Friday, 9 November 2012

ಬುದ್ಧನ ಮಾತುಗಳು


00:01 |

 • ಪ್ರಾಣಿಗಳನ್ನು ಹಿಂಸಿಸುವವನು ಪೂಜ್ಯನಲ್ಲ. ಎಲ್ಲಾ ಪ್ರಾಣಿಗಳನ್ನು ಪ್ರೀತಿಸಿ, ಅಹಿಂಸೆಯನ್ನು ಆಚರಿಸುವವನೇ ಪೂಜ್ಯನು.
 • ತಾಯಿಯನ್ನು ಗೌರವಿಸುವುದು ಸುಖ; ತಂದೆಯನ್ನು ಗೌರವಿಸುವುದು ಸುಖ.
 • ಸತ್ಯವನ್ನೇ ಹೇಳಬೇಕು. ಕೋಪಮಾಡಿಕೊಳ್ಳಬಾರದು. ಯಾರಾದರೂ ಸ್ವಲ್ಪ ಕೇದರೂಳಿ ಹೇಚ್ಚಾಗಿಯೇ ದೇವತೆಗಳ ಸಮೀಪಕ್ಕೆ ಹೋಗಬಹುದು.
 • ಪಾಪದಿಂದ ದುಃಖ ಹುಟ್ಟುತ್ತದೆ ; ಪುಣ್ಯದಿಂದ ಸುಖ ಹುಟ್ಟುತ್ತದೆ.
 • ಆರೋಗ್ಯವೇ ಲಾಭ, ತೃಪ್ತಿಯೇ ಧನ. ವಿಶ್ವಾಸವೇ ಬಂಧು ಮನಸ್ಸಿನ ಶಾಂತಿಯೇ ಸುಖ.
 • ವೈರದಿಂದ ವೈರ ಶಾಂತವಾಗುವುದಿಲ್ಲ. ಪ್ರೇಮದಿಂದ ವೈರ ಶಾಂತವಾಗುತ್ತದೆ. ಇದು ಸನಾತನ ಧರ್ಮ.
 • ಇತರರಲ್ಲಿರುವ ತಪ್ಪುಗಳ ಬಗ್ಗೆ ಯೋಚಿಸಬಾರದು. ಅವರು ಮಾಡುವುದು ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ಚಿಂತಿಸಬಾರದು, ನಮ್ಮ ಲೋಪದೋಷಗಳನ್ನು ನಾವು ನೋಡಿಕೊಳ್ಳಬೇಕು.
 • ನುಡಿದಂತೆ ನಡೆಯದವನ ಮಾತು, ವಾಸನೆಯಿಲ್ಲದ ಬಣ್ಣದ ಹೂವಿನ ಹಾಗೆ, ಪ್ರಯೋಜನವಿಲ್ಲದ್ದು. ನುಡಿದಂತೆ ನಡೆಯುವವನ ಮಾತು ವಾಸನೆ ಇರುವ ಬಣ್ಣದ ಹೂವಿನ ಹಾಗೆ, ಪ್ರಯೋಜನವುಳ್ಳದ್ದು.
 • ಮಾಡಿದ ಪಾಪ ಫಲ ಬಿಡದಿರುವವರೆಗೆ, ಜೇನಿನಂತೆ ಸಿಹಿಯಾಗಿರುತ್ತದೆ. ಆ ಪಾಪ ಹಣ್ಣಾದಾಗ ದುಃಖ ಆರಂಭವಾಗುತ್ತದೆ.
 • ಪ್ರತಿಯೊಬ್ಬನೊ ಮಾಡಬೇಕಾದ್ದನ್ನು ತಾನು ಮೊದಲು ಕಲಿಯಲಿ; ಆಮೇಲೆ ಇತರರಿಗೆ ಕಲಿಸಲಿ.
 • ಸತ್ಯ ಮತ್ತು ಧರ್ಮ ಯಾರಲ್ಲಿ ಉರುವುದೋ ಅವನೇ ಸುಖಿ.
 • ನಂಬಿಕೆಯೇ ಎಲ್ಲ ಧೈರ್ಯ ಮತ್ತು ಸಾಹಸಗಳಿಗೆ ಮೂಲ ಆಧಾರ.
 • ಸುಳ್ಳು ಹೇಳುವುದು, ಅಸಭ್ಯತೆಯಿಂದಿರುವುದು, ಕೆಟ್ಟಯೋಚನೆ ಮಾಡುವುದು ದ್ವೇಷಿಸುವುದು, ಇವೆಲ್ಲ ಕೊಲೆ ಮಾಡಿದಷ್ಟೇ ದೊಡ್ಡ ಪಾಪಗಳು.
 • ಮನುಷ್ಯನ ದೇಹಕ್ಕೆ ಎರಡು ಕಣ್ಣುಗಳಿರುವಂತೆ ಅವನ ಧರ್ಮಕ್ಕೆ ಇರುವ ಎರಡು ಕಣ್ಣುಗಳೆಂದರೆ: ಅಹಿಂಸೆ ಮತ್ತು ಸತ್ಯ.
 • ಹಿಂಸೆ ಮನುಷ್ಯನ ಕೆಲಸವಲ್ಲ? ಅದು ರಾಕ್ಷಸೀ ಕೆಲಸ ಹಿಂಸೆಯ ಯೋಚನೆ ಮಾಡುವುದೂ ಕೂಡ ರಾಕ್ಷಸೀ ತನವೆನಿಸುತ್ತದೆ.
 • ಇತರರನ್ನು ನೋಯಿಸುವ ಕೆಲಸದಲ್ಲಿ ಎಂದಿಗೂ ತೊಡಗಬಾರದು, ಆ ನೋವಿನರಿವು ನಿಮಗಿರುವಂತೆ ಅವರಿಗೂ ವೇದನೆಯನ್ನು ಉಂಟುಮಾಡುತ್ತದೆ ಎಂಬುದನ್ನು ಊಹಿಸಿಕೊ.
 • ಸ್ವಾರ್ಥವನ್ನು ಗೆದ್ದವನು, ಶಾಂತಿಯನ್ನು ಪಡೆದವನು ಮತ್ತು ಸತ್ಯವನ್ನು ಬಲ್ಲವನು ನಿಜವಾಗಿಯೂ ಸುಖಿ.
 • ಚಂದನವಾಗಲಿ, ಜಾಜಿಯಾಗಲಿ, ಕಮಲದ ಹೂ ಆಗಲಿ ಇವುಗಳೆಲ್ಲದರ ವಾಸನೆಗಿಂತ ಮನುಷ್ಯನ ನಡತೆಯ ಪರಿಮಳವೇ ಹೆಚ್ಚು.
 • ಸ್ನೇಹಮಾಡಿದರೆ ನಮಗಿಂತ ಶ್ರೇಷ್ಠರೊಡನೆ ಮಾಡಬೇಕು ಇಲ್ಲವಾದರೆ ಸಮಾನರೊಡನಾದರೂ ಮಾಡಬೇಕು, ಇವೆರಡೂ ಸಾಧ್ಯವಾಗದಿದ್ದಲ್ಲಿ ಒಂಟಿಯಾಗಿರುವುದೇ ಒಳ್ಳೆಯದು.
 • ಕೆಡುಕುಗಳಿಗೆ ಒಳಗಾಗದೆ, ಒಳ್ಳೆಯದನ್ನೇ ರೂಢಿಸಿಕೊಂಡು, ಮನಸ್ಸನ್ನು ಶುದ್ಧವಾಗಿಟ್ಟುಕೊಂಡುರಬೇಕು.
 • ವ್ಯರ್ಥವಾದ ನೂರು ಮಾತುಗಳಿಗೆ ಬದಲಾಗಿ, ಯಾವ ಒಂದು ಮಾತು ಕೇಳಿದರೆ ಶಾಂತಿ ಲಭಿಸುವುದೋ, ಅದೇ ಶ್ರೇಷ್ಠವಾದ ಮಾತು.
 • ಕೆಟ್ಟವರ ಜತೆ ಸೇರಬಾರದು; ನೀಚರೊಂದಿಗೆ ಸ್ನೇಹ ಮಾಡಬಾರದು. ಒಳ್ಳೆಯವರ ಜತೆ ಸೇರಬೇಕು; ಸದ್ಗುಣಿಗಳ ಸ್ನೇಹ ಮಾಡಬೇಕು.
 • ಮನುಷ್ಯ ಯಾವುದಾದರೂ ಒಂದು ಕೆಲಸ ಮಾಡಿ, ಆಮೇಲೆ ಅದರಿಂದ ಪಶ್ಷಾತ್ತಾಪ ಪಡುವನೋ ಆ ಕೆಲಸದ ಫಲವಾಗಿ ಕಣ್ಣೀರಿಡುವನೋ ಅದೇ ಕೆಟ್ಟ ಕೆಲಸ.
 • ನಿಜವಾದ ಗುಣವಂತ ತನ್ನ ಒಳ್ಳೆಯ ಗುಣಗಳ ಪರಿಮಳವನ್ನು ಎಲ್ಲ ದಿಕ್ಕುಗಳಿಗೂ ಬೀರುತ್ತಾನೆ.
 • ನಿಜವಾದ ಜ್ಞಾನವುಳ್ಳವನು ಎಲ್ಲ ಬಂಧನಗಳಿಂದಲೂ ಮುಕ್ತನಾಗಿರುತ್ತಾನೆ.
 • ನನ್ನಂತೆಯೇ ಇತರರೂ; ಅವರಂತೆ ನಾನೂ; ವಿವೇಕಿಯಾದವನು ಪರರನ್ನು ತನ್ನಂತೆ ಕಾಣುತ್ತಾನೆ. ಅವನು ಯಾರನ್ನು ಕೊಲ್ಲುವುದಿಲ್ಲ, ಕೊಲೆಗೂ ಕಾರಣನಾಗುವುದಿಲ್ಲ.
 • ಎಷ್ಡೇ ಕೋಪ ಬಂದರೂ ಕಠಿಣವಾಗಿ ಎಂದೂ ಮಾತನಾಡಬಾರದು.
 • ದಯೆಯಿಂದ ಕೋಪವನ್ನು, ಒಳ್ಳೆಯದರಿಂದ ಕೆಟ್ಟದ್ದನ್ನು, ಔದಾರ್ಯದಿಂದ ಕೃಪಣತೆಯನ್ನು, ಸತ್ಯನಿಷ್ಟೆಯಿಂದ ಸುಳ್ಳನ್ನು ಗಿಲ್ಲಬೇಕು.
 • ಹೆಚ್ಚು ಮಾತನಾಡುವುದರಿಂದ ಯಾರೂ ಬುದ್ಧಿವಂತರಾಗುವುದಿಲ್ಲ. ಯಾರು ಶಾಂತಿ ಶೀಲರೋ ಸ್ನೇಹ ಜೀವಿಗಳೋ, ನಿರ್ಭಯರೋ ಅವರೇ ಬುದ್ಧಿಶಾಲಿಗಳು.
 • ಮಾಡುವ ಕೆಲಸದಲ್ಲಿ ಉದ್ರೇಕ ತಲೆದೋರದಂತೆ ಯಾವಾಗಲೂ ಎಚ್ಚರವಹಿಸಬೇಕು.
 • ಅಲ್ಪ ಸುಖವನ್ನು ತ್ಯಜಿಸುವುದರಿಂದ ಮಹತ್ತರ ಸುಖವನ್ನು ಪಡೆಯಬಹುದು.
 • ಹಾಲು ಕರೆದಕೂಡಲೇ ಹೇಗೆ ಹುಳಿಯಾಗುವುದಿಲ್ಲವೋ ಹಾಗೆಯೇ ಒಂದು ಕೆಟ್ಟ ಕೆಲಸಮಾಡಿದ ಕೂಡಲೇ ಅದರ ಪರಣಾಮ ಗೊತ್ತಾಗುವುದಿಲ್ಲ. ಆದರೆ ಅದು ಒಳಗೇ ಹೊಗೆಯಾಡುತ್ತಿದ್ದು ಅನುಸರಿಸಿಕೊಂಡು ಬರುತ್ತದೆ; ಕಣ್ಣಿಗೆ ಕಾಣದ ಬೂದಿ ಮುಚ್ಚಿದ ಕೆಂಡದಂತೆ.
 • ಕೆಟ್ಟಕೆಲಸಕ್ಕೆ ಕೈಹಾಕದಿರುವುದೇ ಒಳ್ಳೆಯದು. ಏಕೆಂದರೆ ಅದರಿಂದ ಆಮೇಲೆ ದುಃಖ ಒದಗುತ್ತದೆ. ಒಳ್ಳೆಯ ಕೆಲಸವನ್ನು ಮಾಡುವುದೇ ಉತ್ತಮ. ಏಕೆಂದರೆ ಅದರಿಂದ ಆಮೇಲೆ ದುಃಖ ಒದಗುವುದಿಲ್ಲ.
 • ಈ ಪ್ರಪಂಚದಲ್ಲಿ ಒಳ್ಳೆಯದೆಂದರೆ ತಾಯಿಯ ಸೇವೆ; ಒಳ್ಳೆಯದೆಂದರೆ ತಂದೆ ಸೇವೆ.
 • ಮನಸ್ಸನ್ನು ಗೆಲ್ಲುವುದು ಅದ್ಭುತವಾದ ಕೆಲಸ. ಏಕೆಂದರೆ ಅದನ್ನು ನಿಗ್ರಹಿಸುವುದು ತುಂಬ ಕಷ್ಟ. ಅದರ ಗತಿ ಬಹು ಚಪಲ; ಅದು ತನಗೆ ಬೇಕಾದ್ದನ್ನೆಲ್ಲಾ ಹಿಡಿದುಕೊಳ್ಳುತ್ತದೆ. ಆದರೆ ಪಳಗಿಸಿದ ಮನಸ್ಸಿನಿಂದ ಸುಖ ಲಭಿಸುತ್ತದೆ.
 • ಸುಳ್ಳು, ನಿಂದೆ, ಒಣಹರಟೆ, ದುರಾಸೆ ಇವುಗಳಿಂದ ದೂರ ಇರಬೇಕು.
 • ಈ ಪ್ರಪಂಚದಲ್ಲಿ ನಾಲ್ಕು ವಿಧವಾದ ಜನರಿದ್ದಾರೆ; ಕತ್ತಲೆಯ ಕಡೆಗೆ ನಡೆಯುವರು. ಬೆಳಕಿನ ಕಡೆಗೆ ನಡೆಯುವರು. ಕತ್ತಲೆಯ ಕಡೆಗೆ ನಡೆಯುವ ಬೆಳಕಿನ ಜನರು. ಬೆಳಕಿನ ಕಡೆಗೆ ನಡೆಯುವ ಕತ್ತಲೆಯ ಜನರು.
 • ಸತ್ಯಹೇಳು, ಕೋಪಿಸಿಕೊಳ್ಳಬೇಡ ಬೇಡಿದವರಿಗೆ ಸ್ವಲ್ಪವಾದರೂ ದಾನಮಾಡು, ಈ ಮೂರು ದಾರಿಯಿಂದ ನೀನು ದೇವತೆ ಹತ್ತಿರ ಹೋಗಬಹುದು.
 • ತುಕ್ಕು ಕಬ್ಬಣದಲ್ಲಿ ಹುಟ್ಟುತ್ತದೆ, ಅದನ್ನೇ ತಿನ್ನುತ್ತದೆ. ಅದರಂತೆ ಪಾಪ ಮಾಡಿದವನ ಪಾಪ ಆ ಪಾಪಿಯನ್ನೇ ತಿಂದು ಬಿಡುತ್ತವೆ.
 • ಯಾರಿಗೂ ತೊಂದರೆ ಮಾಡದೆ, ಸಾಧ್ಯವಾದಷ್ಟು ಮಟ್ಟಿಗೂ ಒಳ್ಳೆಯದನ್ನೇ ಮಾಡುತ್ತ, ಎಲ್ಲ ಕೆಲಸದಲ್ಲಿಯೂ ಪ್ರೇಮ, ದಯೆ, ಸತ್ಯನಿಷ್ಠ ಮತ್ತು ಚಿತ್ತಶುದ್ಧಿಗಳನ್ನು ಆಚರಣೆಗೆ ತರಬೇಕು, ಇದೇ ಧರ್ಮದ ತಿರುಳು.
 • ಸರ್ವತ್ಯಾಗಿಯಾದವನಿಗೆ ಈ ಸೃಷ್ಟಿಯಲ್ಲಿ ಎಲ್ಲಿ ಹೇಗೆ ಸಂಚರಿಸಿದರೂ ಆಸೆ-ಅಂಜಿಕೆಗಳ ಕಾಟವಿಲ್ಲ.
 • ಯಾವ ರೀತಿಯ ಪಾಪವನ್ನೂ ಮಾಡದೆ ಇರುವುದು, ಯಾವಾಗಲೂ ಪುಣ್ಯವನ್ನು ಸಂಪಾದಿಸುವುದು, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಇದೇ ಬುದ್ಧರ ಶಾಸನ.


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment