Friday, 9 November 2012

ವಿವೇಕಾನಂದರ ಮಾತುಗಳು.


00:11 |

 • ಶಕ್ತಿಯೇ ಜೀವನದ ಶ್ರೇಷ್ಠ ಮಾರ್ಗದರ್ಶಕ ಧರ್ಮದಲ್ಲಿ, ಉಳಿದ ವಿಷಯಗಳಲ್ಲಿ ಹೇಗೋ ಹಾಗೆ, ನಿಮ್ಮನ್ನು ದುರ್ಬಲಗೊಳಿಸುವ ಪ್ರತಿಯೊಂದನ್ನೂ ತ್ಯಜಿಸಿ ಬಿಡಿ. ಅದಕ್ಕೂ ನಿಮಗೂ ಏನೇನು ಸಂಬಂಧ ಇರುವುದು ಬೇಡ.
 • ಶಕ್ತಿಯೇ ಬದುಕು, ದುರ್ಬಲತೆಯೇ ಸಾವು. ಶಕ್ತಿ ಆನಂದದಾಯಕ; ಬದುಕು ಅನಂತ ಹಾಗೂ ಅಮರ.
 • ನಂಬಿಕೆ; ತನ್ನ ಶಕ್ತಿಯಲ್ಲಿ ನಂಬಿಕೆ, ದೇವರಲ್ಲಿ ನಂಬಿಕೆ, ಇದೇ ಮಹಿಮೆ ರಹಸ್ಯ.
 • ನಿಮ್ಮ ನರಗಳನ್ನು ಬಲಿಷ್ಠವನ್ನಾಗಿ ಮಾಡಿಕೊಳ್ಳಿ. ನಿಮಗೆ ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು; ಮತ್ತು ಉಕ್ಕಿನಂತಹ ನರಗಳು.
 • ಮೊದಲು ಅನ್ನ; ಅನಂತರ ಧರ್ಮ.
 • ಪ್ರಿತಿ ಎಂದಿಗೂ ಸೋಲುವುದಿಲ್ಲ; ಇಂದು ಅಥವಾ ನಾಳೆ ವರ್ಷಗಳೇ ಉರುಳಲಿ, ಸತ್ಯಕ್ಕೆ ಜಯ ಖಂಡಿತ,
 • ಸುಖ ಹಂಚಿದಷ್ಷು, ಹೆಚ್ಷುತ್ತದೆ, ದುಃಖ ಹಂಚಿದಷ್ಟೂ ಕಡಿಮೆಯಾಗುತ್ತದೆ.
 • ಸತತ ಪ್ರಯತ್ನ ಮತ್ತು ದೃಡ ಸಂಕಲ್ಪವಿದ್ದರೆ ಮಾತ್ರ ಜಯಗಳಿಸಬಹುದು.
 • ಪವಿತ್ರವಾದ ಮತ್ತು ಬಲಯುತವಾದ ಸಂಕಲ್ಪ ಸರ್ವ ಶಕ್ತವಾದುದು.
 • ಯಾವುದು ಸ್ವಾರ್ಥದಿಂದ ಕೂಡಿದೆಯೋ ಅದು ಅನೀತಿಯುತವಾದುದು, ಯಾವುದು ನಿಸ್ವಾರ್ಥತೆಯಿಂದ ಕೂಡಿದೆಯೋ ಅದು ನೀತಿಯುತವಾದುದು.
 • ಎಲ್ಲ ಪೂಜೆ ನಮ್ಮ ಎಲ್ಲ ಸುಖ ಸಂತೋಷಕ್ಕೆ ಮೂಲ.
 • ನಾವು ಮಾವುದಕ್ಕೆ ಯೋಗ್ಯರೋ, ಅದು ನಮಗೆ ಲಭ್ಯವಾಗುತ್ತದೆ.
 • ನಮ್ಮ ಬಾಳು ಚೆನ್ನಾಗಿದ್ದರೆ, ಹಸನಾಗಿದ್ದರೆ ಮಾತ್ರ, ಜಗತ್ತೂ ಚೆನ್ನಾಗಿರುತ್ತದೆ. ಹಸನಾಗಿರಿತ್ತದೆ.
 • ಒಡೆಯನಂತೆ ಕೆಲಸಮಾಡಬೇಕು, ಆಳಿನಂತಲ್ಲ.
 • ವಿಕಾಸವೇ ಬದುಕು, ಸಂಕೋಚವೇ ಮರಣ, ಪ್ರೇಮವೆಲ್ಲಾ ವಿಕಾಸ. ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
 • ಜೀವನ ಎಂದರೆ ತನ್ನನ್ನು ನಾಶಗೊಳಿಸಲು ಪ್ರಯತ್ನಿಸುತ್ತಿರಿವ ಶಕ್ತಿಗಳ ಮಧ್ಯಜೀವಿ ವೃದ್ದಿ ಹೊಂದುವುದೇ ಆಗಿದೆ.
 • ಹಣ, ಹೆಸರು, ಪಾಂಡಿತ್ಯ, ಯಾವುದರಿಂದಲೂ ಲಾಭವಿಲ್ಲ, ಕಷ್ಟಗಳ ಆಭೇದ್ಯ ಕೋಟೆಗಳನಗನು ಸೀಳಿಕೊಂಡು ನುಗ್ಗಬಲ್ಲದ್ದು ಚಾರಿತ್ರ್ಯವೊಂದೇ ಎಂಬುದು ಜ್ಞಾಪಕದಲ್ಲಿರಲಿ.
 • ಇಡೀ ಮಾನವಕೋಟಿಗೆ ಅನುಕಂಪ ಹಾಗೂ ಪ್ರೀತಿ ತೋರುವುದೇ ನಿಜವಾದ ಧರ್ಮ.
 • ಪ್ರತಿಯೊಂದು ಸುಖದ ಅನಂತರ ದುಃಖ ಬಂದೇ ಬರುತ್ತದೆ. ಅವು ದೂರದಲ್ಲಿರಬಹುದು ಅಥವಾ ಹತ್ತಿರದಲ್ಲಿರಬಹುದು.
 • ಮೊದಲು ನಾವು ದೇವರಾಗೋಣ. ಅನಂತರ ಇತರರು ದೇವರಾಗಲು ಸಹಾಯ ಮಾಡೋಣ.
 • ಯಾವುದಾದರೂ ಕೆಲಸ ಮಾಡುತ್ತಿರುವಾಗ, ಆ ಕೆಲಸದಲ್ಲಿಯೇ ಮಗ್ನರಾಗಿರಬೇಕು ಅದೇ ಪೂಜೆ ಎಂದು ಭಾವಿಸಬೇಕು.
 • ಯಾವುದಕ್ಕೂ ಅಂಜಬೇಡಿ, ಅದ್ಭುತ ಕೆಲಸಗಳನ್ನು ನೀವು ಮಾಡಬಲ್ಲಿರಿ. ಭಯಪಟ್ಟರೆ ನಿಮ್ಮಿಂದ ಯಾವ ಕೆಲಸವೂ ಆಗುವುದಿಲ್ಲ.
 • ಈ ಪ್ರಪಂಚದಲ್ಲಿ ಮನುಷ್ಯನಾಗಿ ಹುಟ್ಟುದ ಮೇಲೆ ಏನಾದರೂ ಸ್ವಲ್ಪ ಒಳ್ಳೆಯ ಕೆಲಸವನ್ನು ಮಾಡಬೇಕು, ಕೇವಲ ಹುಳುವಂತೆ ಹುಟ್ಟಿ ಸತ್ತರೆ ಏನು ಪ್ರಯೋಜನ.
 • ಕಾರ್ಯಸಾಧನೆ ಬಹು ಒಳ್ಳೆಯದು. ಆದರೆ ಅದು ದೀರ್ಘ ಚಿಂತನೆಯ ಫಲ. ಆದ್ದರಿಂದ ಉನ್ನತ ಚಿಂತನೆ, ಉದಾತ್ತ ಭಾವನೆ ನಿಮ್ಮ ಮೆದುಳನ್ನು ತುಂಬಲಿ. ಇದನ್ನು ದೈನಂದಿನ ಜೀವನದಲ್ಲಿ ಹಗಲಿರುಳೂ ನಿಮ್ಮ ಮುಂದಿಟ್ಟುಕೊಳ್ಳಿ. ಇದರಿಂದ ಮಹತ್ತರ ಕಾರ್ಯ ನೆರವೇರುತ್ತದೆ.
 • ಭಕ್ತರಾಗುವರು ಒಂದು ಮಾತನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಢಾಂಬಿಕ ಭಕ್ತರಾಗುವುದಕ್ಕಿಂತ ನಾಸ್ತಿಕರಾಗಿರುವುದೇ ಉತ್ತಮ.
 • ಪ್ರತಿಯೊಂದು ಸಲ ನೀವು ದುರ್ಬಲತೆಯ ಅನುಭವ ಪಡೆದಾಗಲೂ ತಿಳಿಯಿರಿ, ನಿಮಗೆ ಮಾತ್ರವಲ್ಲದೆ, ನೀವು ಕೈಗೊಂಡ ಕಾರ್ಯಕ್ಕೂ ಪೆಟ್ಟನ್ನು ಕೊಡುತ್ತಿದ್ದೀರಿ ಎಂದು.
 • ನಾವು ಒಳ್ಳೆಯದನ್ನು ಪ್ರೀತಿಸಲು ಆರಂಭಿಸಿದರೆ, ನಮ್ಮಲ್ಲಿರವ ಕೆಟ್ಟದೆಲ್ಲಾ ಮಾಯಾವಾಗುತ್ತದೆ.
 • ಸೂರ್ಯ ಚಂದ್ರರನ್ನು, ನಾವು ಹುಟ್ಟಿದ ದಿನದಿಂದಲೂ ನೋಡುತ್ತಿದ್ದೇವೆ. ಆದರೆ ಅವರಂತೆ ಕೆಲಸ ಮಾಡುವುದನ್ನು ಮಾತ್ರ ಕಲಿಯಲಿಲ್ಲ.
 • ವಿಧವೆಯ ಕಣ್ಣೀರನ್ನೂ ಒರಸದ, ಬಡವರ ಬಾಯಿಗೆ ರೊಟ್ಟಿಯ ಚೂರೊಂದನ್ನು ಕೊಡದ ದೇವರ ಅಥವಾ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ.
 • ಯಾವ ಮಾನವನೂ ಒಂದು ಧರ್ಮಕ್ಕಾಗಿ ಜನ್ನವೆತ್ತಿಲ್ಲ. ಅವನದೇ ಅಂತರಂಗದಲ್ಲಿ ಧರ್ಮ ಇದೆ.
 • ಕಾಲ ಕೆಟ್ಟು ಹೊಯಿತು ಎಂದು ಹೇಳುತ್ತಾರೆ, ಆದರೆ ಕಾಲ ಕೆಟ್ಟಿಲ್ಲ, ಕೆಡುವುದೂ ಇಲ್ಲ. ಅದೇ ಸೂರ್ಯ, ಅದೇ ಚಂದ್ರ, ಅದೇ ಭೂಮಿ, ಅದೇ ಲೋಕ, ಆದರೆ ಕೆಟ್ಟಿರುವುದು ಮಾತ್ರ ಜನರ ನಡೆನುಡಿ, ಆಚಾರ ವಿಚಾರಗಳು ಮಾತ್ರ.
 • ಸ್ವಾತಂತ್ರ್ಯವಿಲ್ಲದೆ ಪ್ರೀತಿ ಉದಯಿಸುವುದಿಲ್ಲ.
 • ಹನುಮಂತನ ಶೀಲ ಯಾವಾಗಲೂ ಆದರ್ಶವಾಗಿರಲಿ.
 • ಮನುಷ್ಯನಲ್ಲಿ ಆಗಲೇ ಅಂತರ್ಗತವಾಗಿರುವ ಪರಿಪೂರ್ಣತೆಯನ್ನು ಪ್ರಕಟಿಸುವುದೇ ಶಿಕ್ಷಣ.
 • ಯಾರನ್ನೂ ದ್ವೇಷಿಸದವರು ಭಗವಂತನನ್ನು ಸೇರುತ್ತಾರೆ.
 • ಆಯಸ್ಸು ಅಲ್ಪ. ಪ್ರಪಂಚದ ತೋರಿಕೆಗಳು ಅನಿತ್ಯ, ಆದರೆ ಪರರಹಿತಕ್ಕಾಗಿ ಜೀವಿಸುವವರದೇ ಜೀವನ, ಮಿಕ್ಕವರು ಜೀವ ಶವಗಳು ಮಾತ್ರ.
 • ನೀವೂ ಬದುಕಿ, ಇತರರೂ ಬದುಕಲು ಬಿಡಿ.
 • ಏಳಿ! ಎದ್ದೇಳಿ! ಮಹಾತ್ಮರೆ! ಜಗತ್ತು ದುಃಖದಲ್ಲಿ ಬೇಯುತ್ತಿದೆ ನೀವು ನಿದ್ರಿಸಬಲ್ಲಿರೇನು? ಪವಡಿಸಿರಿವ ಪರಮ಻ತ್ಮರು ಎದ್ದೇಳುವವರಿಗೆ ನಮ್ಮ ಅಂತರಾತ್ಮದಲ್ಲಿರುವ ಭಗವಂತ ನಮ್ಮ ಕರೆಗೆ ಓಗೊಡುವವರೆಗೆ ಕರೆಯುತ್ತಲೇ ಹೋಗೋಣ, ಈ ಜೀವನದಲ್ಲಿ ಬೇರೇನಿದೆ? ಇದಕ್ಕಿಂತ ಹೆಚ್ಚಿನ ಕೆಲಸ ಯಾವುದಿದೆ?


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment