Friday, 16 November 2012

ರಾಷ್ಟ್ರೀಯ ಲಾಂಛನ


20:21 |

 ನಮ್ಮ ರಾಷ್ಟ್ರೀಯ ಲಾಂಛನವು ಸಾರನಾಥದಲ್ಲಿರುವ ಸಿಂಹ ಸಾಮ್ರಾಜ್ಯದ ಕತ್ತನೆಯ ಪ್ರತಿಕೃತಿಯಾಗಿದೆ. 1950 ಜನವರಿ 26 ರಂದು ದೇಶದ ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಇತರೆಡೆಗಳಲ್ಲಿದ್ದ ಸಾರ್ವಭೌಮ ಕಿರೀಟದ ಲಾಂಛನವನ್ನು ಸ್ಥಾನಪಲ್ಲಟಗೊಳಿಸಿತು.
ಈ ಲಾಂಛನದಲ್ಲಿ, ನಾಲ್ಕು ಸಿಂಹಗಳು ಒಂದು ಚೌಕಟ್ಟಿನ ಮೇಲೇರಿ ನಿಂತಿರುವುದು, ನಮಗೆ ನೋಡಿದರೆ ಮೂರು ಸಿಂಹಗಳು ಕಾಣಿಸುತ್ತವೆ ಹಿಂದೆ ಒಂದು ಸಿಂಹವಿರಿತ್ತದೆ ಮತ್ತು ಮಧ್ಯ ಭಾಗದಲ್ಲಿ ಧರ್ಮಚಕ್ರದ ಕೆತ್ತನೆ, ಬಲ ಭಾಗದಲ್ಲಿ ಒಂದು ಗೂಳಿ,  ಎಡ ಭಾಗದಲ್ಲಿ ಒಂದು ಕುದುರೆ ಮತ್ತು ಅತ್ಯಂತ ಎಡ ಮತ್ತು ಬಲ ಭಾಗಗಳಲ್ಲಿ ಧರ್ಮಚಕ್ರದ ಹೊರ ಭಾಗವನ್ನು ಕಾಣಬಹುದು ಸತ್ಯಮೇದ ಜಯತೆ ಎಂದರೆ ಸತ್ಯ ಮಾತ್ರವೇ ಗೆಲ್ಲುತ್ತದೆ ಎಂಬ ಶಬ್ದಗಳನ್ನು ದೇವನಾಗರಿ ಲಿಪಿಯಲ್ಲಿ ಲಾಂಛನದ ಕೆಳ ಭಾಗದಲ್ಲಿ ಅಂಕಿತ ಮಾಡಿರುತ್ತದೆ.
ಸಿಂಹ ಸಾಮ್ರಾಜ್ಯದ ಮೂಲ ಪ್ರತಿಯನ್ನು ಕಿ.ಪೂ. 242-232 ರಲ್ಲಿ ರಚಿಸಲಾಗಿತ್ತು ಹಾಗೂ ಚಕ್ರವರ್ತಿ ಅಶೋಕನು ಮತ್ತು ಬುದ್ಧನು  ಅದನ್ನು ತನ್ನ ಅನುಯಾಯಿಗಳಿಗೆ ಮೋಕ್ಷಕ್ಕಿರುವ 8 ದಾರಿಗಳನ್ನು ಬೋಧಿಸಿದ ಜಾಗದಲ್ಲಿ ಸ್ಥಾಪಿಸಿದನು. ಈ ವಿಚಾರದಿಂದಾಗಿ ರಾಷ್ಟ್ರೀಯ ಲಾಂಛನವು ಐತಿಹಾಸಿಕ ಮಹತ್ವವನ್ನು ಹೊಂದಿದೆ ಹಾಗೂ ಭಾರತದ ಉದ್ದೇಶಗಳಾದ ವಿಶ್ವಶಾಂತಿ ಹಾಗೂ ವಿಶ್ವ ಭ್ರಾತೃತ್ವವನ್ನು ಬಿಂಬಿಸುತ್ತದೆ.


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment