ್ಕೆ ಕ್ಲೋರಂಕೈಮಾ ಎನ್ನುವರು. ಇದು ದ್ಯುತಿ ಸಂಶ್ಲೇಷಣೆಯಲ್ಲಿ ಪಾಲ್ಗೊಳ್ಳುತ್ತದೆ.

6. ಏರಂಕೈಮಾ ಎಂದರೇನು ?

ಸಡಿಲವಾಗಿ ಜೋಡಣೆಗೊಂಡಿದ್ದು, ಅಂತರ್ ಕೋಶಾವಕಾಶಗಳಲ್ಲಿ ಗಾಳಿ ತುಂಬಿಕೊಂಡಿರುವ ಪೇರಂಕೈಮಾ ಜೀವಕೋಶಗಳನ್ನು ಏರಂಕೈಮಾ ಎನ್ನುವರು.

7. ವರ್ಧನ ಅಂಗಾಂಶದ ಜೀವಕೋಶಗಳ ಲಕ್ಷಣಗಳನ್ನು ತಿಳಿಸಿ

· ಕೋಶಭಿತ್ತಿ ತೆಳುವಾಗಿದೆ

· ಜೀವಕೋಶಗಳು ನಿರಂತರ ವಿಭಜನೆಯಿಂದಾಗಿ ಬೆಳವಣಿಗೆಗೆ ಕಾರಣವಾಗುತ್ತದೆ

· ಜೀವಕೋಶಗಳು ಒತ್ತೊತ್ತಾಗಿ ಜೋಡಣೆಯಾಗಿದ್ದು ನಡುವೆ ಅಂತರ್ ಕೋಶೀಯ ಅವಕಾಶಗಳಿರುವುದಿಲ್ಲ

· ದೊಡ್ಡ ಕೋಶಕೇಂದ್ರಗಳಿರುತ್ತದೆ. ಆದರೆ ಪ್ಲಾಸ್ಟಿಡ್ ಗಳಿರುವುದಿಲ್ಲ

· ಕೋಶಾವಕಾಶಗಳು ಚಿಕ್ಕದಿರಬಹುದು ಅಥವಾ ಇಲ್ಲದಿರಬಹುದು

8. ಸರಳ ಶಾಶ್ವತ ಅಂಗಾಂಶ ಎಂದರೇನು ? ಇದರ ವಿಧಗಳನ್ನು ಹೆಸರಿಸಿ.

ಸರಳ ಶಾಶ್ವತ ಅಂಗಾಂಶಗಳಲ್ಲಿ ಎಲ್ಲಾ ಜೀವಕೋಶಗಳು ಒಂದೇ ರೀತಿಯಲ್ಲಿದ್ದು, ಒಂದೇ ರೀತಿಯ ಕಾರ್ಯ ನಿರ್ವಹಿಸುತ್ತದೆ.

ಸರಳ ಶಾಶ್ವತ ಅಂಗಾಂಶಗಳಲ್ಲಿ ಮೂರು ವಿಧಗಳು. ಅವುಗಳೆಂದರೆ

ಪೇರಂಕೈಮಾ

ಕೊಲಂಕೈಮಾ

ಸ್ಕ್ಲೀರಂಕೈಮಾ

9. ಸ್ಕ್ಲೀರೈಡ್ ಗಳನ್ನು ಕಲ್ಲುಕೋಶಗಳು ಎಂದು ಕರೆಯಲು ಕಾರಣವೇನು ?

ಗುಂಪು ಗುಂಪಾಗಿ ಕಾಣುವ ಗಟ್ಟಿಕೋಶಗಳಿಗೆ ಸ್ಕ್ಲೀರೈಡ್ ಗಳು ಎಂದು ಹೆಸರು. ಇವುಗಳಲ್ಲಿ ಲಿಗ್ನಿನ್ನ ಪ್ರಮಾಣ ನಾರು ಕೋಶಗಳಿಗಇಂತ ಹೆಚ್ಚಿದೆ. ಹೀಗಾಗಿ ಇವುಗಳನ್ನು ಕಲ್ಲುಕೋಶ ಎನ್ನುವರು.

10. ಸ್ಕ್ಲೀರಂಕೈಮಾ ನಾರುಗಳು ಆರ್ಥಿಕ ಪ್ರಾಮುಖ್ಯತೆ ತಿಳಿಸಿ

ನಾರು ಕೋಶಗಳಲ್ಲಿ ನಮ್ಯತೆ ಹಾಗೂ ಸ್ಥಿತಿಸ್ಥಾಪಕತ್ವದ ಸಾಮರ್ಥ್ಯವಿರುವುದರಿಂದ ಇವುಗಳನ್ನು ಗೋಣಿಚೀಲ ಮತ್ತು ಹಗ್ಗ ತಯಾರಿಕೆಯಲ್ಲಿ ಬಳಸುವರು.

11. ಕ್ಸೈಲಂ ನಾಲ್ಕು ಘಟಕಗಳನ್ನು ಹೆಸರಿಸಿ.

ಕ್ಸೈಲಂ ಪೇರಂಕೈಮಾ, ಕ್ಸೈಲಂ ನಾರು, ಕ್ಸೈಲಂ ನಳಿಕೆ ಮತ್ತು ಟ್ರೇಕಿಡ್

12. ಕ್ಸೈಲಂ ನ ಕಾರ್ಯಗಳೇನು ?

ಕ್ಸೈಲಂ ಬೇರಿನಿಂದ ಹೀರಲ್ಪಟ್ಟ ನೀರು ಮತ್ತು ಖನಿಜಾಂಶಗಳನ್ನು ಸಸ್ಯದ ದೇಹದ ಎಲ್ಲಾ ಭಾಗಗಳಿಗೆ ಸಾಗಿಸುವ ಅಂಗಾಂಶ. ಇದನ್ನು ನೀರು ಸಾಗಾಣಿಕಾ ಅಂಗಾಂಶ ಎಂದೂ ಹೆಸರಿದೆ. ಇದರ ಜೊತಗೆ ಸಸ್ಯದ ವಿವಿಧ ಭಾಗಗಳಿಗೆ ಯಾಂತ್ರಿಕ ಆಧಾರ ನೀಡುತ್ತದೆ.

13. ಫ್ಲೋಯಂನ ನಾಲ್ಕು ಘಟಕಗಳನ್ನು ಹೆಸರಿಸಿ.

ಜರಡಿ ನಾಳಗಳು, ಸಂಗಾತಿ ಜೀವಕೋಶಗಳು, ಫ್ಲೋಯಂ ಪೇರಂಕೈಮಾ , ಫ್ಲೋಯಂ ನಾರು

14. ಸಂಗಾತಿ ಜೀವಕೋಶ ಎಂದರೇನು ?

ಜರಡಿನಾಳಗಳ ಜೊತೆ ಕಂಡು ಬಂದು ಆಹಾರದ ಸಾಗಾಣಿಕೆ ನಿಯಂತ್ರಿಸುವ ವಿಶಿಷ್ಟ ಜೀವಕೋಶವನ್ನು ಸಂಗಾತಿ ಜೀವಕೋಶ ಎನ್ನುವರು.

15. ಜರಡಿ ತಟ್ಟೆ ಎಂದರೇನು ?

ಜರಡಿ ನಾಳಗಳಲ್ಲಿ ಒಂದರ ಮೇಲೋಂದು ಜೋಡಣೆಯಾಗಿರುವ ನೀಳ ಜೀವಕೋಶಗಳಿವೆ. ಇವುಗಳ ನಡುವೆ ಅನೇಕ ಸೂಕ್ಷ್ಮ ರಂಧ್ರವಿರುವ ತಟ್ಟೆಯಾಕಾರದ ರಚನೆಗಳಿದ್ದು ಇದನ್ನು ಜರಡಿ ತಟ್ಟೆ ಎನ್ನುವರು.

16. ಹೊರದರ್ಮ ಅಂಗಾಂಶ ಎಂದರೇನು ?

ಸಸ್ಯದ ಅತ್ಯಂತ ಹೊರಹೊದಿಕೆಯು ಒಂದು ರಕ್ಷಣಾತ್ಮಕ ಅಂಗಾಂಶದಿಂದ ಉಂಟಾಗಿದೆ. ಇದಕ್ಕೆ ಹೊರದರ್ಮ ಎನ್ನುವರು.

17. ಹೊರದರ್ಮ ಅಂಗಾಂಶ ಕಾರ್ಯ ತಿಳಿಸಿ

· ಇತರ ಅಂಗಾಂಶಗಳನ್ನು ಸುತ್ತವರೆದು ರಕ್ಷಿಸುವ ಕಾರ್ಯ ಮಾಡುತ್ತದೆ

· ಮಣ್ಣಿನಿಂದ ಮೇಲೆ ಭಾಷ್ಪವಿಸರ್ಜನೆ ತಡೆಯುತ್ತದೆ

· ನೀರಿನ ನಷ್ಟ ತಡೆಯಲು ಕ್ಯುಟಿಕಲ್ ಎಂಬ ಮೇಣದ ಹೊದಿಕೆಯನ್ನು ಸ್ರವಿಸುತ್ತದೆ

· ಬೇರನಲ್ಲಿ ಬೇರು ಕೂದಲುಗಳ ರೂಪದಲ್ಲಿ ನೀರು ಹೀರಿಕೋಳ್ಳಲು ನೆರವಾಗುತ್ತದೆ

· ಎಲೆಗಳಲ್ಲಿ ಪತ್ರರಂಧ್ರಗಳ ರೂಪದಲ್ಲಿ ಅನಿಲಗಳ ವಿನಿಮಯ ಮತ್ತು ಭಾಷ್ಪವಿಸರ್ಜನೆ ನಿಯಂತ್ರಿಸುತ್ತದೆ

18. ಪತ್ರರಂಧ್ರಗಳು ಎಂದರೇನು ?

ಎಲೆಗಳ ಹೊರದರ್ಮದಲ್ಲಿ ಕಂಡುಬರುವ ಸೂಕ್ಷ್ಮ ರಂಧ್ರಗಳನ್ನು ಪತ್ರರಂಧ್ರ ಎನ್ನುವರು.

19. ಪ್ರಾಣಿ ಅಂಗಾಂಶದ ವಿಧಗಳನ್ನು ಹೆಸರಿಸಿ

ಪ್ರಾಣಿಗಳಲ್ಲಿ ನಾಲ್ಕು ಬಗೆಯ ಮೂಲ ಅಂಗಾಂಶಗಳಿವೆ. ಅವುಗಳೆಂದರೆ

· ಅನುಲೇಪಕ ಅಂಗಾಂಶ

· ಸ್ನಾಯು ಅಂಗಾಂಶ

· ಸಂಯೋಜಕ ಅಂಗಾಂಶ

· ನರ ಅಂಗಾಂಶ

20. ಅನುಲೇಪಕ ಅಂಗಾಂಶ ಎಂದರೇನು ?

ದೇಹದ ವಿವಿಧ ಭಾಗಗಳ ಒಳ ಭಾಗದಲ್ಲಿ ಮತ್ತು ಹೊರಭಾಗದಲ್ಲಿ ಹೊದಿಕೆಯಾಗಿ ಕಂಡುಬರುವ ಸರಳ ಅಂಗಾಂಶವೇ ಅನುಲೇಪಕ ಅಂಗಾಂಶ

21. ಅನುಲೇಪಕ ಅಂಗಾಂಶದ ವಿಧಗಳನ್ನು ಹೆಸರಿಸಿ. ಅವುಗಳ ಆಕಾರ. ಕಾರ್ಯ ತಿಳಿಸಿ

ಅನುಲೇಪಕ ಅಂಗಾಂಶ

ಜೀವಕೋಶದ ಆಕಾರ

ಸ್ಥಾನ ( ಕಂಡು ಬರುವುದು)

ಕಾರ್ಯ

1.ಚಪ್ಪಟೆ ಅನುಲೇಪಕ

ಚಪ್ಪಟೆ ಬಹುಭುಜಾಕೃತಿ

ವಾಯುಕೂಪಿಕೆ, ಅನ್ನನಾಳ, ರಕ್ತನಾಳ,ಲೋಮನಾಳ, ಹೃದಯದ ಕೋಣೆ

ವಸ್ತುಗಳ ವಿಸರಣೆ

2.ಸ್ತಂಭಾಕೃತಿ ಅನುಲೇಪಕ

ನೀಳವಾದ ಜೀವಕೋಶ

ಆಹಾರ ನಾಳ, ಗ್ರಂಥಿಗಳ ಒಳಸ್ಥರಿ

ಸ್ರವಿಕೆ, ವಸ್ತುಗಳ ಸಾಗಣೆ

3. ಘನಾಕೃತಿ ಅನುಲೇಪಕ

ಘನಾಕೃತಿ ಜೀವಕೋಶ

ಮೇದೋಜೀರಕ , ಲಾಲಾರಸ ,ಬೆವರಿನ ಗ್ರಂಥಿಗಳ ಗ್ರಂಥಿ ನಾಳಗಳಲ್ಲಿ

ಗ್ರಂಥಿಗಳಲ್ಲಿ ಸ್ರವಿಕೆ ಕಾರ್ಯ

4. ಕಶಾಂಗ ಸಹಿತ ಸ್ತಂಭ ಅನಲೇಪಕ

ಸ್ತಂಭ ಅನಲೇಪಕ ಹೊರಭಾಗದಲ್ಲಿ ಕೂದಲಿನಂತಹ ರಚನೆಗಳಿರುತ್ತದೆ

 

ಸ್ರವಿಕೆಗಳ ಸಾಗಾಣಿಕೆಯಲ್ಲಿ ನೆರವಾಗುತ್ತದೆ

22. ಕಶಾಂಗ ಸಹಿತ ಸ್ತಂಭ ಅನಲೇಪಕ ಅಂಗಾಂಶ ಎಂದರೇನು ?

ಸ್ತಂಭಾಕೃತಿ ಅನುಲೇಪಕ ಅಂಗಾಂಶದ ಜೀವಕೋಶಗಳ ಹೊರಭಾಗದಲ್ಲಿ ಸೂಕ್ಷ್ಮ ಗಾತ್ರದ ಕೂದಲಿನಂತಹ ರಚನೆಗಳಿದ್ದರೆ ಅದನ್ನು ಕಶಾಂಗ ಸಹಿತ ಸ್ತಂಭ ಅನಲೇಪಕ ಅಂಗಾಂಶ ಎನ್ನುವರು.

23. ಸ್ನಾಯು ಅಂಗಾಂಶ ಎಂದರೇನು ? ಇದರ ವಿಧಗಳನ್ನು ಹೆಸರಿಸಿ

ದೇಹದ ಭಾಗಗಳ ಚಲನೆಗೆ ಕಾರಣವಾದ ಅಂಗಾಂಶ ಸ್ನಾಯು ಅಂಗಾಂಶ.

ರಚನೆ, ಸ್ಥಾನ ಮತ್ತು ಕಾರ್ಯದ ಆಧಾರದ ಮೇಲೆ ಮೂರು ಬಗೆಗಳು

· ಪಟ್ಟೆ ಸಹಿತ ಸ್ನಾಯು

· ಪಟ್ಟೆ ರಹಿತ ಸ್ನಾಯು

· ಹೃದಯದ ಸ್ನಾಯು

24. ಸ್ನಾಯುಗಳ ವಿಶೇಷ ಲಕ್ಷಣಗಳೇನು ?

ಸ್ನಾಯು ತಂತುಗಳು ಸಂಕುಚನ ಮತ್ತು ವಿಕಸನ ಕ್ರಿಯೆಗಳನ್ನು ತೋರುತ್ತವೆ. ಈ ಕ್ರಿಯೆ ದೇಹದ ಮಣಿಯುವಿಕೆ ಮತ್ತು ಚಲನೆಗೆ ಕಾರಣವಾಗಿದೆ.

25. ಪಟ್ಟೆಸಹಿತ ಮತ್ತು ಪಟ್ಟೆ ರಹಿತ ಸ್ನಾಯುಗಳ ನಡುವಿನ ವ್ಯತ್ಯಾಸ ತಿಳಿಸಿ

ಪಟ್ಟೆಸಹಿತ ಸ್ನಾಯು

ಪಟ್ಟೆ ರಹಿತ ಸ್ನಾಯು

ನೀಳ ಕೊಳವೆಯಾಕಾರದ ಶಾಖೆಯೊಡೆದ ಸ್ನಾಯು ತಂತುಗಳವೆ

ನೀಳವಾದ ಕದಿರಿನಾಕಾರದ ಸ್ನಾಯುತಂತುಗಳಿವೆ

ಸ್ನಾಯು ತಂತುಗಳಿಗೆ ಅಡ್ಡಪಟ್ಟಿಗಳಿರುತ್ತದೆ

ಸ್ನಾಯು ತಂತುಗಳಿಗೆ ಅಡ್ಡಪಟ್ಟಿಗಳಿರುವುದಿಲ್ಲ

ಸ್ನಾಯು ತಂತುಗಳಿಗೆ ಅನೇಕ ಕೋಶಕೇಂದ್ರಗಳಿರುತ್ತದೆ

ಸ್ನಾಯು ತಂತುಗಳಿಗೆ ಒಂದು ಕೋಶಕೇಂದ್ರ ಇರುತ್ತದೆ

ಮೂಳೆಗೆ ಅಂಟಿಕೊಂಡಿರುತ್ತದೆ

ಮೂಳೆಗೆ ಅಂಟ್ಟಿಕೊಮಡಿರುವುದಿಲ್ಲ

ಐಚ್ಛಿಕ ಸ್ನಾಯು

ಅನೈಚ್ಛಿಕ ಸ್ನಾಯು

ಕೈ, ಕಾಲುಗಳಲ್ಲಿ ಕಂಡುಬರುತ್ತದೆ

ಅನ್ನನಾಳ, ಜಠರ, ಕರುಳು.ಮೂತ್ರಪಿಂಡ, ರಕ್ತನಾಳ,ಗ್ರಂಥಿಗಳಲ್ಲಿ ಕಂಡುಬರುತ್ತದೆ

26. ಪಟ್ಟೆಸಹಿತ ಸ್ನಾಯಗಳನ್ನು ಅಸ್ಥಿ ಸ್ನಾಯು ಎನ್ನುವರು ಏಕೆ?

ಪಟ್ಟೆಸಹಿತ ಸ್ನಾಯಗಳು ಸಾಮಾನ್ಯವಾಗಿ ಮೂಳೆಗಳಿಗೆ ಅಂಟಿಕೊಂಡಿರುವುದರಿಂದ ಅಸ್ಥಿ ಸ್ನಾಯು ಎನ್ನುವರು.

27. ಸಂಯೋಜಕ ಅಂಗಾಂಶ ಎಂದರೇನು ?

ದೇಹದ ವಿವಿಧ ಅಂಗಾಂಶಗಳನ್ನು ಒಂದಕ್ಕೊಂದು ಹೊಂದಿಸುವ ಹಾಗೂ ದೇಹಕ್ಕೆ ಆಧಾರ ನೀಡುವ ವಿವಿಧ ಅಂಗಾಂಶಗಳನ್ನು ಸಂಯೋಜಕ ಅಂಗಾಂಶ ಎನ್ನುವರು.

28. ಸಂಯೋಜಕ ಅಂಗಾಂಶ ವಿಧಗಳನ್ನು ಹೆಸರಿಸಿ

ಸಂಯೋಜಕ ಅಂಗಾಂಶವನ್ನು ಮಾತೃಕೆಯ ಆಧಾರದ ಮೇಲೆ ಮೂರು ಬಗೆಗಳಾಗಿ ವರ್ಗೀಕರಿಸಿದೆ

· ಸಡಿಲ ಸಂಯೋಜಕ ಅಂಗಾಂಶ

· ದಟ್ಟ ಸಂಯೋಜಕ ಅಂಗಾಂಶ

· ದ್ರವರೂಪೀ ಸಂಯೋಜಕ ಅಂಗಾಂಶ

29. ಸಡಿಲ ಸಂಯೋಜಕ ಅಂಗಾಂಶ ಎಂದರೇನು ?

ಮಾತೃಕೆಯಲ್ಲಿ ತಂತುಗಳು ಅತ್ಯಂತ ಸಡಿಲವಾಗಿ ಜೋಡಣೆಯಾಗಿರುವ ಅಂಗಾಂಶವೇ ಸಡಿಲ ಸಂಯೋಜಕ ಅಂಗಾಂಶ

30. ಈಕೆಳಗಿನ ಸಡಿಲ ಸಂಯೋಜಕ ಅಂಗಾಂಶಗಳ ಕಾರ್ಯ ತಿಳಿಸಿ

ಏರಿಯೋಲಾರ್ ಅಂಗಾಂಶ : ಚರ್ಮಕ್ಕೆ ಸ್ನಾಯು ಬಂಧಿಸುವುದು, ಪ್ರತಿಕಾಯ ಉತ್ಪತ್ತಿ ಮಾಡುವುದು ಹಾಗೂ ಸೂಕ್ಷ್ಮ ಜೀವಿಗಳನ್ನು ಭಕ್ಷಿಸಿ ದೇಹಕ್ಕೆ ರಕ್ಷಣೆ ನೀಡುವುದು.

ಅಡಿಫೋಸ್ ಅಂಗಾಂಶ: ಕೊಬ್ಬು ಸಂಗ್ರಹಿಸುವುದು, ದೇಹದ ತಾಪಮಾನವನ್ನು ಕಾಪಾಡುವುದರ ಜೊತೆಗೆ ರಕ್ಷಣೆ ನೀಡುತ್ತದೆ

ಜಾಲರೂಪೀ ತಂತುಗಳ ಅಂಗಾಂಶ : ಪಿತ್ತಜನಕಾಂಗ, ಗುಲ್ಮ, ಅಸ್ಥಿರಜ್ಜು, ಟಾನ್ಸಿಲ್ ಗಳಿಗೆ ಅವಶ್ಯಕ ಆಧಾರ ನೀಡುವುದು.

ಸ್ನಾಯುರಜ್ಜು ಮತ್ತು ಅಸ್ಥಿರಜ್ಜು : ಸ್ನಾಯುಗಳನ್ನು ಮಳೆಗೆ ಮತ್ತು ಮೂಳೆ ಮಳೆಗೆ ಜೋಡಿಸುವುದು ಮತ್ತು ಮೂಳೆಗಳ ಚಲನೆಗೆಸಹಕಾರಿ

31. ದಟ್ಟ ಸಂಯೋಜಕ ಅಂಗಾಂಶ ಎಂದರೇನು ?

ಮಾತೃಕೆಯು ದಟ್ಟವಾಗಿರುವ ಅಂಗಾಂಶವೇ ದಟ್ಟ ಸಂಯೋಜಕ ಅಂಗಾಂಶ

32. ದಟ್ಟ ಸಂಯೋಜಕ ಅಂಗಾಂಶದ ವಿಧಗಳನ್ನು ತಿಳಿಸಿ

ದಟ್ಟ ಸಂಯೋಜಕ ಅಂಗಾಂಶವನ್ನು ಮೃದ್ವಸ್ಥಿ ಮತ್ತು ಮೂಳೆ ಅಂಗಾಂಶ ಎಂದು ವಿಂಗಡಿಸಲಾಗಿದೆ

33. ಮೃದ್ವಸ್ಥಿ ಅಂಗಾಂಶದ ರಚನೆಯನ್ನು ವಿವರಿಸಿ.

ಮೃದ್ವಸ್ಥಿಯಲ್ಲಿ ಕಾಂಡ್ರಿನ್ ಎಂಬ ಪಾರದರ್ಶಕ ಮಾತೃಕೆಯಿದೆ. ಮಾತೃಕೆಯ ಸ್ಥಳಾವಕಾಶದಲ್ಲಿ ಕಾಂಡ್ರೋಸೈಟ್ ಗಳೆಂಬ ಜೀವಕೋಶಗಳಿವೆ. ಇವು ಏಕಾಂಗಿ ಅಥವಾ ಎರಡು ಮತ್ತು ನಾಲ್ಕರ ಗುಂಪಿನಲ್ಲಿರಬಹುದು. ಇದು ಮಾತೃಕೆಯನ್ನು ಸ್ರವಿಸುತ್ತದೆ.ಮಾತೃಕೆಯು ಬಿಳಿ ಮತ್ತು ಹಳದಿ ತಂತುಗಳಿಂದ ಕೂಡಿದೆ. ಹೊರಭಾಗದಲ್ಲಿ ಪೆರಿಕಾಂಡ್ರಿಯಮ್ ಎಂಬ ಸಂಯೋಜಕ ಅಂಗಾಂಶದ ಹೊದಿಕೆಯಿದೆ

34. ಇಲ್ಯಾಸ್ಟಿಕ್ ಮೃದ್ವಸ್ಥಿ ಎಂದರೇನು ? ಇದು ಎಲ್ಲಿ ಕಂಡುಬರುತ್ತದೆ ?

ಮೃದಸ್ಥಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಯಾಸ್ಟಿಕ್ ತಂತುಗಳಿರುವ ಮೃದಸ್ಥಿಗೆ ಇಲ್ಯಾಸ್ಟಿಕ್ ಮೃದ್ವಸ್ಥಿ ಎಂದು ಹೆಸರು. ಇವು ಉಸಿರ್ನಾಳ ಮತ್ತು ಅದರ ಶಾಖೆ, ಧ್ವನಿಪೆಟ್ಟಿಗೆ, ಎಪಿಗ್ಲಾಟಿಸ್, ಯೂಸ್ಟೇಷಿಯನ್ ನಾಳ ಹಾಗೂ ಹೊರಕಿವಿಯಲ್ಲಿ ಕಂಡುಬರುತ್ತದೆ

35. ತಂತುರೂಪೀ ಮೃದ್ವಸ್ಥಿ ಎಂದರೇನು ? ಇದು ಎಲ್ಲಿ ಕಂಡುಬರುತ್ತದೆ ?

ಮೃದಸ್ಥಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಲ್ಯಾಜನ್ ತಂತುಗಳಿರುವ ಮೃದಸ್ಥಿಗೆ ತಂತುರೂಪೀ ಮೃದ್ವಸ್ಥಿ ಎಂದು ಹೆಸರು. ಕಶೇರುಕ ಮಣಿಗಳ ನಡುವೆ ಕಂಡುಬರುವುದು

36. ಅಸ್ಥಿಮಜ್ಜೆ ಎಂದರೇನು ?

ನೀಳವಾದ ಮತ್ತು ಬಲಿಷ್ಠವಾದ ಮೂಳೆಗಳಲ್ಲಿ ಕಂಡುಬರುವ ದ್ರವವನ್ನು ಅಸ್ಥಿಮಜ್ಜೆ ಎನ್ನುವರು.

37. ವೋಲ್ಕ್ ಮನ್ ನಾಳ ಎಂದರೇನು ?

ಹಾವರ್ಷಿಯನ್ ನಾಳಗಳು ಒಂದಕ್ಕೊಂದು ಸಂಪರ್ಕ ಸಾಧಿಸುವ ಅಡ್ಡನಾಳವೇ ವೋಲ್ಕ್ ಮನ್ ನಾಳ

38. ದ್ರವರೂಪೀ ಸಂಯೋಜಕ ಅಂಗಾಂಶದ ವಿಧಗಳನ್ನು ಹೆಸರಿಸಿ

* ರಕ್ತ * ದುಗ್ಥರಸ

39. ರಕ್ತದ ಘಟಕಗಳನ್ನು ಹೆಸರಿಸಿ

ದ್ರವರೂಪದ ಪ್ಲಾಸ್ಮ , ಕೆಂಪುರಕ್ತಕಣ, ಬಿಳಿ ರಕ್ತಕಣ, ಕಿರುತಟ್ಟೆ

40. ಬಿಳಿ ರಕ್ತಕಣ ಘಟಕಗಳನ್ನು ಹೆಸರಿಸಿ

ಕಣಸಹಿತ ಬಿಳಿ ರಕ್ತಕಣ – ನ್ಯೂಟ್ರೋಫಿಲ್,ಇಯೋಸಿನೋಫಿಲ್,ಬೇಸೋಫಿಲ್

ಕಣರಹಿತ ಬಿಳಿ ರಕ್ತಕಣ –ಮಾನೋಸೈಟ್,ಲಿಂಫೋಸೈಟ್

41. ನರಕೋಶ ರಚನೆಯನ್ನು ವಿವರಿಸಿ.

ನರಕೋಶದಲ್ಲಿ ಕೋಶಕೇಂದ್ರ ಹೊಂದಿರುವ ಕೋಶಕಾಯಕ್ಕೆ ಸೈಟಾನ್ ಎಂದು ಹೆಸರು. ಅದರಿಂದ ಹೊರಚಾಚುವ ಚಿಕ್ಕ ರಚನೆಗಳಿಗೆ ಡೆಂಡ್ರೈಟ್ ಎಂದು ಹೆಸರು.ಇದರಲ್ಲಿ ನೀಳವಾಗಿರುವ ಶಾಖೆಗೆ ಆಕ್ಸಾನ್ ಎಂದು ಹೆಸರು. ಆಕ್ಸಾನ್ ತುದಿಯಲ್ಲಿರುವ ಶಾಖೆಗಳಿಗೆ ಟಿಲೋಡೆಂಡ್ರಾನ್ ಎಂದು ಹೆಸರು. ಆಕ್ಸಾನ್ ಸುತ್ತ ಮಯಲಿನ್ ಹೊದಿಕೆ ಎಂಬ ಕೊಬ್ಬಿನ ಪದರವಿದೆ.

42. ಏರಿಯೋಲಾರ್ ಅಂಗಾಂಶದಲ್ಲಿನ ವಿವಿಧ ತಂತು ಮತ್ತು ಜೀವಕೋಶಗಳನ್ನು ಹೆಸರಿಸಿ

ತಂತುಗಳು :- ಬಿಳಿತಂತು (ಕೊಲ್ಯಾಜನ್ ), ಹಳದಿ ತಂತು (ಇಲ್ಯಾಸ್ಟಿಕ್), ಜಾಲರೂಪಿ ತಂತು

ಜೀವಕೋಶಗಳು : - ಫೈಬ್ರೋಬ್ಲಾಸ್ಟ್ ಪ್ಲಾಸ್ಮಾಕೋಶ ,ಮ್ಯಾಕ್ರೋಪೇಜ್, ಮಾಸ್ಟ್ ಕೋಶ

43. ಜಲಸಸ್ಯಗಳ ಎಲೆಗಳು ನೀರಿನಲ್ಲಿ ತೇಲಲು ಕಾರಣವೇನು ?

ಪೇರಂಕೈಮಾ ಜೀವಕೋಶಗಳು ಸಡಿಲವಾಗಿ ಜೋಡಣೆಗೊಂಡಿದ್ದು, ಅಂತರ್ ಕೋಶಾವಕಾಶಗಳಲ್ಲಿ ಗಾಳಿ ತುಂಬಿಕೊಂಡಿದೆ.

44. ನರಕೋಶದ ಅಂದವಾದ ಚಿತ್ರ ಬರೆದು ಭಾಗ

clip_image001clip_image002clip_image003clip_image004clip_image005clip_image006 clip_image008

.


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment