Monday, 3 June 2013

ವ್ಯಂಜನಗಳ ವಿಧಗಳು


07:32 |

ವ್ಯಂಜನಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ,
೧. ವರ್ಗೀಯ ವ್ಯಂಜನಗಳು
೨. ಅವರ್ಗೀಯ ವ್ಯಂಜನಗಳು.

೧. ವರ್ಗೀಯ ವ್ಯಂಜನಗಳು
ಕ್ ನಿಂದ ಮ್ ವರೆಗಿನ ೨೫ ಅಕ್ಷರಗಳನ್ನು ವರ್ಗೀಯ ವ್ಯಂಜನಗಳು ಎನ್ನುವರು.
ಇಲ್ಲಿ ೫ ವರ್ಗಗಳಿವೆ. ಪ್ರತಿ ವರ್ಗದಲ್ಲಿಯೂ ತಲಾ ಐದೈದು ಅಕ್ಷರಗಳು. ಆಯಾಯ ವರ್ಗದ ಮೊದಲನೆಯ ಅಕ್ಷರದಿಂದಲೇ ವರ್ಗಗಳನ್ನು ಹೆಸರಿಸಲಾಗಿದೆ.
ಕ ವರ್ಗ- ಕ್ ಖ್ ಗ್ ಘ್ ಙ್
ಚ ವರ್ಗ- ಚ್ ಛ್ ಜ್ ಝ್ ಞ್
ಟ ವರ್ಗ- ಟ್ ಠ್ ಡ್ ಢ್ ಣ್
ತ ವರ್ಗ- ತ್ ಥ್ ದ್ ಧ್ ನ್
ಪ ವರ್ಗ- ಪ್ ಫ್ ಬ್ ಭ್ ಮ್

ಅಕ್ಷರಗಳನ್ನು ಉಚ್ಚರಿಸುವಾಗ ಅವುಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದರ ಆಧಾರದ ಮೇಲೆ ವರ್ಗೀಯ ವ್ಯಂಜನಗಳನ್ನು ವರ್ಗೀಕರಿಸಲಾಗಿದೆ. ಅವುಗಳೆಂದರೆ.
ಕ ಖ ಗ ಇ ಘ ಙ ಇವು ಕಂಠದಲ್ಲಿ ಹುಟ್ಟುತ್ತವಾದ್ದರಿಂದ ಇವುಗಳು ಕಂಠಕ್ಷರಗಳು.
ಚ ಛ ಜ ಝ ಞ ಇವುಗಳು ತಾಲುವಿನಲ್ಲಿ ಹುಟ್ಟುತ್ತವೆ. ಹಾಗಾಗಿ ಇವು ತಾಲವ್ಯ ಅಕ್ಷರಗಳು.
ಟ ಠ ಡ ಢ ಣ ಇವುಗಳು ಹುಟ್ಟುವ ಸ್ಥಳ ಮೂರ್ಧ ಬಾಯಿಯ ಮೇಲ್ಬಾಗ ನಾಲಿಗೆಯನ್ನು ಹಿಂಚಾಚಿ ಬಾಯಿಯ ಮೇಲ್ಬಾಗವನ್ನು ಸ್ಪರ್ಶಿಸಿ ಅಕ್ಷರವನ್ನು ಉಚ್ಚರಿಸಲಾಗುತ್ತದೆ. ಹಾಗಾಗಿ ಇವು ಮೂರ್ಧನ್ಯಾಕ್ಷರಗಳು.
ತ ಥ ದ ಧ ನ ಇವುಗಳು ಹುಟ್ಟುವ ಸ್ಥಳ ಹಲ್ಲುಗಳ ಬಳಿ. ಹಾಗಾಗಿ ಇವು ದಂತ್ಯಾಕ್ಷರಗಳು.
ಪ ಫ ಬ ಭ ಮ ಇವುಗಳು ತುಟುಗಳ ಸಹಾಯದಿಂದ ಉಚ್ಚರಿಸಲ್ಪಡುವುದರಿಂದ ಇವುಗಳನ್ನು ಓಷ್ಠ್ಯ ಅಕ್ಷರಗಳು ಎನ್ನಲಾಗಿದೆ.

ವರ್ಗೀಯ ವ್ಯಂಜನಗಳಲ್ಲಿ 'ಅಲ್ಪಪ್ರಾಣ' , 'ಮಹಾಪ್ರಾಣ' ಮತ್ತು 'ಅನುನಾಸಿಕ' ಎಂದು ಮೂರು ಬಗೆಗಳಿವೆ.
ಅಲ್ಪಪ್ರಾಣ: ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳು.
ಕ್ ಚ್ ಟ್ ತ್ ಪ್ ಗ್ ಜ್ ಡ್ ದ್ ಬ್
ಮಹಾಪ್ರಾಣ: ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಚರಗಳು.
ಖ್ ಛ್ ಠ್ ಥ್ ಫ್ ಘ್ ಝ್ ಢ್ ಧ್ ಭ್
ಅನುನಾಸಿಕಗಳು: ಮೂಗಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರಗಳು.
ಙ್ ಞ್ ಣ್ ನ್ ಮ್

೨. ಅವರ್ಗೀಯ ವ್ಯಂಜನಗಳು.
ಯ್ ನಿಂದ ಳ್ ವರೆಗಿನ ಒಂಬತ್ತು ಅಕ್ಷರಗಳು ಅವರ್ಗೀಯ ವ್ಯಂಜನಗಳೂ.
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್. 


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment