Thursday, 22 November 2012

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ


00:11 |

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳೆಯೊಳ| ಭೂಮಿತ್ತಾಯ
ಎದ್ದೊಂದು ಘಳಿಗೇ ನೆನೆದೇನೋ ||

ಏಳ್ಳು ಕೊಟ್ಟವ್ವಾಗೆ ಎಲ್ಲಾ ಭಾಗ್ಯವು ಬರಲಿ
ಎಳ್ಳಕ್ಕಿ ಮೇಲೆ ಮಗ ಬರಲಿ | ಆ ಮನೆಗೆ
ಮಲ್ಲಿಗೆ ಮುಡಿಯೋ ಸೊಸೆ ಬರಲಿ ||

ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗಿಯ
ಜಲ್ಲ ಜಲ್ಲನೆ ಉದುರಮ್ಮ| ನಾ ನಿನಗೆ
ಬೆಲ್ಲದಾರತಿಯಾ ಬೆಳಗೇನಾ ||

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
ಕಲ್ಲು ಕಾವೇರಿ ಕಂಪನಿಯ | ನಿನ್ದಾರೆ
ಹೊತ್ತಿದ್ದ ಪಾಪಾ ಪರಿಹಾರ||

ಕೃಪೆ:
ಸುಪ್ರಸಿದ್ದ ಜನಪದ ಗೀತೆಗಳ ಪುಸ್ತಕ


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment