Friday, 16 November 2012

ಶರಣು ಶರಣುವಯ್ಯ ಗಣನಾಯ್ಕ


09:05 |

ಶರಣು ಶರಣುವಯ್ಯ ಗಣನಾಯ್ಕ
ನಮ್ಮ ಕರುಣಾದಿಂದಲಿ ಕಾಯೋ ಗಣನಾಯ್ಕ||

ಎಳ್ಳುಂಡೆ ಜೇನುತುಪ್ಪ ಗಣನಾಯ್ಕ
ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ ||
ಉದ್ದು ಹೋಳಿಗೆ ತಪ್ಪ ಗಣನಾಯ್ಕ
ನಿಮಗೆ ತಪ್ಪಾದೆ ಒಪ್ಪಿಸುವೆ ಗಣನಾಯ್ಕ||

ಗೊನೆಮೇಗ್ಲ ಬಾಳೆಹಣ್ನು ಗಣನಾಯ್ಕ
ನಿಮಗೆ ಕಳಿ ಅಡ್ಕೆ ಚಿಗುರೆಲೆ  ಗಣನಾಯ್ಕ ||
ಕೊಂಬೆಮೇಗ್ಲ ನಿಂಬೆಹಣ್ಣು ಗಣನಾಯ್ಕ
ನಿಮ್ಗೆ ಬಡಗಾಯಿ ಇಡುಗಾಯಿ ಗಣನಾಯ್ಕ||

ಕರ್ಪೂರ ಸಾಂಬ್ರಾಣಿ ಗಣನಾಯ್ಕ
ನಿಮ್ಗೆ ಮರುಗ ಮಲ್ಲಿಗೆ ಜಾಜಿ ಗಣನಾಯ್ಕ ||
ಹಸುರಂಗ ಕಾಲ್ಗಡಗ ಗಣನಾಯ್ಕ
ನಿಮ್ಗೆ ಕುಶಲದ ಮೇಲ್ಕಟ್ಟು ಗಣನಾಯ್ಕ||

ಮೂಷಿಕ ವಾಹನ ಗಣನಾಯ್ಕ
ನಮ ಶಿವನ ಕುಮಾರನಯ್ಯ ಗಣನಾಯ್ಕ||
ನಿನ್ಗೆ ಹೆಂಡ್ರಿಲ್ಲ ಮಕ್ಕಳಿಲ್ಲ ಗಣನಾಯ್ಕ
ನೀ ಎದ್ದು ಬಾರಯ್ಯ ಸಿದ್ಧಿ ಗಣನಾಯ್ಕ ||

ಬಿಲ್ಪತ್ರೆ ವನದಲ್ಲಿ ಗಣನಾಯ್ಕ
ನಿನ್ನ ಧ್ಯಾನ ಮಾಡಿ ನೆನ್ದೇವಯ್ಯ ಗಣನಾಯ್ಕ||
ಕಂಟಕ ಹರ ನೀನು ಗಣನಾಯ್ಕ
ನಮ್ಗೆ ವರವನು ಪಾಲಿಸಯ್ಯ ಗಣನಾಯ್ಕ||

ಕೃಪೆ:
ಸುಪ್ರಸಿದ್ದ ಜನಪದ ಗೀತೆಗಳ ಪುಸ್ತಕ


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment