Friday, 9 November 2012

ಗಾಂಧೀಜಿಯವರ ಮಾತುಗಳು.


00:12 |

 • ಸತ್ಯವೇ ದೇವರು, ದೇವರೇ ಸತ್ಯ.
 • ತಾಳ್ಮೆ ಒಂದು ಇದ್ದರೆ ಪರ್ವತವನ್ನೂ ದಾಟಬಹುದು.
 • ದೇಶಭಕ್ತಿ ಮೋಕ್ಷಮಾರ್ಗದಲ್ಲಿ ಒಂದು ಮೆಟ್ಟಿಲು.
 • ಪ್ರಪಂಚಕ್ಕೆ ಹೊಸದಾಗಿ ಹೇಳಲು ನನ್ನಲ್ಲಿ ಏನೂ ಇಲ್ಲ ಸತ್ಯ ಮತ್ತು ಅಹಿಂಸೆ ಪರ್ವತಗಳಷ್ಟೇ ಹಳೆಯವು.
 • ಗುರಿಯಿಲ್ಲದ ಸಾಧನೆಗಳಿಂದ ಏನೂ ಉಪಯೋಗವಿಲ್ಲ. ಗುರಿಯಷ್ಟೆ ಸಾಧನೆಗಳು ಶುದ್ಧವಾಗಿರಬೇಕು.
 • ಶೀಲ ಪ್ರಗತಿಗೆ ಮೂಲ, ಸಂಪತ್ತಿಗೆ ತಳಹದಿ, ಆನಂದ ಶಾಂತಿಗಳಿಗೆ ರಾಜಮಾರ್ಗ.
 • ನಮ್ರತೆಯು ಅಹಿಂಸೆಯ ಒಂದು ಅಂಗ.
 • ಸತ್ಯ ಒಂದು ದೊಡ್ಡ ಮರ ಇದ್ದಂತೆ. ಅದರ ಸ್ನೇಹ ಮಾಡಿದಷ್ಟು ಫಲಗಳು ಹೆಚ್ಷುತ್ತದೆ.
 • ದೇವರಿಗೆ ಭಯ ಪಡಬೇಕು; ಮನುಷ್ಯರಿಗೆ ಭಯಪಡಬಾರದು.
 • ಮನಸ್ಸಿನಲ್ಲಿ, ಮಾತಿನಲ್ಲಿ, ಕೆಲಸದಲ್ಲಿ ಯಾರನ್ನೂ ನೋಯಿಸದಿರುವುದು, ಎಲ್ಲರನ್ನೂ ಪ್ರೀತಿಸುವುದು, ಎಲ್ಲರಿಗೂ ಒಳ್ಳೆಯದನ್ನು ಬಯಸುವುದು ಇದೇ ಅಹಿಂಸಾ ಧರ್ಮ.
 • ಪ್ರೇಮದ ಬಲಕ್ಕಿಂತ ಉನ್ನತವಾದದ್ದು, ಬಲವಾದದ್ದು ಇನ್ನೊಂದಿಲ್ಲ.
 • ಅಸ್ಪೃಶ್ಯತೆ ಒಂದು ಪಾಪ, ಘೋರ ಅಪರಾಧ.
 • ಮಧ್ಯಪಾನ ಕಳ್ಳತನಕ್ಕಿಂತಲೂ ಹೇಯವಾದದ್ದು.
 • ಪ್ರಜಾ ಪ್ರಭುತ್ವದಲ್ಲಿ ಬಲಿಷ್ಠನಿಗಿರುವ ಅವಕಾಶಗಳು ದುರ್ಬಲನಿಗೂ ಇರಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ.
 • ಹಿಂದೂ ಧರ್ಮ ಗಂಗೆಯಂತೆ, ಮೂಲದಲ್ಲಿ ಅದು ಪರಿ ಶುದ್ದ ಮತ್ತು ಆಕಳಕಿಂತ ಆದರೆ ಮುನ್ನಡೆಯುವಾಗ ತನ್ನ ದಾರಿಯಲ್ಲಿನ ಆಶುದ್ಧವನ್ನೆಲ್ಲಾ ತನ್ನೊಳಕ್ಕೆ ಎಳೆದು ಕೊಳ್ಳುತ್ತದೆ, ಆದರೆ ಒಟ್ಟು ಪರಿಣಾಮದಲ್ಲಿ ಅದು ಗಂಗೆಯಂತೆಯೇ ಉಪಕಾರಿ.
 • ದುಃಖ ಎನ್ನುವುದು ತ್ಯಾಗ ಅಲ್ಲ, ಯಾವ ತ್ಯಾಗದಿಂದ ಮನುಷ್ಯನಿಗೆ ಆನಂದ ಲಭಿಸುತ್ತದೆಯೊ ಅದೇ ನಿಜವಾದ ತ್ಯಾಗ.
 • ಮನುಷ್ಯ ಎಷ್ಟರ ಮಟ್ಟಿಗೆ ಇತರರ ಒಳ್ಳೆಯದಕ್ಕೆ ದುಡಿಯತ್ತಾನೆಯೊ ಅಷ್ಟರಮಟ್ಟಿಗೆ ಅವನು ದೊಡ್ಡವನಾಗುತ್ತಾನೆ.
 • ಮಕ್ಕಳು, ಯುವಕರು ಮತ್ತು ಮಹಿಳೆಯರು, ಎಲ್ಲರೂ ಸರಿಸಮಾನವಾಗಿ ಬೆಳೆಸಿಕೊಳ್ಳಬಹುದಾದ ಶಕ್ತಿ ಅಂದರೆ ಅಹಿಂಸೆ.
 • ನೀನೇನು ಕೂಡಬಲ್ಲೆ ಎನ್ನುವುದರ ಮೇಲೆ ನಿನ್ನ ಸುಖ ನಿಂತಿದೆಯೇ ಹೊರತು ನೀನೇನು ತೆಗೆದುಕೊಳ್ಳಬಲ್ಲೆ ಎನ್ನುವುದರ ಮೆಲಲ್ಲ.
 • ವ್ಯಕ್ತಿಯಲ್ಲಿರುವ ಉತ್ತಮ ಅಂಶವನ್ನು ಬೆಳಕಿಗೆ ತರುವುದೇ ನಿಜವಾದ ಶಿಕ್ಷಣ. ಮಾನವತ್ವದ ಪುಸ್ತಕಕ್ಕಿಂತ ಉತ್ತಮ ಪುಸ್ತಕ ಯಾವುದಿದೆ?
 • ಧರ್ಮ ಇಲ್ಲದ ಮನುಷ್ಯ ಚುಕ್ಕಾಣಿ ಇಲ್ಲದ ಹಡಗಿನಂತೆ.
 • ಇಡೀ ಜೀವನ ತುದಿಗಾಣದ ಒಂದು ಪ್ರಯೋಗಶಾಲೆ.
 • ಭಾರತದಲ್ಲಿ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ಬರಬೇಕು. ಈ ಗುರಿಯನ್ನು ಸಾಧಿಸಲು ಮಕ್ಕಳು ಮನಸ್ಸು, ಶರೀರ, ಮತ್ತು ಆತ್ಮಶಕ್ತಿಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವ, ಉಪಯುಕ್ತ ಉದ್ಯೋಗವನ್ನು ಅವರಿಗೆ ಕಲಿಸಬೇಕು.
 • ಪರಭಾಷೆಯ ಶಿಕ್ಷಣ ಮಾಧ್ಯಮ ನಮ್ಮ ಮಕ್ಕಳನ್ನು ಅವರದೇ ಅದ ಭೂಮಿಯಲ್ಲಿ ಪರದೇಶಿಗಳನ್ನಾಗಿ ಮಾಡಿದೆ.
 • ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಶಾಲೆ.
 • ತಾಳ್ಮೆ, ಕ್ಷಮೆ, ದಯೆ, ಔದರ್ಯ, ಪ್ರೇಮ ಇವು ಕ್ಚಾತ್ರಗುಣದ ಪೋಷಕ ಶಕ್ತಿಗಳು.
 • ಕೆಟ್ಟದ್ದನ್ನು ಮಾಡದಿರಬೇಕಾದರೆ, ಕೆಟ್ಟದ್ದರಿಂದ ಪೂರ್ಣವಾಗಿ ದೂರ ಇರಬೇಕು.
 • ಅಹಿಂಸೆ ಹೇಡಿತನವಲ್ಲ. ಆತ್ಮ ಧೈರ್ಯದ ಪ್ರತೀಕ, ಆದರೆ ಅಹಿಂಸೆಯಿಂದ ಗುರಿ ಮುಟ್ಟಬೇಕಾದರೆ ತಾಳ್ಮೆ ಅಗತ್ಯ.
 • ಧರ್ಮಧರ್ಮಗಳ ಮಧ್ಯೆ ಜಗಳವಿರದು, ಅದರೆ ಎಲ್ಲ ಧರ್ಮಗಳೂ ಅಧರ್ಮದ ವಿರುದ್ಧ ಹೋರಾಡಬೇಕು.
 • ತನಗೆ ಅಗತ್ಯವಿದ್ದಷ್ಟನ್ನು ಮಾತ್ರ ಪಡೆಯುವುದು ಧರ್ಮ, ಅಗತ್ಯಕ್ಕಿಂತ ಹೆಚ್ಚಾಗಿ ಪಡೆದರೆ ಕಳ್ಳತನಮಾಡಿದಂತೆಯೇ.
 • ನಾಗರೀಕತೆ ಆಂದರೆ ತಾಳ್ಮೆಸಹಿಷ್ಟುತೆಗಳ ತವರು, ಹಿಂಸೆ ಪ್ರತಿಹಿಂಸೆಗಳ ಸಮುದ್ರವಲ್ಲ.
 • ಮಾನವಕುಲಮೊಂದು ಮಹಾಸಾಗರ, ಕೆಲವು ಹನಿಗಳು ಹೊಲಸಾದರೆ ಇಡೀ ಸಾಗರ ಹೊಲಸಾಗುವುದಿಲ್ಲ.
 • ಕಲ್ಲು ಇಟ್ಟಿಗೆಗಳಿಂದ ಕಟ್ಟಿರುವ ಗುಡಿ ಗೋಪುರಗಳಿಗಿಂತ ನರ ಮಾಂಸಗಳಿಂದ ನಿರ್ಮಾಣವಾಗಿರುವ ಮಾನವ ಶರೀರಗಳೇ ನಿಜವಾದ ದೇವಾಲಯಗಳು.


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment