ಮುತ್ತಿನುಂಗುರಕ್ಕೇ ನಾರಿ ಬೆರಗಾದಳು
ಅವಳು ಮುತ್ತಿನಂಥ ಗಂಡನ ಬಿಟ್ಟು ಓಡಿ ಹೋದಳು ||ಪ||
ತುತ್ತೋ ಎತ್ತೋ ದಾಸಯ್ಯನ ನಂಬಿಕೊಂಡಳು
ಅವಳು ಜಾರಿ ಎಂಬ ಪಟ್ಟವನ್ನು ಕಟ್ಟಿಕೊಂಡಳು
ಆಯಾದಾ ಸಂಸಾರ ಬೇಡವೆಂದಳು
ಅವಳು ಹಾಲು ಕುಡಿಯೋ ಕಂದವನ್ನು ಬಿಟ್ಟು ಹೋದಳು ||ಪ||
ಹಾಡೋರೋ ಬಾಯಿಗೆ ಸುದ್ದಿಯಾದಳು
ಅವಳು ನೋಡೋರ ಕಣ್ಣಿಗೆ ಬೇಡವಾದಳು
ಬದುಕಿದ್ದು ಸತ್ತಹಾಗೆ ಎಂದು ಕೊಂಡಳು
ಅವಳು ಜಾರಿ ಎಂಬ ಪಟ್ಟವನ್ನು ಕಟ್ಟಿಕೊಂಡಳು ||ಪ||
ಜನರೆಲ್ಲಾ ಇವಳ ಸರ್ವಸ್ವ ಎಂದರು
ಅವಳ ಜಾಣತನವ ತಿಳಿದುಕೊಂಡು ಅಸಹ್ಯಪಟ್ಟರು
ಅವಳಿಗೆ ಜಾರಿ ಎಂಬ ಪಟ್ಟವನ್ನು ಕಟ್ಟಿಬಿಟ್ಟರು
ಅವಳು ನಾಯಿಗಿಂತ ಕೀಳೆಂದು ತಿಳಿದುಕೊಂಡಳು ||ಪ||
You Might Also Like :
If you Like This Article,Then kindly linkback to this article by copying one of the codes below.
URL Of Post:
Paste This HTML Code On Your Page:
0 comments:
Post a comment