Friday, 23 November 2012

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ವಿಜೇತರು


05:14 | , ,

'ಭಾರತೀಯ ಜ್ಞಾನಪೀಠ' ಎಂಬ ಸಂಸ್ಥೆ ಪ್ರತಿ ವರ್ಷವೂ ನೀಡುವ ಜ್ಞಾನಪೀಠ ಪ್ರಶಸ್ತಿಯು ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಹಾಗೂ ಅತ್ಯುನ್ಯತ ಗೌರವದ ಸ್ಥಾನ ಪಡೆದಿರುವ ಒಂದು ಪ್ರಶಸ್ತಿಯಾಗಿದೆ.
ಈ ಪ್ರಶಸ್ತಿಯನ್ನು ಪ್ರತಿ ವರ್ಷ ದೇಶದ ಒಬ್ಬ ಸಾಹಿತಿಗೆ ನೀಡಲಾಗುವುದು ಈ ಮಾನ್ಯರು ಯಾವುದೇ ಭಾರತೀಯ ಭಾಷೆಗೆ ಸೇರಿರಬಹುದು.
ಜ್ಞಾನಪೀಠ ಪ್ರಶಸ್ತಿಯು ಎರಡೂವರೆ ಲಕ್ಷ ರೂಪಾಯಿಗಳ ನಗದು ಬಹುಮಾನ ಮತ್ತು ವಾಗ್ದೇವಿಯ ಪ್ರತಿಮೆಯನ್ನು ಒಳಗೊಂಡಿದೆ. 1965 ರಿಂದ ಜ್ಞಾನಪೀಠ ಪ್ರಶಸ್ತಿ ಘೋಷಣೆ ಪ್ರಾರಂಭವಾಯಿತು. ಕನ್ನಡಕ್ಕೆ 8ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ 8 ಜನ ಮಹನಿಯರುಗಳು.

1. ಕೆ.ವಿ. ಪುಟ್ಟಪ್ಪ


ಕಾವ್ಯನಾಮ: ಕುವೆಂಪು, .
ನಿಜನಾಮ/ಪೂರ್ಣನಾಮ: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : 'ಶ್ರೀ ರಾಮಾಯಣ ದರ್ಶನಂ'
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1968.

2. ದ.ರಾ.ಬೇಂದ್ರೆ

ಕಾವ್ಯನಾಮ: ಅಂಬಿಕಾತನಯದತ್ತ
ನಿಜನಾಮ/ಪೂರ್ಣನಾಮ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ.
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : 'ನಾಕುತಂತಿ ಕವನ ಸಂಕಲನ'
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1974.

3. ಕೆ. ಶಿವರಾಮ ಕಾರಂತ

ಕಾವ್ಯನಾಮ: ಶಿವರಾಮ ಕಾರಂತ
ನಿಜನಾಮ/ಪೂರ್ಣನಾಮ:ಕೋಟ ಶಿವರಾಮ ಕಾರಂತ
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : 'ಮೂಕಚ್ಚಿಯ ಕನಸುಗಳು'
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1978.

4. ಡಾ. ಮಾಸ್ತಿ

ಕಾವ್ಯನಾಮ: ಶ್ರೀನಿವಾಸ
ನಿಜನಾಮ/ಪೂರ್ಣನಾಮ : ಮಾಸ್ತಿ ವೆಂಕಟೇಶ ಻ಅಯ್ಯಂಗಾರ್.
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : 'ಚಿಕ್ಕವೀರ ರಾಜೇಂದ್ರ'
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1983.

5. ಡಾ. ವಿ.ಕೃ.ಗೋಕಾಕ್

ಕಾವ್ಯನಾಮ: ವಿನಾಯಕ
ನಿಜನಾಮ/ಪೂರ್ಣನಾಮ : ವಿನಾಯಕ ಕೃಷ್ಣ ಗೋಕಾಕ್
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : 'ಸಮಗ್ರ ಸಾಹಿತ್ಯ'
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1991.

6. ಡಾ. ಯು.ಆರ್. ಅನಂತಮೂರ್ತಿ

ಕಾವ್ಯನಾಮ:
ನಿಜನಾಮ/ಪೂರ್ಣನಾಮ : ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ.
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : 'ಸಮಗ್ರ ಸಾಹಿತ್ಯ'
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1995.

7. ಡಾ. ಗಿರೀಶ್ ಕಾರ್ನಾಡ್

ಕಾವ್ಯನಾಮ:
ನಿಜನಾಮ/ಪೂರ್ಣನಾಮ : ಗಿರೀಶ ರಘುನಾಥ ಕಾರ್ನಾಡ್.
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : 'ಸಮಗ್ರ ಸಾಹಿತ್ಯ'
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1999.

8. ಡಾ. ಚಂದ್ರಶೇಖರ ಕಂಬಾರ.

ಕಾವ್ಯನಾಮ:
ನಿಜನಾಮ/ಪೂರ್ಣನಾಮ : ಚಂದ್ರಶೇಖರ ಕಂಬಾರ.
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : 'ಸಮಗ್ರ ಸಾಹಿತ್ಯ'
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 2012.
You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment