Sunday, 3 February 2013

ಬಿಡಿ ಸ್ಥಾನದಲ್ಲಿ ಐದು ಇರುವ ಎರಡು ಅಂಕಿಗಳ ವರ್ಗ ಕಂಡುಹಿಡಿಯುವುದು


07:29 |

15, 25, 35, 45, 55, 65, 75, 85, ಮತ್ತು 95 ಈ ಸಂಖ್ಯೆಗಳನ್ನು ಗಮನಿಸಿದರೆ ಬಿಡಿ ಸ್ಥಾನದಲ್ಲಿ ಐದನ್ನು ಹೊಂದಿರುವ ಎರಡು ಅಂಕಿಯ ಸಂಖ್ಯೆಗಳು. ಈ ಸಂಖ್ಯೆಗಳ ವರ್ಗವನ್ನು ವೇಗವಾಗಿ ಹೇಗೆ ಕಂಡುಹಿಡಿಯುವುದು.

ಮೊದಲು ಮೇಲಿನ ಸಂಖ್ಯೆಗಳಲ್ಲಿ ಒಂದು ಸಂಖ್ಯೆಯನ್ನು ತೆಗೆದುಕೋಳ್ಳಿ
ಉದಾಹಾರಣೆಗೆ: 35

ಈಗ ಸಾಮಾನ್ಯವಿಧಾನದಲ್ಲಿ 35 ರ ವರ್ಗವನ್ನ ಕಂಡುಹಿಡಿಯೋಣ

35 ರ ವರ್ಗ =352
                    = 35 X 35
               = 1225

ಈಗ ವೇಗವಾಗಿ 35 ರ ವರ್ಗವನ್ನ ಕಂಡುಹಿಡಿಯೋಣ
35 ರ ವರ್ಗ =35
 
ಹಂತ 1: 35 ನ್ನು ಒಂದು ಉದ್ದ ಗೆರೆಯ ಮೂಲಕ ಬೇರೆ ಮಾಡಿ
3 | 5

ಹಂತ 2 : 3 ರಕ್ಕೆ ಅದರ ಮುಂದಿನ ಸಂಖ್ಯೆ 4 ರಿಂದ ಗುಣಿಸಿ, ಹಾಗೇ 5 ಕ್ಕೆ 5ರಿಂದ ಗುಣಿಸಿ
4 X 3 | 5 X 5
    12 | 25

ಹಂತ 3 : ಬಂದ ಗುಣಲಬ್ಧವನ್ನ ಒಟ್ಟಾಗಿ ಬರೆಯಿರಿ
1225

1225, 35 ರ ವರ್ಗವಾಗಿದೆ.
ಈ ರೀತಿ ವೇಗವಾಗಿ ಬಿಡಿ ಸ್ಥಾನದಲ್ಲಿ ಐದು ಇರುವ ಎರಡು ಅಂಕಿಗಳ ವರ್ಗ ಕಂಡುಹಿಡಿಯುವುದು.

ಕೆಳಗಿನ ಉದಾಹಾರಣೆಗಳನ್ನ ಗಮನಿಸಿ
1. 65 ರ ವರ್ಗವನ್ನ ಕಂಡುಹಿಡಿಯಿರಿ
ಹಂತ 1 :
6 | 5

ಹಂತ 2 :
7 X 6 | 5 X 5
    42 | 25

ಹಂತ 3 :
4225

4225, 65 ರ ವರ್ಗವಾಗಿದೆ

2. 85 ರ ವರ್ಗವನ್ನ ಕಂಡುಹಿಡಿಯಿರಿ
ಹಂತ 1 :
8 | 5

ಹಂತ 2 :
9 X 8 | 5 X 5
    72 | 25

ಹಂತ 3 :
7225

7225, 85 ರ ವರ್ಗವಾಗಿದೆ


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment