Sunday, 3 February 2013

ಜೋನಾಸ್ ಸಾಲ್ಕ್


06:55 |

 ಜೋನಾಸ್ ಸಾಲ್ಕ್ 28 ಅಕ್ಟೋಬರ್ 1914 ರಲ್ಲಿ ನ್ಯೂಯರ್ಕ್ ಪಟ್ಟಣದಲ್ಲಿ ಜನಿಸಿದರು. ಚಿಕ್ಕವರಿರುವಾಗಲೇ ಪ್ರತಿಭಾವಂತರೆನಿಸಿಕೊಂಡಿದ್ದ ಸಾಲ್ಕ್, ನ್ಯೂಯಾರ್ಕ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ 1939 ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು ಸಾಲ್ಕ್ ಕಣ್ಣಿಗೆ ಕಾಣದಂಥಾ ಅತೀ ಸೂಕ್ಷ ಜೀವಿ ವೈರಸ್ ಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಇವುಗಳನ್ನು ಎಲೆಕ್ಟ್ರಾನಿಕ್ ಮೈಕ್ರೋಸ್ಕೊಪ್ ಮುಖಾಂತರ ನೋಡಬಹುದು ಎಂದು ತಿಳಿದಿದ್ದರು. 1950 ರ ದಶಕದಲ್ಲಿ ಯೂರೋಪ್, ಅಮೇರಿಕಾ ಹಾಗೂ ಪ್ರಪಂಚದ ಇತರ ಭಾಗಗಳಲ್ಲಿ ಪೋಲಿಯೋ ಸಾಂಕ್ರಾಮಿಕ ರೋಗವಾಗಿ ಹರಡಿತ್ತು. ಪೋಲಿಯೋ ರೋಗಕ್ಕೆ ನಿವಾರಣೋಪಾಯ ಅಥವಾ ಗುಣಪಡಿಸುವ ವಿಧಾನವಾಗಲಿ ಇರಲಿಲ್ಲ ಈ ರೋಗಕ್ಕೆ ಕಾರಣವಾದ ವೈರಸ್ ಗಳು ಗಂಟಲಿನ ಮೂಲಕ ದೇಹವನ್ನು ಸೇರಿ ಮಿದುಳು ಬಳ್ಳಿಯನ್ನು ಆಕ್ರಮಿಸುತ್ತದೆ. ಇದರಿಂದ ನರಗಳು ಕ್ಷೀಣಿಸುತ್ತದೆ . ಈ ರೋಗ ತಗಲಿ ವ್ಯಕ್ತಿ ಅಂಗಹೀನನಾಗುವ ಸಾಧ್ಯತೆ ಹೆಚ್ಚು ಇಂಥಾ ಭಯಾನಕ ರೋಗಕ್ಕೆ ಕಾರಣವಾದ ವೈರಸ್ ಗಳನ್ನು ಹಗಲಿರುಳು ಶ್ರಮಿಸಿ ಕಂಡುಹಿಡಿದರು ಸಾಲ್ಕ್. ಇದರೊಂದಿಗೇ ಪೋಲಿಯೋ ರೋಗಕ್ಕೆ ರೋಗ ನಿರೋಧಕ ಲಸಿಕೆಯನ್ನು ಕಂಡು ಹಿಡಿದರು 1961 ರಲ್ಲಿ ಈ ಲಸಿಕೆಯನ್ನು ಬಳಕೆಗೆ ತರಲಾಯಿತು. ಸಾಲ್ಕ್ 23 ಜೂನ್ 1995 ರಲ್ಲಿ ನಿಧನ ಹೊಂದಿದರು.


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment