Friday, 15 March 2013

ಮೂಡಲು ಕುಣಿಗಲ್ ಕೆರೆ


02:14 |

ಮೂಡಲು ಕುಣಿಗಲು ಕೆರೆ ನೋಡೋರ್ ಗೊಂದೈಭೋಗ
ಮೂಡಿs ಬರ್ತಾನೆ ಚಂದಿರsಮಾ | ತಾನಂದನೋ
ಮೂಡಿs ಬರ್ತಾನೆ ಚಂದಿರsಮಾ||    |1|

ಅಂತಂತ್ರಿಸಿ ನೋಡೋರ್ಗೆ ಎಂಥ ಕುಣಿಗಲ್ ಕೆರೆ
ಸಂತೇ ಹಾದೀಲಿ ಕಲುಕಟ್ಟೆ | ತಾನಂದನೋ
ಸಂತೇ ಹಾದೀಲಿ ಕಲುಕಟ್ಟೆ ||  |2|

ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲು ಕೆರೆ
ಭಾವ ತಂದಾನೆ ಬಣ್ಣದ ಸೀರೆ | ತಾನಂದನೋ
ಭಾವ ತಂದನೆ ಬಣ್ಣದ ಸೀರೆ ||  |3|

ನಿಂಬೆಯ ಹಣ್ಣಿನಂತೆ ತುಂಬಿದ ಕುಣಿಗಲು ಕೆರೆ
ಅಂದಾ ನೋಡಲು ಶಿವ ಬಂದ್ರು | ತಾನಂದನೋ
ಅಂದಾ ನೋಡಲು ಶಿವ ಬಂದ್ರು ||  |4|

ಅಂದಾ(ನೇ) ನೋಡಲು ಶಿವ ಬಂದ್ರು ಶಿವಮಗ್ಗಿ
ಕಬ್ಬಕ್ಕಿ ಬಾಯ ಬಿಡುತಾವೆ | ತಾನಂದನೋ
ಕಬ್ಬಕ್ಕಿ ಬಾಯ ಬಿಡುತಾವೆ ||  |5|

ಕಬ್ಬಕ್ಕಿ(ನೇ) ಬಾಯ ಬಿಡುತಾವೆ ಇಬ್ಬೀಡ
ಗಬ್ಬದ್ ಹೊಂಬಾಳೆ ನಡುಗ್ಯಾವೆ |  ತಾನಂದನೋ
ಗಬ್ಬದ್ ಹೊಂಬಾಳೆ ನಡುಗ್ಯಾವೆ ||  |6|

ಹಾಕೋಕೊಂದಾರುಗೋಲು ನೂಕೋಕೊಂದೂರುಗೋಲು
ಬೊಬ್ಬೆ ಹೊಡೆದವೆ ಬಾಳೆಮೀನು | ತಾನಂದನೋ
ಬೊಬ್ಬೆ ಹೊಡೆದವೆ ಬಾಳೆಮೀನು ||  |7|

ಬೊಬ್ಬೆ(ನೇ) ಹೊಡೆದವು ಬಾಳೆs ಮೀನ್ ಕೆರೆಯಾಗೆ
ಗುಬ್ಬಿ ಸಾರಂಗ ನಗುತಾವೆ |  ತಾನಂದನೋ
ಗುಬ್ಬಿ ಸಾರಂಗ ನಗುತಾವೆ ||  |8|

ಕೃಪೆ:
ಕರ್ನಾಟಕ ರಾಜ್ಯ 9 ನೇ ತರಗತಿ  ಕನ್ನಡ ಪಠ್ಯ ಪುಸ್ತಕ-2010


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment