Tuesday, 20 November 2012

ಮುಂಜಾನೆದ್ದು ಕುಂಬಾರಣ್ಣ-ಜನಪದ ಗೀತೆ


07:13 |

ಮುಂಜಾನೆದ್ದು ಕುಂಬಾರಣ್ಣ
ಹಾಲು ಬಾನುಂಡಾನ ಹಾರ್ ಹಾರಿ ಮಣ್ಣು ತುಳಿದಾನ
ಹಾರಿ ಹಾರಾರಿ ಮಣ್ಣು ತುಳಿದು ತಾ ಮಾಡ್ಯಾನ
ನಾರ್ಯಾರು ಹೊರುವಂತ ಐರಾಣಿ ||

ಹೊತಾರದ್ದು ಕುಂಬಾರಣ್ಣ
ತುಪ್ಪವಾ ನುಂಡಾನ ಗಟ್ಟೀಸಿ ಮಣ್ಣಾ ತುಳಿದಾನ
ಗಟ್ಟೀಸಿ ಮಣ್ಣಾ ತೂಳಿಯೂತ್ತಾ ಮಾಡ್ಯಾನ
ಮೀತ್ರೇರು ಹೊರುವಂತ ಐರಾಣಿ ||

ಅಕ್ಕಿಹಿಟ್ಟು ನಾವು ತಕ್ಕೊಂಡು ತಂದಿವ್ನಿ
ಗಿಂಡೀಲಿ ತಂದೀವ್ನಿ ತಿಳಿದುಪ್ಪ
ಗಿಂಡೀಲಿ ತಂದೇವ್ನಿ ತಿಳಿದುಪ್ಪ ಕುಂಬಾರಣ್ಣ
ತಂದೀಡು ನಮ್ಮ ಐರಾಣಿ ||

ಕುಂಬಾರಣ್ಣನ ಮಡದಿ ಕಡಗಾಸ ಕೈಯಿಕ್ಕಿ
ಕೊಡದಾ ಮ್ಯಾಲೇನ ಬರೆದಾಳ
ಕೊಡದಾ ಮ್ಯಾಲೇನ ಬರೆದಾಳ್ ಕಲ್ಯಾಣದ
ಶರಣಾ ಬಸವನ ನಿಲಿಸ್ಯಾಳ ||


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment