- ದೇವರ ಪ್ರೀತಿಯನ್ನು ಗಳಿಸಿಕೊಳ್ಳುವುದಕ್ಕೆ ಸುಲಭಬಾದ ಮಾರ್ಗವೊಂದಿದೆ. ಅದೆಂದರೆ ದೇವರಿಂದ ಸೃಷ್ಟಿಯಾದ ಎಲ್ಲವನ್ನು, ಎಲ್ಲರನ್ನೂ, ಪ್ರಿತಿಸುವುದು.
- ದಾನವನ್ನು ಮತ್ತು ಪ್ರಾರ್ಥನೆಯನ್ನು ಗುಟ್ಟಾಗಿ ಮಾಡಬೇಕು.
- ಕೇವಲ ಶ್ರೀಮಂತಿಕೆಯಿಂದಲೇ ದೇವರ ಕರುಣೆಗಳಿಸುವುದು ಅಸಾಧ್ಯ.
- ನಿಮ್ಮಲ್ಲಿ ಸಾಸುವೆ ಕಾಳಿನಷ್ಟು ಆತ್ಮವಿಶ್ವಾಸವಿದ್ದರೂ ಸಾಕು; ನಿಮಗೆ ಯಾವ ಕೆಲಸವೂ ಕಷ್ಟ ಅಲ್ಲ.
- ವೊದಲು ನಿನ್ನಲ್ಲಿರುವ ತಪ್ಪುಗಳನ್ನು ನೀನು ತಿದ್ದಿಕೋ; ಅನಂತರ ಇತರರ ತಪ್ಪುಗಳನ್ನು ತಿದ್ದುವುದು ನಿನಗೆ ಗೊತ್ತಾಗುತ್ತದೆ.
- ಇತರರು ನಿನ್ನನ್ನು ಹೇಗೆ ನಡೆಸಿಕೊಳಬೇಕೆಂದು ನೀನು ಬಯಸುತ್ತೀಯೋ ಹಾಗೆಯೇ ಇತರರನ್ನು ನೀನು ನಡೆಸಿಕೋ.
- ಬೈದರೆ ಬೈದವರ ಬಾಯಿ ನೋಯುವುದು; ಅದರಿಂದ ಇತರರಿಗೆ ಏನಾಗುವುದು?
- ಕಣ್ಣಿನಲ್ಲಿ ಹೆಮ್ಮೆ ಬೇಡ, ನಾಲಿಗೆಯಲ್ಲಿ ಸುಳ್ಳುಬೇಡ ಕೈ ಕೊಳೆಯಾಗದೆರಲಿ, ಮನಸ್ಸು ಕಟ್ಟದನ್ನು ಯೋಚಿಸದಿರಲಿ. ಕಾಲು ಕೆಡಕಿನತ್ತ ಹೋಗದಿರಲಿ, ಬಾಯಿ ಸುಳ್ಳು ಹೇಳದಿರಲಿ, ದೇಹ ದೇವನಿಗೆ ಸಲ್ಲಲಿ.
- ಇತರರ ಕಷ್ಟವನ್ನು ನೋಡಿ ನಗುವುದಕ್ಕೆ ಕಣ್ಣು ನನಗಿರದಿರಲಿ. ಇತರರನ್ನು ನಿಂದಿಸುವ ನಾಲಿಗೆಯು ನನಗಿರದಿರಲಿ. ಇತರರ ಬಗ್ಗೆ ಕೆಟ್ಟದನ್ನು ಕೇಳುವ ಕಿವಿ ನನಗಿರದಿರಲಿ. ಇತರರದನ್ನು ಅಪಹರಿಸುವ ಕೈಗಳು ನನಗಿರದಿರಲಿ.
- ಕಣ್ಣು ದೇಹದ ದೀಪ; ನಿನ್ನ ಕಣ್ಣು ನೆಟ್ಟಗಿದ್ದರೆ ನಿನ್ನ ಇಡೀ ದೇಹ ಬಳಕಿನಿಂದ ತುಂಬಿರುತ್ತದೆ. ನಿನ್ನ ಕಣ್ಣು ಕೆಟ್ಟಿದ್ದರೆ ನಿನ್ನ ಇಡೀ ದೇಹ ಕತ್ತಲಲ್ಲಿ ಮುಳುಗಿರುತ್ತದೆ.
- ಬೇಡು; ಬೇಡಿದ್ದು ನಿನಗೆ ದೊರೆಯುತ್ತದೆ ಹುಡುಕು; ಹುಡುಕಿದ್ದು ನಿನಗೆ ದೊರೆಯುತ್ತದೆ. ತಟ್ಟು ನೀ ತಟ್ಟುವ ಬಾಗಿಲು ನಿನಗೆ ತೆರೆಯುತ್ತದೆ.
- ನಾಶದ ದಾರಿ ದೊಡ್ಡದಾಗಿದೆ ಮತ್ತು ಬಹುಪಾಲು ಜನರು ಆ ದಾರಿಯಲ್ಲಿ ನಡೆಯುತ್ತಾರೆ. ಆದ್ದರಿಂದ ನೀನು ಇಕ್ಕಟ್ಟಾದ ಬಾಗಿಲನ್ನು ಪ್ರವೇಶಿಸು. ಏಕೆಂದರೆ ನಿಜವಾದ ಬದುಕಿನ ದಾರಿ ಕಠಿಣ ಮತ್ತು ಅದಕ್ಕೆ ಹೋಗುವ ಬಾಗಿಲು ಇಕ್ಕಟ್ಟಾದದ್ದು; ಕೆಲವರು ಮಾತ್ರ ಅಲ್ಲಿ ನಡೆಯುತ್ತಾರೆ.
- ಮುಳ್ಳು ಗಿಡಗಳಿಂದ ದ್ರಾಕ್ಷಿಯನ್ನಾಗಲಿ, ಅಂಜೂರವನ್ನಾಗಲಿ ಪಡೆಯಲು ಸಾಧ್ಯವೆ? ಹಾಗೆಯೇ ಒಳ್ಳೆಯ ಮರದಿಂದ ಒಳ್ಳೆಯ ಹಣ್ಣೂ, ಕೆಟ್ಟ ಮರದಿಂದ ಕೆಟ್ಟ ಹಣ್ಣೂ ದೊರೆಯುತ್ತದೆ.
- ಯಾರು ಕ್ಷೀಣ ಚೈತನ್ಯರೋ ಅವರು ಧನ್ಯರು, ಯಾಕೆಂದರೆ ಅವರದು ಈ ದೇವರ ರಾಜ.
- ಯಾರು ದುಃಖಿಗಳೋ ಅವರು ಧನ್ಯರು, ಯಾಕೆಂದರೆ ಅವರಿಗೆ ಸಮಾಧಾನ ದೊರೆಯುತ್ತದೆ.
- ಯಾರು ದೀನರೋ ಅವರು ಧನ್ಯರು, ಯಾಕೆಂದರೆ ಅವರು ಈ ನೆಲದ ಒಡೆತನವನ್ನು ಪಡೆಯುತ್ತಾರೆ.
- ಯಾರು ಋಜುತ್ವಕ್ಕಾಗಿ ಹಸಿದು ಬಾಯಾರಿದ್ದಾರೆಯೋ ಅವರು ಧನ್ಯರು, ಯಾಕೆಂದರೆ ಅವರು ತೃಪ್ತಿಯನ್ನು ಹೊಂದುತ್ತಾರೆ.
- ಯಾರು ದಯವುಳ್ಳವರೋ ಅವರು ಧನ್ಯರು, ಯಾಕೆಂದರೆ ಅವರು ಕರುಣೆಯನ್ನು ಹೊಂದಿರುತ್ತಾರೆ.
- ಯಾರು ಶುದ್ಧ ಹೃದಯರೋ ಅವರು ಧನ್ಯರು, ಯಾಕೆಂದರೆ ಅವರು ದೇವರನ್ನು ಕಾಣುತ್ತಾರೆ.
- ಯಾರು ಶಾಂತಿದೂತರೋ ಅವರು ಧನ್ಯರು, ಯಾಕೆಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುತ್ತಾರೆ.
- ಯಾರು ಸತ್ಯಕ್ಕಾಗಿ ಹಿಂಸೆಗೆ ಒಳಗಾಗುತ್ತರೋ ಅವರು ಧನ್ಯರು, ಯಾಕೆಂದರೆ ಅವರದು ಈ ಸ್ವರ್ಗದ ರಾಜ್ಯ.
You Might Also Like :
If you Like This Article,Then kindly linkback to this article by copying one of the codes below.
URL Of Post:
Paste This HTML Code On Your Page:
0 comments:
Post a comment