Friday, 1 March 2013

ಜೊಹಾನೆಸ್ ಕೆಪ್ಲರ್


19:48 |

ಜೊಹಾನೆಸ್ ಕೆಪ್ಲರ್ ಕ್ರಿ.ಶ.1571 ರಲ್ಲಿ ದಕ್ಷಿಣ ಜರ್ಮನಿನ ' ವೀಲ್ ' ಎಂಬಲ್ಲಿ ಹುಟ್ಟಿದರು. ಚಿಕ್ಕವರಿರುವಾಗಲೇ ಸಿಡುಬು ರೋಗಕ್ಕೆ ತುತ್ತಾಗಿ ದುರ್ಬಲರಾದರು. ಕೆಪ್ಲರ್ ' ಕೊಪರ್ನಿಕಸ್' ನ ಸಿದ್ಧಾಂತವನ್ನು ನಂಬಿ ಕ್ರಿ.ಶ. 1618 ರಲ್ಲಿ ಸೂರ್ಯನೇ ಕೇಂದ್ರ ಅದರ ಸುತ್ತಲೂ ಭೂಮಿ ಹಾಗೂ ಇತರ ಗ್ರಹಗಳು ಸುತ್ತುತ್ತವೆ ಎಂಬ ಸಿದ್ಧಾಂತವನ್ನು ಪ್ರಕಟಿಸುದರು. ಇದರಿಂದ ಜನರಲ್ಲಿ ಅಶಾಂತಿ ಉಂಟಾಗಿ ಮತ ಧರ್ಮ ವಿರೋಧಿಯೆಂಬ ಪ್ರಚಾರಕ್ಕೆ ಗುರಿಯಾಗಬೇಕಾಯಿತು. ಸೂರ್ಯನಿಗೆ ಹತ್ತಿರದಲ್ಲಿರುವ ಗ್ರಹಗಳಿಗಿಂತ ದೂರದಲ್ಲಿರುವ ಗ್ರಹಗಳು ಸೂರ್ಯನ ಸುತ್ತ ಸುತ್ತಲು ಬಹಳ ಕಾಲ ತೆಗೆದುಕೊಳ್ಳುತ್ತವೆ. ಹತ್ತಿರದ ಗ್ರಹಗಳು ಕಡಿಮೆ ಅವಧಿಯಲ್ಲಿ ಸುತ್ತುತ್ತವೆ ಎಂದು ನಿರೂಪಿಸಿದರು. ಈ ನಿಯಮಗಳು ಇಂದಿಗೂ ಕೂಡಾ ಕೃತಕ ಉಪಗ್ರಹಗಳು ಚಲಿಸುವ ಪಥಗಳನ್ನು ನಿರ್ಧರಿಸುತ್ತವೆ. ಕೆಪ್ಲರ್ " ಕಾಸ್ಮಿಕ್ ಮಿಸ್ಟರೀಸ್ ", " ನ್ಯೂ ಅಸ್ಟ್ರಾನಮಿ " ಹಾಗೂ " ದಿ ಹಾರ್ಮನಿ ಆರ್ಸ್ ದಿ ಯೂನಿವರ್ಸ್ " ಎಂಬ ಕೃತಿಗಳನ್ನು ರಚಿಸಿದರು. ಕ್ರಿ.ಶ. 1630 ರಲ್ಲಿ ಕೆಪ್ಲರ್ ನಿಧನರಾದರು.

You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment