ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕಿಲ್ಲ ಸಮಾಧಾನ
ಅವನಿಗೆ ಎಂಥ ಬಿಗುಮಾನ
ಅವನೆ ನನ್ನ ಗೆಣೆಕಾರ||
ಇಂದ್ರಲೋಕ್ದಲಿಲ್ಲ ಕಣ್ರಿ
ಚಂದ್ರಲೋಕ್ದಲಿಲ್ಲ ಕಣ್ರಿ
ಮೂರುಲೋಕ್ದಲಿಲ್ಲ ಕಣ್ರಿ
ಅವನೆ ನನ್ನ ಗೆಣೆಕಾರ||
ರೂಪ್ದಲವನು ಚಂದ್ರ ಕಣ್ರಿ
ರೂಪ್ದಲವನು ಇಂದ್ರ ಕಣ್ರಿ
ಕೇರಿಗೆಲ್ಲ ಒಬ್ನೆ ಕಣ್ರಿ
ಅವನೆ ನನ್ನ ಗೆಣೆಕಾರ||
ಜಾತ್ರೆಲ್ ಅವನ ಕಂಡೆ ಕಣ್ರಿ
ಛತ್ರಿ ಮುಚ್ಚಿ ನಿಂತೆ ಕಣ್ರಿ
ಪಕ್ಕಕ್ ಬಂದು ನಿಂತ ಕಣ್ರಿ
ಅವನೆ ನನ್ನ ಗೆಣೆಕಾರ ||
ಮಲ್ಲೆ ಹೂವ ತಂದ ಕಣ್ರಿ
ತುರುಬೀನಲ್ಲಿ ಇಟ್ಟ ಕಣ್ರಿ
ಮೈಯೆಲ್ಲ ಜುಂ ಅಂತು
ಅವನೆ ನನ್ನ ಗೆಣೆಕಾರ ||
ಚಾವಡಿಗ್ ಬಂದು ನಿಂತ ಕಣ್ರಿ
ತಾಳಿ ಚಿನ್ನ ತಂದ ಕಣ್ರಿ
ನಂಗು ಅವನ್ಗು ಮದ್ವೆ ಕಣ್ರಿ
ಅವ್ನೆ ನನ್ನ ಯಜಮಾನ||
ಕೃಪೆ:
ಸುಪ್ರಸಿದ್ದ ಜನಪದ ಗೀತೆಗಳ ಪುಸ್ತಕ
You Might Also Like :
If you Like This Article,Then kindly linkback to this article by copying one of the codes below.
URL Of Post:
Paste This HTML Code On Your Page:
0 comments:
Post a comment