Thursday, 22 November 2012

ನಿಂಬೀಯ ಬನಾದ ಮ್ಯಾಗಳ


07:01 |

ನಿಂಬೀಯ ಬನಾದ ಮ್ಯಾಗಳ
ಚಂದ್ರಮಾ ಚoಡಾಡಿದ||

ಎದ್ದೋನೇ ನಿಮ ಧ್ಯಾನ ಏಳುತಲೀ ನಿಮಗ್ಯಾನ
ಸಿದ್ಧಾರ ಧ್ಯಾನ ಸಿವುಗ್ಯಾನ| ಮಾಸಿವನೆ
ನಿದ್ರೆಕಣ್ಣಾಗೆ ನಿಮ ಗ್ಯಾನ ||ನಿಂಬೀಯಾ||

ಆರೇಲೇ ಮಾವಿನ ಬೇರಾಗಿ ಇರುವೋಳೆ
ವಾಲ್ಗಾದ ಸದ್ದೀಗೆ ಒದಾಗೋಲೆ| ಸರಸತಿಯೇ
ನಮ್ ನಾಲಿಗೆ ತೊಡರ ಬಿಡಿಸವ್ವಾ||ನಿಂಬೀಯಾ||

ಎಂಟೀಲೀ ಮಾವಿನ ದoಟಾಗಿ ಇರುವೋಳೆ
ಗಂಟೆ ಸದ್ದೀಗೆ ಒದಾಗೋಳೆ | ಸರಸತಿಯೇ
 ನಮ್ ಗಂಟಲ ತೊಡರ ಬಿಡಿಸವ್ವಾ ||ನಿಂಬೀಯಾ||

ರಾಗಿ ಬೀಸೊ ಕಲ್ಲೇ ರಾಜಾನ ಬಡಿಗಲ್ಲೆ
ರಾಯಾ ಅಣ್ಣಯ್ನ  ಅರಮನೆ | ರಾಗೀಕಲ್ಲೆ
ನೀ ರಾಜಾ ಬೀದಿಗೆ ದನಿದೋರೆ ||ನಿಂಬೀಯಾ||
 ಕಲ್ಲವ್ವ ಮಾತಾಯಿ ನೆಲ್ಲವ್ವ ರಾಗೀಯ
ಜಲ್ಲಜಲ್ಲನೇ ಉದುರವ್ವ | ನಾ ನಿನಗೆ
ಬೆಲ್ಲದಾರತಿಯ ಬೆಳಗೇನೆ ||ನಿಂಬೀಯಾ||

ಕೃಪೆ:
ಸುಪ್ರಸಿದ್ದ ಜನಪದ ಗೀತೆಗಳ ಪುಸ್ತಕ


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment