Friday, 1 March 2013

ಮೇರಿ ಕ್ಯೂರಿ


19:06 |

ಮೇರಿ ಕ್ಯೂರಿ ಪೋಲೆಂಡಿನ ರಾಜಧಾನಿ ವಾರ್ಸಾದಲ್ಲಿ 7/ನವೆಂಬರ್/1867 ರಲ್ಲಿ ಜನಿಸಿದರು. ಪ್ರೌಢಶಾಲೆ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದರು. ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿಶ್ವವಿದ್ಯಾನಿಲಯದ ಪ್ರವೇಶ ಬಯಸಿದಾಗ ಹುಡಿಗಿ ಎನ್ನುವ ಕಾರಣಕ್ಕಾಗಿ ಮೇರಿಗೆ ಪ್ರವೇಶ ಸಿಗಲಿಲ್ಲ ನಂತರ ಪ್ಯಾರಿಸ್ಸಿಗೆ ತೆರಳಿ ಸಾಬಾನ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ. ಪದವಿ ಪಡೆದರು.
1895 ರಲ್ಲಿ 'ಪಿಯಾರೆ ಕ್ಯೂರಿ' ಎಂಬ ವಿಜ್ಞಾನಿಯನ್ನು ಮದುವೆಯಾದರು. ತನ್ನ ಪತಿಯೊಡನೆ ವೈಜ್ಞಾನಿಕ ಸಂಶೋದನೆಗಳನ್ನು ಮುಂದುವೆರೆಸಿ " ಯುರೇನಿಯಮ್" ಅನ್ನು ಆವಿಪ್ಕಾರಿಸಿದರು. ಮುಂದೆ ' ರೇಡಿಯಂ ' ಎಂಬ ಮೂಲ ವಸ್ತು ಕಂಡುಹಿಡಿದರು. ಇದರ ಆವಿಷ್ಕಾರಕ್ಕಾಗಿ 1903 ರಲ್ಲಿ ಫ್ರಂಚ್ ವಿಜ್ಞಾನಿ ಬೆಕೆರಲ್ಲ ಜೊತೆಯಲ್ಲಿ ' ನೋಬಲ್ ' ಬಹುಮಾನ ಪಡೆದರು. ಪುನಃ 1911 ರಲ್ಲಿ ರೇಡಿಯಂ ಮತ್ತು ಪೋಲೇನಿಯಂ ಪ್ರತ್ಯೇಕಿಸಿ ರಾಸಾಯನಶಾಸ್ತ್ರದ ' ನೋಬಲ್ ' ಬಹುಮಾನ ಪಡೆದರು. ಜಗತ್ತಿನಲ್ಲಿ ಎರಡನೆ ಬಾರಿ ನೋಬಲರ ಬಹುಮಾನ ಪಡೆದ ಏಕೈಕ ಮಹಿಳಾ ವಿಜ್ಞಾನಿ ಮೇರಿ ಕ್ಯೂರಿಯವರು. ಮೇರಿಕ್ಯೂರಿಯವರು ತಾವೇ ಕಂಡುಹಿಡಿದ ರೇಡಿಯಂ ವಿಕಿರಣಕ್ಕೆ ಗುರಿಯಾಗಿ ರಕ್ತದ ಕ್ಯಾನ್ಸರ್ ಕಾಯಿಲೆಯಿಂದ 4/ಜುಲೈ/1934 ರಲ್ಲಿ ಮರಣ ಹೊಂದಿದರು.
 


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment