Monday, 3 June 2013

ಕನ್ನಡ ವರ್ಣಮಾಲೆಯ ವಿಭಾಗಗಳು


07:22 |

ಕನ್ನಡ ವರ್ಣಮಾಲೆಯನ್ನು ೩ ಭಾಗವಾಗಿ ವಿಭಾಗಿಸಬಹುದು, ಅವುಗಳೆಂದರೆ
೧. ಸ್ವರಗಳು
೨. ವ್ಯಂಜನಗಳು
೩. ಯೋಗವಾಹಗಳು

೧. ಸ್ವರಗಳು: ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳಿಗೆ ಸ್ವರಗಳು ಎನ್ನುತ್ತೇವೆ.
ಕನ್ನಡ ವರ್ಣಮಾಲೆಯಲ್ಲಿ ಹದಿಮೂರು ಸ್ವರಗಳಿವೆ.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಆದುನಿಕ ವ್ಯಾಕರಣದಲ್ಲಿ ಋ ಧ್ವನಿಯನ್ನು ವ್ಯಂಜನವೆಂದೂ ಐ (ಅ+ಯ್) ಮತ್ತು ಔ(ಅ+ವ್) ಧ್ವನಿಗಳನ್ನು ಸಂಧ್ಯಕ್ಷರಗಳೆಂದೂ ಗುರುತಿಸುತ್ತಾರೆ.

೨. ವ್ಯಂಜನಗಳು:ಸ್ವರಗಳ ಸಹಾಯದಿಂದ ಉಚ್ಚಾರ ಮಾಡಲಾಗುವ ಅಕ್ಷರಗಳಿಗೆ ವ್ಯಂಜನಗಳೆಂದು ಹೆಸರು. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಮೂವತ್ತನಾಲ್ಕು ವ್ಯಂಜನಾಕ್ಷರಗಳಿವೆ.
ಕ್ ಖ್ ಗ್ ಘ್ ಙ್
ಚ್ ಛ್ ಚ್ ಝ್ ಞ್
ಟ್ ಠ್ ಡ್ ಢ್ ಣ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್

೩. ಯೋಗವಾಹಗಳು
ಯಾವುದಾದರೂ ಒಂದು ಅಕ್ಷರ ಸಂಬಂಧದಿಂದಲೇ ಉಚ್ಚರಿಸಲ್ಪಡುವವು ಯೋಗವಾಹಗಳು ಎನಿಸುತ್ತವೆ. ಇವಕ್ಕೆ ಸ್ವತಂತ್ರವಾದ ಉಚ್ಚಾರವಿಲ್ಲ. 'ಯೋಗ' ಎಂದರೆ ಸಂಬಂಧ 'ವಾಹ' ಎಂದರೆ ಹೊಂದಿದ ಎಂದು ಅರ್ಥ.
ಅನುಸ್ವಾರ : 0
ವಿಸರ್ಗ  : ಃ
ಅನುಸ್ವಾರ ಹಾಗೂ ವಿಸರ್ಗ ಸ್ವರ ಸಂಬಂಧ ಪಡೆದು ಉಚ್ಚಾರಣೆಗೊಳ್ಳುತ್ತವೆ. ಇದರಿಂದ ಅನುಸ್ವಾರ, ವಿಸರ್ಗಗಳನ್ನು ಅ ಕಾರದ ಮುಂದೆ ಬರೆಯುವುದು ವಾಡಿಕೆಯಾಗಿದೆ.
ಉದಾಹಾರಣೆ: ಅಂ ಅಃ


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment