ಯಾಕೆ ಬಡಿದಾಡ್ತಿ ತಮ್ಮ
ಮಾಯಾ ಮೆಚ್ಚಿ ಸಂಸಾರ ನೆಚ್ಚಿ
ನೀನೋಗದರಿಯೆ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ ||
ಹೆಂಡ್ರು ಮಕ್ಕಳಿರುವರು ತಮ್ಮ ಎಲ್ಲಿ ತನಕ
ಇದ್ರೆ ತಿಂಬೋ ತನಕ
ಸತ್ತಾಗ ಬರುವರು ತಮ್ಮ ಗುಳಿ ತನಕ
ಮಣ್ಣು ಮುಚ್ಚೋ ತನಕ ||
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ
ಬದುಕೀ ಬೆಳೆಯೋ ತನಕ
ಸತ್ತಾಗ ಬರುವರು ತಮ್ಮ ಗುಣಿತನಕ
ಮಣ್ಣು ಮುಚ್ಚೋ ತನಕ ||
ನೆಂಟ್ರುಯಿಸ್ಟು ಬರುವರು ತಮ್ಮ ಎಲ್ಲಿತನಕ
ಇದ್ರೆ ತಿನ್ನೊತನಕ ತಿಂದು ತೇಗೋತನಕ
ಸತ್ತಾಗ ಬರುವರು ತಮ್ಮ ಗುಣಿತನಕ
ಮಣ್ಣು ಮುಚ್ಚೋ ತನಕ ||
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ||
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ||
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ ||
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕೆ ||
ಕೃಪೆ:
ಸುಪ್ರಸಿದ್ದ ಜನಪದ ಗೀತೆಗಳ ಪುಸ್ತಕ
ಮಾಯಾ ಮೆಚ್ಚಿ ಸಂಸಾರ ನೆಚ್ಚಿ
ನೀನೋಗದರಿಯೆ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ ||
ಹೆಂಡ್ರು ಮಕ್ಕಳಿರುವರು ತಮ್ಮ ಎಲ್ಲಿ ತನಕ
ಇದ್ರೆ ತಿಂಬೋ ತನಕ
ಸತ್ತಾಗ ಬರುವರು ತಮ್ಮ ಗುಳಿ ತನಕ
ಮಣ್ಣು ಮುಚ್ಚೋ ತನಕ ||
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ
ಬದುಕೀ ಬೆಳೆಯೋ ತನಕ
ಸತ್ತಾಗ ಬರುವರು ತಮ್ಮ ಗುಣಿತನಕ
ಮಣ್ಣು ಮುಚ್ಚೋ ತನಕ ||
ನೆಂಟ್ರುಯಿಸ್ಟು ಬರುವರು ತಮ್ಮ ಎಲ್ಲಿತನಕ
ಇದ್ರೆ ತಿನ್ನೊತನಕ ತಿಂದು ತೇಗೋತನಕ
ಸತ್ತಾಗ ಬರುವರು ತಮ್ಮ ಗುಣಿತನಕ
ಮಣ್ಣು ಮುಚ್ಚೋ ತನಕ ||
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ||
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ||
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ ||
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕೆ ||
ಕೃಪೆ:
ಸುಪ್ರಸಿದ್ದ ಜನಪದ ಗೀತೆಗಳ ಪುಸ್ತಕ
You Might Also Like :
If you Like This Article,Then kindly linkback to this article by copying one of the codes below.
URL Of Post:
Paste This HTML Code On Your Page:
0 comments:
Post a comment