Monday, 3 June 2013

ಸ್ವರಗಳ ವಿಧಗಳು


07:26 |

ಸ್ವರಗಳಲ್ಲಿ ೩ ವಿಧಗಳುಂಟು, ಅವುಗಳೆಂದರೆ
೧. ಹ್ರಸ್ವಸ್ವರ
೨. ದೀರ್ಘಸ್ವರ
೩. ಪ್ಲುತಸ್ವರ

೧. ಹ್ರಸ್ವಸ್ವರ: ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸುವು ಸ್ವರಗಳಿಗೆ 'ಹ್ರಸ್ವಸ್ವರ' ಎಂದು ಹೆಸರು.
('ಅ' ಎಂಬ ಅಕ್ಷರವನ್ನು ಉಚ್ಚರಿಸಬಹುದಾದ ಕಾಲಕ್ಕೆ ಒಂದು ಮಾತ್ರಾಕಾಲ ಎಂದು ಹೆಸರು.)
ಕನ್ನಡದಲ್ಲಿ ಆರು ಹ್ರಸ್ವಸ್ವರಗಳಿವೆ. ಅವುಗಳೆಂದರೆ,
ಅ ಇ ಉ ಋ ಎ ಒ

೨. ದೀರ್ಘಸ್ವರ: ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರಗಳಿಗೆ "ದೀರ್ಘಸ್ವರ' ಎಂದು ಹೆಸರು.
ಕನ್ನಡದಲ್ಲಿ ಏಳು ದೀರ್ಘಸ್ವರಗಳಿಗೆ. ಅವುಗಳೆಂದರೆ,
ಆ ಈ ಊ ಏ ಐ ಓ ಔ

೩. ಪ್ಲುತಸ್ವರ: ಮೂರು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳನ್ನು 'ಪ್ಲುತ' ಎನ್ನುತ್ತಾರೆ.
ಉದಾಹಾರಣೆ: ಅಮ್ಮಾs , ದೇವರೇs.
ಕೊನೆಯ ಸ್ವರವನ್ನು ಎಳೆದು ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವುದರಿಂದ ಪ್ಲುತ ಎನಿಸುವವು


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment